ಕಲಬುರಗಿ: ಇಬ್ಬರು ಮಕ್ಕಳಿಗೆ ಬೆಂಕಿಹಚ್ಚಿ ತಾಯಿ ಆತ್ಮಹತ್ಯೆ
* ಕಲಬುರಗಿ ನಗರದಲ್ಲಿ ನಡೆದ ಘಟನೆ
* ಗಂಡನ ಮನೆಯವರ ಕಿರುಕುಳದಿಂದ ಬೇಸತ್ತಿದ್ದ ಗೃಹಿಣಿ
* ಪತಿ ವಂಸತ ಶರ್ಮಾ, ಆತನ ಪೋಷಕರ ವಿರುದ್ಧ ದೂರು
ಕಲಬುರಗಿ(ಅ.27): ಗಂಡನ ಮನೆಯವರ ಕಿರುಕುಳದಿಂದ(Harassment) ಬೇಸತ್ತು ಗೃಹಿಣಿಯೊಬ್ಬಳು(Housewife) ಇಬ್ಬರು ಮಕ್ಕಳೊಂದಿಗೆ ಬೆಂಕಿ(Fire) ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದಲ್ಲಿ(Kalaburagi) ನಿನ್ನೆ(ಮಂಗಳವಾರ) ನಡೆದಿದೆ.
ಘಟನೆಯಲ್ಲಿ ತಾಯಿ, 2 ವರ್ಷದ ಮಗು ಮೃತಪಟ್ಟಿದ್ದರೆ, ಮೂರು ವರ್ಷದ ಗಂಡು ಮಗು ಸಾವು-ಬದುಕಿನ ನಡುವೆ ಹೋರಾಟ ಮಾಡುತ್ತಿದೆ ಎಂದು ತಿಳಿದು ಬಂದಿದೆ.
ಕಲಬುರಗಿ: 3 ಹೆಣ್ಣು ಮಕ್ಕಳೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ, ಒಂದು ಮಗು ರಕ್ಷಣೆ
ದೀಕ್ಷಾ ವಸಂತ ಶರ್ಮಾ (26) ತನ್ನಿಬ್ಬರು ಮಕ್ಕಳಾದ ಧನಂಜಯ (3), ಸಿಂಚನಾ (2) ಜತೆಗೆ ಬೆಂಕಿ ಹಚ್ಚಿ ಆತ್ಮಹತ್ಯೆಗೆ ಯತ್ನಿಸಿದವರು. ದೀಕ್ಷಾ ಮತ್ತು ಸಿಂಚನಾ ಸ್ಥಳದಲ್ಲೇ ಮೃತಪಟ್ಟರೆ, ಧನಂಜಯ ಜೀವನ್ಮರಣ ಹೋರಾಟದಲ್ಲಿದ್ದಾನೆ. ದೀಕ್ಷಾಗೆ ವರದಕ್ಷಿಣೆ ಕಿರುಕುಳ ನೀಡುತ್ತಿತ್ತು ಎನ್ನಲಾಗಿದೆ. ಪತಿ ವಂಸತ ಶರ್ಮಾ, ಆತನ ಪೋಷಕರ ವಿರುದ್ಧ ದೂರು(Complaint) ನೀಡಲಾಗಿದೆ.
ಇತ್ತೀಚೆಗಷ್ಟೇ ಕಲಬುರಗಿ ಜಿಲ್ಲೆಯ ಆಳಂದ(Aland) ತಾಲೂಕಿನ ಮಾಡ್ಯಾಳ ಗ್ರಾಮದಲ್ಲಿಯೂ ಕೂಡ ಮೂರು ಹೆಣ್ಣು ಮಕ್ಕಳೊಂದಿಗೆ ಬಾವಿಗೆ ಜಿಗಿದು ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಘಟನೆಯಲ್ಲಿ ತಾಯಿ, ಇಬ್ಬರು ಮಕ್ಕಳು ಸಾವನ್ನಪ್ಪಿದ್ದು(Death), ಓರ್ವ ಮಗು ಬುದಕುಳಿದಿತ್ತು.