Asianet Suvarna News Asianet Suvarna News

ಹುಟ್ಟುಹಬ್ಬದ ದಿನವೇ ದುರಂತ ಅಂತ್ಯಕಂಡ ಶಾಸಕಿ ಪುತ್ರ, 2 ವರ್ಷದ ಮಗಳಿಂದ ಅಂತಿಮ ನಮನ!

ಶಾಸಕಿ ಮನೆಯಲ್ಲಿ ಮಗನ 34ರ ಹುಟ್ಟುಹಬ್ಬದ ಸಂಭ್ರಮ. ಗೆಳೆಯರ ಜೊತೆ ಕೇಕ್ ಕತ್ತರಿಸಿ ಬರುವುದಾಗಿ ಹೇಳಿ ಹೋದ ಪುತ್ರನ ಸುಳಿವಿಲ್ಲ. ಮನೆಯಲ್ಲಿ ಕೇಕ್ ಕತ್ತರಿಸಲು 2 ವರ್ಷದ ಪುತ್ರಿ, ಪತ್ನಿ ಹಾಗೂ ಶಾಸಕಿ ಕಾಯುತ್ತಿದ್ದಂತೆ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಬರ್ತ್‌ಡೇ ಮನೆ ಶೋಕಸಾಗರದಲ್ಲಿ ಮುಳುಗಿದೆ.

MLA OS Ambika son dies in road accident on his birthday at attingal Kerala ckm
Author
First Published Aug 5, 2024, 3:26 PM IST | Last Updated Aug 5, 2024, 3:26 PM IST

ಆಟಿಂಗಲ್(ಆ.05) ಶಾಸಕಿ ಮನೆಯಲ್ಲಿ ಸಂಭ್ರಮದ ವಾತಾವರಣ ಕಳೆಗಟ್ಟಿತ್ತು. ಕಾರಣ ಶಾಸಕಿ ಮಗನ 34ನೇ ಹುಟ್ಟುಹಬ್ಬ. ರಾಜಕೀಯವಾಗಿಯೂ ಗುರುತಿಸಿಕೊಂಡಿದ್ದ ಪುತ್ರನಿಗೆ ಅಪಾರ ಬೆಂಬಲಿಗರು, ಅಭಿಮಾನಿಗಳ ಬಳಗವಿತ್ತು. ಬೆಂಬಲಿಗರ ಒತ್ತಾಸೆಯಂತೆ ಕೇಕ್ ಕತ್ತರಿಸಿ ಬರುವುದಾಗಿ ಹೇಳಿ ಮನೆಯಿಂದ ಹೊರಟ ಆತ, 34ನೇ ವರ್ಷದ ಹುಟ್ಟುಹಬ್ಬ ಆಚರಿಸಿದ್ದಾನೆ. ಆದರೆ ಮರಳಿ ಬರುವಾಗ ರಸ್ತೆ ಅಪಘಾತದಲ್ಲಿ ದುರಂತ ಅಂತ್ಯ ಕಂಡಿದ್ದಾನೆ. ಇತ್ತ ಮನೆಯಲ್ಲಿ ಆತನ ಪತ್ನಿ, 2 ವರ್ಷದ ಮಗಳು ಹಾಗೂ ಶಾಸಕಿ ಕೇಕ್ ತರಿಸಿ ಕಾಯುತ್ತಿದ್ದಂತೆ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಭೀಕರ ಅಪಘಾತದಲ್ಲಿ ಪುತ್ರ ಮೃತಪಟ್ಟಿರುವುದಾಗಿ ಸಂದೇಶ ಬಂದಿದೆ. ಇದೀಗ ಸಂಭ್ರಮದ ಮನೆ ಇದೀಗ ಸೂತಕದ ಮನೆಯಾಗಿ ಮಾರ್ಪಟ್ಟ ಘಟನೆ ಕೇರಳದ ಅಟಿಂಗಲ್‌ನಲ್ಲಿ ನಡೆದಿದೆ.

ಆಟಿಂಗಲ್ ಹಾಲಿ ಶಾಸಕಿ ಒಎಸ್ ಅಂಬಿಕಾ ಮನೆಯಲ್ಲಿ ನೀರವ ಮೌನ. ಅಂಬಿಕಾ ಪುತ್ರ ವಿನೀತ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಅಟಿಂಗಲ್ ಪಟ್ಟಣದಲ್ಲಿ ರೆಸ್ಟೋರೆಂಟ್ ಉದ್ಯಮ ನಡೆಸುತ್ತಿರುವ ವಿನೀತ್, ಬೆಂಬಲಿಗರು, ಗೆಳೆಯರ ಜೊತೆ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಬಳಿಕ ರೆಸ್ಟೋರೆಂಟ್‌ಗೆ ಬಂದು ಕೆಲ ಹೊತ್ತಿನ ಬಳಿಕ ಹೊಟೆಲ್ ಬಂದ್ ಮಾಡಿದ್ದಾರೆ. 

ವಯನಾಡು ದುರಂತದಲ್ಲಿ ಎಲ್ಲರನ್ನೂ ಕಳೆದುಕೊಂಡು ಏಕಾಂಗಿಯಾದ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ!

ಹುಟ್ಟು ಹಬ್ಬದ ಕಾರಣ ಬೇಗ ಮನೆಗೆ ಬರುವುದಾಗಿ ವಿನೀತ್ ಹೇಳಿದ್ದ. ಕುಟುಂಬದ ಜೊತೆ ಕೇಕ್ ಕತ್ತರಿಸಿ ರಾತ್ರಿ ವಿಶೇಷ ಭೂಜನ ಸವಿಯಲು ಎಲ್ಲಾ ತಯಾರಿ ನಡೆದಿತ್ತು. ಶಾಸಕಿ ಅಂಬಿಕಾ, ಪತ್ನಿ ಹಾಗೂ 2 ವರ್ಷದ ಮಗಳು ಕೂಡ ಸಂಭ್ರಮಕ್ಕೆ ಎಲ್ಲಾ ತಯಾರಿ ನಡೆಸಿದ್ದರು. ರೆಸ್ಟೋರೆಂಟ್ ಬಂದ್ ಮಾಡಿ ಮನೆಗೆ ಸ್ಕೂಟರ್ ಮೂಲಕ ಮರಳುತ್ತಿರುವಾಗ ವೇಗವಾಗಿ ಬಂದ ಕಾರೊಂದು ಡಿಕ್ಕಿಯಾಗಿದೆ. ಡಿಕ್ಕಿಯಾದ ರಸಭಕ್ಕೆ ವಿನೀತ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. 

ಮನೆಯಲ್ಲಿ ಹುಟ್ಟ ಹಬ್ಬ ಆಚರಿಸಲು ಕಾಯುತ್ತಿದ್ದ ಕುಟುಂಬಕ್ಕೆ ಆಘಾತ ಎದುರಾಗಿದೆ. ವಿನೀತ್ ಅಪಘಾತದಲ್ಲಿ ಮೃತಪಟ್ಟಿರುವ ಮಾಹಿತಿ ತಿಳಿದು ಪತ್ನಿ ಅಸ್ವಸ್ಥಗೊಂಡು ಕುಸಿದಿದ್ದಾರೆ. ಶಾಸಕಿಗೆ ದಿಕ್ಕೆ ತೋಚದಾಗಿದೆ. ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಕ್ರಿಯೆ ಮುಗಿಸಿ ಮೃತದೇಹ ಮನೆಗೆ ತರಲಾಗಿದೆ. ಇದೇ ಕಮ್ಯೂನಿಸ್ಟ್ ಪಕ್ಷದ ಪ್ರಮುಖ ನಾಯನಾಗಿ ಗುರುತಿಸಿಕೊಂಡಿದ್ದ ವಿನೀತ್ ದುರಂತ ಅಂತ್ಯ ಕಂಡ ಬೆನ್ನಲ್ಲೇ ಪಕ್ಷದ ನಾಯಕರು, ಕಾರ್ಯಕರ್ತರು ಶಾಸಕಿ ಮನೆಗೆ ಆಗಮಿಸಿದ್ದಾರೆ. ವಿನೀತ್ ಅವರ 2 ವರ್ಷದ ಪುತ್ರಿ ಅಂತಿಮ ನಮನ ಸಲ್ಲಿಸಿದ ದೃಶ್ಯ ಎಲ್ಲರ ಮನ ಕಲುಕಿತ್ತು. 

ವಯನಾಡಿನಲ್ಲಿ 6 ದಿನಗಳ ಬಳಿಕ ಮಾಲೀಕನ ಪತ್ತೆ ಹಚ್ಚಿದ ನಾಯಿ, ಹೃದಯಸ್ಪರ್ಶಿ ವಿಡಿಯೋ!

Latest Videos
Follow Us:
Download App:
  • android
  • ios