Asianet Suvarna News Asianet Suvarna News

ಬೆಳಗ್ಗೆ ಟೀ ಕೊಡೋದು ಲೇಟಾಯ್ತು ಅಂತ ಪತ್ನಿ ಜತೆ ಜಗಳವಾಡಿ ಕತ್ತಿಯಿಂದ ತಲೆ ಕಡಿದ ಪಾಪಿ!

ದಿನಗೂಲಿ ಕಾರ್ಮಿಕನಾದ ಧರಂವೀರ್ ತನ್ನ ಪತ್ನಿ ಸುಂದರಿಯ ಬಳಿ 2 ಬಾರಿ ಟೀ ಕೇಳಿದ್ದಾನೆ. ಆದರೆ, ಅದಕ್ಕೆ ಸ್ವಲ್ಪ ಸಮಯ ಬೇಕು ಎಂದಿದ್ದಕ್ಕೆ ಸಿಟ್ಟಿಗೆದ್ದು ಕೊಲೆ ಮಾಡಿದ್ದಾರೆ ಎಂದು ವರದಿಯಾಗಿದೆ.

morning tea delayed man beheads wife with sword in uttar pradesh s ghaziabad ash
Author
First Published Dec 21, 2023, 11:15 AM IST

ಘಾಜಿಯಾಬಾದ್ (ಡಿಸೆಂಬರ್ 21, 2023): ಉತ್ತರ ಪ್ರದೇಶದಲ್ಲಿ ಟೀ ವಿಚಾರಕ್ಕೆ ಗಂಟ - ಹೆಂಡತಿ ನಡುವೆ ಜಗಳ ಆರಂಭವಾಗಿದ್ದು ಕೊಲೆಯಲ್ಲಿ ಅಂತ್ಯವಾಗಿದೆ. 52 ವರ್ಷದ ವ್ಯಕ್ತಿ ತನ್ನ ಹೆಂಡತಿಯ ಶಿರಚ್ಚೇದವನ್ನೇ ಮಾಡಿರುವ ಘಟನೆ ಘಾಜಿಯಾಬಾದ್‌ ಜಿಲ್ಲೆಯ ಭೋಜಪುರ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ. 

ದಿನಗೂಲಿ ಕಾರ್ಮಿಕನಾದ ಧರಂವೀರ್ ತನ್ನ ಪತ್ನಿ ಸುಂದರಿಯ ಬಳಿ 2 ಬಾರಿ ಟೀ ಕೇಳಿದ್ದಾನೆ. ಆದರೆ, ಅದಕ್ಕೆ ಸ್ವಲ್ಪ ಸಮಯ ಬೇಕು ಎಂದಿದ್ದಕ್ಕೆ ಸಿಟ್ಟಿಗೆದ್ದಿದ್ದಾನೆ. ನಂತರ ತೀವ್ರ ಜಗಳ ನಡೆದಿದ್ದು, ಈ ಸಂದರ್ಭದಲ್ಲಿ ಧರಂವೀರ್ ಕತ್ತಿಯಿಂದ ತನ್ನ ಹೆಂಡತಿಯನ್ನು ಹಿಂದಿನಿಂದ ಕೊಂದಿದ್ದು, ಸುಂದರಿ ನೆಲಕ್ಕೆ ಕುಸಿದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ರಶ್ಮಿಕಾ ಮಂದಣ್ಣ ಡೀಪ್ ಫೇಕ್ ವಿಡಿಯೋ ಪ್ರಕರಣ, ದೆಹಲಿಯಲ್ಲಿ ನಾಲ್ವರು ಪೊಲೀಸ್ ವಶಕ್ಕೆ!

ಬೆಳಗ್ಗೆ 6 ಗಂಟೆ ಸುಮಾರಿಗೆ ಎದ್ದ ಸುಂದರಿ ಅಡುಗೆ ಮನೆಯಲ್ಲಿ ಚಹಾ ಮಾಡಲು ಆರಂಭಿಸಿದರು. ಕೆಲವೇ ನಿಮಿಷಗಳ ನಂತರ ಧರಂವೀರ್ ಎಚ್ಚರಗೊಂಡು ಒಂದು ಕಪ್ ಚಹಾಕ್ಕಾಗಿ ಆಕೆಯನ್ನು ಕೇಳಿದನು. ಈ ದಂಪತಿಗೆ 4 ಮಕ್ಕಳಿದ್ದು, (ಮೂರು ಗಂಡು ಮತ್ತು ಒಂದು ಹೆಣ್ಣು ಮಗು) ಮತ್ತೊಂದು ಕೋಣೆಯಲ್ಲಿ ಮಲಗಿದ್ದರು ಎಂದು ಅವರು ಹೇಳಿದ್ದರು. 

ಸುಮಾರು ಐದು ನಿಮಿಷಗಳ ನಂತರ, ಧರಂವೀರ್ ಮತ್ತೆ ಟಿ ಕೇಳಿದ್ದು, ಹಾಗೂ ಅಉಗೆ ಮನೆಗೆ ಹೋಗಿದ್ದಾರೆ. ಆದರೆ, ಚಹಾ ಸಿದ್ಧವಾಗಲು ಇನ್ನೂ 10 ನಿಮಿಷಗಳು ತೆಗೆದುಕೊಳ್ಳುತ್ತದೆ ಎಂದು ಅವನ ಹೆಂಡತಿ ಹೇಳಿದಾಗ ಕೋಪಗೊಂಡು ಪಾತ್ರೆಗಳನ್ನು ಎಸೆದಿದ್ದಾರೆ ಎಂದು ಎಂದು ಡಿಸಿಪಿ (ಗ್ರಾಮೀಣ) ವಿವೇಕ್ ಯಾದವ್‌ ಮಾಹಿತಿ ನೀಡಿದ್ದಾರೆ.

ಅಷ್ಟೇ ಅಲ್ಲದೆ, ಬಳಿಕ ಕತ್ತಿಯೊಂದಿಗೆ ಅಡುಗೆ ಮನೆಗೆ ಬಂದಿದ್ದು, ಸುಂದರಿ ಒಲೆಯ ಮೇಲೆ ಚಹಾ ಮಾಡುತ್ತಿದ್ದಾಗ, ಹಿಂದಿನಿಂದ ಕೊಲೆ ಮಾಡಿದ್ದಾರೆ ಎಂದು ಪೊಲೀಸ್‌ ಅಧಿಕಾರಿ ಹೇಳಿದ್ದಾರೆ. ಆಕೆಯ ಕೂಗಿನಿಂದ ನಿದ್ದೆಯಿಂದ ಹೊರಬಂದ ಮಕ್ಕಳು ತಮ್ಮ ತಾಯಿಯನ್ನು ರಕ್ಷಿಸಲು ಪ್ರಯತ್ನಿಸಿದರು. ಆದರೆ ಧರಂವೀರ್ ಅವರ ಮೇಲೆಯೂ ಕತ್ತಿಯನ್ನು ಬೀಸಿದ ಕಾರಣ ಅವರು ಭಯದಿಂದ ತಮ್ಮ ಕೋಣೆಗೆ ಹಿಂತಿರುಗಿದರು ಎಂದೂ ವಿವೇಕ್‌ ಯಾದವ್‌ ತಿಳಿಸಿದ್ದಾರೆ.

ಗಂಡನಿಂದ ಹೆಂಡ್ತಿ, ಆಕೆಯ ಅಪ್ಪ ಹಾಗೂ ನಾಲ್ವರ ಕೊಚ್ಚಿ ಕೊಲೆ

ದಂಪತಿಯ ಮಗನೊಬ್ಬ ಸೈನಿಕನಾಗಿದ್ದು, ಆತ ಪೊಲೀಸರಿಗೆ ಕರೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಹಾಗೂ, ಮಾಧ್ಯಮಗಲೊಂದಿಗೆ ಮಾತನಾಡಿದ ಆತ, ನನ್ನ ತಂದೆ ಆಗಾಗ ಟೀ ಕುಡಿಯಲು ಜಗಳವಾಡುತ್ತಿದ್ದರು, ದಿನಕ್ಕೆ ಕನಿಷ್ಠ 5-6 ಬಾರಿ ಚಹಾ ಕುಡಿಯುವ ಅಭ್ಯಾಸ  ಹೊಂದಿದ್ದಾರೆ. ನನ್ನ ತಾಯಿ ತುಂಬಾ ಬಾರಿ ಚಹಾ ಮಾಡಲು ನಿರಾಕರಿಸಿದರೆ ಅಥವಾ ನಿರೀಕ್ಷೆಗಿಂತ ಹೆಚ್ಚು ಸಮಯ ತೆಗೆದುಕೊಂಡರೆ ಅವರು ಕೂಗಾಡುತ್ತಿದ್ದರು. ಆದರೆ ನನ್ನ ತಾಯಿಗೆ ಹೊಡೆಯುವುದನ್ನು ನಾನು ನೋಡಿರಲಿಲ್ಲ. ಆಕೆಯ ಮರತದೇಹ ನೋಡಿದಾಗ ನಾವು ಆಘಾತಕ್ಕೊಳಗಾಗಿದ್ದೆವು. ಗಾಯಗಳಿಂದ ರಕ್ತ ಹರಿಯುತ್ತಿತ್ತು ಎಂದಿದ್ದಾರೆ. 

ಈ ಪ್ರಕರಣ ಸಂಬಂಧ ಪೊಲೀಸರು ಆರೋಪಿ ಬಂಧಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ. ಹಾಗೂ, ಮಹಿಳೆಯ ಕುಟುಂಬದ ಸದಸ್ಯರ ದೂರಿನ ಆಧಾರದ ಮೇಲೆ, ಎಫ್ಐಆರ್ ದಾಖಲಿಸಲಾಗಿದೆ. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದೂ ಡಿಸಿಪಿ (ಗ್ರಾಮೀಣ) ವಿವೇಕ್‌ ಯಾದವ್ ತಿಳಿಸಿದ್ದಾರೆ.  


 

Latest Videos
Follow Us:
Download App:
  • android
  • ios