ವಿಷಾಹಾರ ಸೇವಿಸಿ 55ಕ್ಕೂ ಹೆಚ್ಚು ಕುರಿಗಳು ಸಾವು; ಮುಂದೇನು ತೋಚದೇ ಕುರಿಗಾಹಿಗಳು ಕಂಗಾಲು!

ಚೆಲ್ಲಿ ಹೋಗಿದ್ದ ವಿಷಾಹಾರ ಸೇವಿಸಿ 55ಕ್ಕೂ ಹೆಚ್ಚು ಕುರಿಗಳು ಮೃತಪಟ್ಟ ದುರ್ಘಟನೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಎರೆಕಲ್ಲು ಗ್ರಾಮದಲ್ಲಿ ನಡೆದಿದೆ. ಕುರಿಗಳನ್ನೇ ನಂಬಿ ಜೀವನ ಸಾಗಿಸುತ್ತಿದ್ದ ಕುರಿಗಾಹಿಗಳಿಗೆ ಮುಂದೇನು ತೋಚದಂತಾಗಿ ಕಂಗಾಲಾಗಿದ್ದಾರೆ

More than 55 sheep died after consuming poison at ballari district rav

ಬಳ್ಳಾರಿ (ಮೇ.23): ಚೆಲ್ಲಿ ಹೋಗಿದ್ದ ವಿಷಾಹಾರ ಸೇವಿಸಿ 55ಕ್ಕೂ ಹೆಚ್ಚು ಕುರಿಗಳು ಮೃತಪಟ್ಟ ದುರ್ಘಟನೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಎರೆಕಲ್ಲು ಗ್ರಾಮದಲ್ಲಿ ನಡೆದಿದೆ.

ರಾಜಶೇಖರ್ ಎಂಬುವವರಿಗೆ ಸೇರಿದ್ದ 40 ಕುರಿಗಳು, ಇನ್ನುಳಿದ 15 ಕುರಿಗಳು ಗಾದಿಲಿಂಗಪ್ಪ ಎಂಬುವವರದ್ದು. ನಿನ್ನೆ ಕುರಿ ಮೇಯಿಸಲು ಹೋಗಿದ್ದಾಗ ಮೇಯುತ್ತಾ ಯಾರೋ ಚೆಲ್ಲಿ ಹೋಗಿದ್ದ ವಿಷಾಹಾರ ಸೇವಿಸಿದ್ದ ಕುರಿಗಳು ಸೇವಿಸಿದ ಬಳಿಕ ವಿಲವಿಲ ಒದ್ದಾಡಿ ಕಣ್ಮುಂದೆ ಪ್ರಾಣಬಿಟ್ಟಿರುವ ಕುರಿಗಳು. ವಿಷಾಹಾರ ಸೇವಿಸಿ ಕುರಿಗಳು ಮೃತಪಟ್ಟದ್ದು ನೋಡಿ ಆಘಾತಕ್ಕೊಳಗಾದ ಮಾಲೀಕರು.  ಒಟ್ಟು ಐವತ್ತಕ್ಕೂ ಹೆಚ್ಚು ಕುರಿಗಳು ಮೃತಪಟ್ಟು ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

 

ತುಮಕೂರು : ಕೆರೆಯಲ್ಲಿ ಕಲುಷಿತ ನೀರು ಕುಡಿದು 50ಕ್ಕೂ ಹೆಚ್ಚು ಕುರಿಗಳ ಸಾವು

ಸ್ಥಳಕ್ಕೆ ಪಶು ವೈದ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಫುಡ್ ಪಾಯ್ಸನ್‌ನಿಂದ ಮೃತಪಟ್ಟಿರುವ ಬಗ್ಗೆ ದೃಢಪಡಿಸಿದ ವೈದ್ಯರು ಸರ್ಕಾರದಿಂದ ಕುರಿಗಾಹಿಗಳಿಗೆ ಪರಿಹಾರ ಒದಗಿಸುವ ಬಗ್ಗೆ ಪರಿಹಾರ ನೀಡಲಾಗಿದೆ. ಕುರಿಗಳನ್ನೇ ನಂಬಿ ಜೀವನ ಮಾಡುತ್ತಿದ್ದ ಕುರಿಗಾಹಿಗಳಿಗೀಗ ಮುಂದೇನು ಎಂಬಂತಾಗಿ ಕಂಗಲಾಗಿದ್ದಾರೆ. 

 

ಕೂಡ್ಲಿಗಿ: ಲಾರಿ ಹರಿದು 40 ಕುರಿಗಳ ಸಾವು

ಇದೇ ಮೊದಲಲ್ಲ ಈ ಹಿಂದೆಯೂ ಇಂತಹ ಘಟನೆಗಳು ನಡೆದಿವೆ. ಚುನಾವಣೆಯಲ್ಲಿ ಬಾಡೂಟ, ಮದುವೆ ಮನೆಗಳಲ್ಲಿ ಉಳಿದ ಪದಾರ್ಥ ಸೂಕ್ತವಾಗಿ ವಿಲೇವಾರಿ ಮಾಡದೆ ಎಲ್ಲೆಂದರಲ್ಲೇ ಎಸೆದುಹೋಗುವ ಜನರು. ಮೇಯಲು ಬಂದ ಮೂಕ ಪ್ರಾಣಿಗಳು ಕೊಳೆತ ಆಹಾರ ತಿಂದು ಸಾವನ್ನಪ್ಪುವ ಘಟನೆಗಳು ನಡೆಯುತ್ತಲೇ ಇವೆ. ಆಹಾರ ಪದಾರ್ಥ ಎಲ್ಲೆಂದರಲ್ಲೆ ಬಿಸಾಡುವವ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು.

Latest Videos
Follow Us:
Download App:
  • android
  • ios