ಬೆಂಗಳೂರು(ಸೆ. 08)  ನೈತಿಕ ಪೊಲೀಸ್ ಗಿರಿ ಪ್ರದರ್ಶನ ಮಾಡಿದ್ದ ಕವಿತಾ ರೆಡ್ಡಿಯನ್ನು ಬಂಧಿಸಲಾಗಿದೆ. ಸಂಯುಕ್ತಾ ಕ್ಷಮೆ‌ ಕೋರಿ ವಿಡಿಯೋ ಒಂದನ್ನು ಸಾಮಾಜಿಕ ಜಾಲ ತಾಣದಲ್ಲಿ ಕವಿತಾ ಹಾಕಿದ್ದರು, ನಟಿ ಸಂಯುಕ್ತ ಹೆಗ್ಡೆ ಹಾಗೂ ಕವಿತಾ ರೆಡ್ಡಿ ನಡುವೆ ಸಂಧಾನ ಮಾಡಲಾಗಿತ್ತು.

"

ಆದರೆ ಸಂಧಾನ ಪತ್ರದಲ್ಲಿ ರಾಜಿಗೆ ಒಪ್ಪಿಗೆ ಇಲ್ಲ,  ಒತ್ತಾಯದಿಂದ ರಾಜಿಗೆ ಸಹಿ ಮಾಡುತ್ತಿದ್ದೆನೆ ಎಂದು ಬರೆದಿದ್ದ ಸಂಯುಕ್ತ ಹೆಗ್ಡೆ ಬರೆದಿದ್ದರು. ಇದೀಗ ಕವಿತಾ ಅವರನ್ನು ವಶಕ್ಕೆ ಪಡೆಯಲಾಗಿದೆ.

ನಿಜಕ್ಕೂ ನಟಿ ಸಂಯುಕ್ತಾ ಹೆಗ್ಡೆ- ಕವಿತಾ ರೆಡ್ಡಿ ನಡುವೆ ಏನಾಯ್ತು?

ಎರಡನೇ ಆರೋಪಿ ಅನಿಲ್ ರೆಡ್ಡಿ ವಿರುದ್ದವೂ ಕ್ರಮಕ್ಕೆ ಮನವಿ ಸಂಯುಕ್ತ ಮನವಿ ಮಾಡಿಕೊಂಡಿದ್ದರು,. ಐಪಿಸಿ ಸೆಕ್ಷನ್ 264ಬಿ 323 224, 504, 509, 506 ಅಡಿ ದೂರು ದಾಖಲಾಗಿತ್ತು. ಎರಡನೇ ಅರೋಪಿ ಅನಿಲ್ ರೆಡ್ಡಿ ನಾಪತ್ತೆಯಾಗಿದ್ದು ಪೊಲೀಸರು ಬಲೆ ಬೀಸಿದ್ದಾರೆ.

"

ಏನಿದು ಪ್ರಕರಣ: ಪಾರ್ಕ್ ಒಂದರಲ್ಲಿ ನೃತ್ಯ ಮಾಡುತ್ತಿದ್ದ ಸಂಯುಕ್ತಾ ಹೆಗ್ಡೆ ಅವರ ಮೇಲೆ ಕವಿತಾ ರೆಡ್ಡಿ ಕೂಗಾಡಿದ್ದರು. ಸಂಯುಕ್ತಾ ಧರಿಸಿದ್ದ ಬಟ್ಟೆ ವಿಚಾರದಲ್ಲಿ ಆಕ್ಷೇಪ ಎತ್ತಿದ್ದರು. ಈ ಘಟನೆಯನ್ನು ಸಂಯುಕ್ತಾ ಲೈವ್ ಮಾಡಿದ್ದರು.

ಇದಾದ ಮೇಲೆ ಚಿತ್ರರಂಗದ ಅನೇಕರು ಸಂಯುಕ್ತಾ ಬೆಂಬಲಕ್ಕೆ ನಿಂತಿದ್ದರು. ಈಗ ಅಂತಿಮವಾಗಿ ಕವಿತಾ ರೆಡ್ಡಿ ಬಂಧನವಾಗಿದೆ. ಕವಿತಾ ರೆಡ್ಡಿ ಕರ್ನಾಟಕ ಕಾಂಗ್ರೆಸ್ ವಕ್ತಾರೆ ಹಾಗೂ ಅನೇಕ ಕ್ರಿಡಾ ಕಾರ್ಯಕ್ರಮಗಳಲ್ಲಿಯೂ ಭಾಗಿಯಾಗಿದ್ದಾರೆ. ಅವರವರ ವೈಯಕ್ತಿಕ ಆಶಯದಂತೆ, ಜಿಮ್ ಮಾಡುವಾಗ ಹಾಗೂ ವಾಕಿಂಗ್ ಮಾಡುವಾಗ ಬೇರೆ ಬೇರೆ ರೀತಿಯ ಡ್ರೆಸ್ ಧರಿಸುತ್ತಾರೆ.  ಸಂಯುಕ್ತಾ ಸ್ಫೋರ್ಟ್ಸ್ ಬ್ರಾ ತೊಟ್ಟ ಕಾರಣ ಅವಾಚ್ಯ ಶಬ್ಧಗಳನ್ನು ಬಳಸಿ ಕವಿತಾ ಹಲ್ಲೆ ಮಾಡಿದ್ದಾರೆ, ಎಂದು ಎಚ್‌ಎಸ್‌ಆರ್‌ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿತ್ತು.