ಬೆಂಗಳೂರು(ಫೆ.12): ಕಾರು ಅಪಘಾತ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ನೀಡಲು ಮೊಹಮ್ಮದ್ ಹ್ಯಾರಿಸ್ ನಲಪಾಡ್ ಮುಂದಾಗಿದ್ದಾರೆ. ಅಪಘಾತದ ಬಳಿಕ ಇದೇ ಮೊದಲ ಬಾರಿಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ನಲಪಾಡ್, ಅಪಪಘಾತವಾಗಿದ್ದು ಬೆಂಟ್ಲಿ ಕಾರು, ನಾನು ಲ್ಯಾಂಬೋರ್ಗಿನಿ ಕಾರಿನಲ್ಲಿದ್ದೆ ಎಂದು ಹೊಸ ಬಾಂಬ್ ಹಾಕಿದ್ದಾರೆ.

ಇದನ್ನೂ ಓದಿ: ಬೆಂಟ್ಲಿ ಕಾರಿಗೆ ಬೆಚ್ಚಿಬಿದ್ದ ಗನ್‌ಮ್ಯಾನ್; ವಿಚಾರಣೆಯಲ್ಲಿ ಹೇಳಿದ ಇದಕ್ಕೆ ಕಾರಣ ನಲಪಾಡ್!

ನನ್ನನ್ನು ಯಾಕೆ ಗುರಿಯಾಗಿಸುತ್ತಿದ್ದೀರಿ ಎಂದು ಮಾಧ್ಯಮಕ್ಕೆ ನಲಪಾಡ್ ಪ್ರಶ್ನಿಸಿದ್ದಾನೆ. ಈ ಹಿಂದಿನ ಹಲ್ಲೆ ಪ್ರಕರಣದ ಬಳಿಕ ನಾನು ಒಳ್ಳೆಯವನಾಗಿದ್ದೇನೆ. ನನ್ನನ್ನು ನಂಬಿ ಪ್ಲೀಸ್ ಎಂದು ಮೊಹಮ್ಮದ್ ಹ್ಯಾರಿಸ್ ನಲಪಾಡ್ ಕೈಮುಗಿದು ಕಣ್ಣೀರು ಹಾಕಿದ್ದಾರೆ. 

ಇದನ್ನೂ ಓದಿ: ನಲಪಾಡ್ ಪುಂಡಾಟಕ್ಕೆ ಮೂರುವರೆ ಕೋಟಿ ಕಾರು, ಬೆಂಟ್ಲಿ ಅಡಿಗೆ ನಾಲ್ವರು!

ಆಕ್ಸಿಡೆಂಟ್ ಅನ್ನೋದು ಆಕಸ್ಮಿಕ, ಯಾರೂ ಅಪಘಾತವನ್ನೇ ಮಾಡಿಲ್ವಾ? ನನ್ನ ಬಗ್ಗೆ ಯಾಕೆ ಈ ರೀತಿ ಸುದ್ದಿ ಬಿತ್ತರ ಮಾಡುತ್ತೀರಿ. ಅಪಘಾತವಾದಾಗ ನಾನು ಕೂಡ ಸ್ಥಳದಲ್ಲಿದ್ದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದೇನೆ. ಅವರ ಚಿಕಿತ್ಸೆ ವೆಚ್ಚ ಕೂಡ ಭರಿಸಿದ್ದೇನೆ, ಪರಿಹಾರ ಕೂಡ ನೀಡಿದ್ದೇನೆ ಎಂದು ನಲಪಾಡ್ ಹೇಳಿದ್ದಾರೆ. 

ನಲಪಾಡ್ ಕಾರು ಅಪಘಾತ ಪ್ರಕರಣ

ನಗರದ ಮೇಕ್ರಿ ಸರ್ಕಲ್ ಬಳಿ ಮೊಹಮ್ಮದ್ ನಲಪಾಡ್‌ಗೆ ಸೇರಿದ ಬೆಂಟ್ಲಿ ಕಾರು ಅಪಘಾತವಾಗಿತ್ತು. ಕಾರು ಗುದ್ದಿದ ಪರಿಣಾಮ ಬೈಕ್ ಸವಾರ ಹಾಗೂ ಆಟೋ ರಿಕ್ಷಾದಲ್ಲಿ ಮೂವರು ಗಾಯಗೊಂಡಿದ್ದರು. ಈ ಪ್ರಕರಣದ ಬಳಿಕ ನಲಪಾಡ್ ನಾಪತ್ತೆಯಾಗಿದ್ದರು. ನಲಪಾಡ್ ಗನ್‌ಮ್ಯಾನ್ ಬಾಲು ಸದಾಶಿವನಗರ ಪೊಲೀಸ್ ಠಾಣೆಗೆ ಆಗಮಿಸಿ ನಾನೇ ಅಪಘಾತ ಮಾಡಿದ್ದು ಎಂದು ಹೇಳಿಕೆ ಕೊಟ್ಟಿದ್ದ. ಆದರೆ ಪೊಲೀಸರು ಸಾಕ್ಷ್ಯ ಆಧಾರದ ಮೇಲೆ ನಲಪಾಡ್ ಕಾರು ಡ್ರೈವ್ ಮಾಡಿರುವುದು ಖಚಿತವಾಗಿದೆ. ಪ್ರಕರಣ ದಿಕ್ಕು ತಪ್ಪಿಸಿದ ಹಾಗೂ ಸಾಕ್ಷ್ಯ ನಾಶ ಆರೋಪದಡಿ ನಲಪಾಡ್ ಗನ್‌ಮ್ಯಾನ್ ಬಂಧಿಸಲಾಗಿತ್ತು.