Asianet Suvarna News Asianet Suvarna News

ವಯನಾಡು ದುರಂತದಲ್ಲಿ ಎಲ್ಲರನ್ನೂ ಕಳೆದುಕೊಂಡು ಏಕಾಂಗಿಯಾದ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ!

ವಯನಾಡು ದುರಂತದ ಕಣ್ಣೀರ ಕತೆಗಳು ಒಂದೆರೆಡಲ್ಲ. ಕಣ್ಣೆದೆರೇ ಮಕ್ಕಳು, ಪೋಷಕರು ಕೊಚ್ಚಿ ಹೋದ ಘಟನೆ, ಎಲ್ಲರನ್ನೂ ಕಳೆದುಕೊಂಡು ಏಕಾಂಗಿಯಾಗಿರುವ ಸೇರಿದಂತೆ ಹಲವು ಮನಮಿಡಿಯುವ ಘಟನೆಗಳಿವೆ. ಈ ಪೈಕಿ ಕಾಂಗ್ರಸ್ ಜಿಲ್ಲಾ ಕಾರ್ಯದರ್ಶಿ ಶೋಭನಾ ಸೋಮನಾಥ್ ಕಣ್ಣೀರ ಕತೆ ರಾಜ್ಯಸಭೆಯಲ್ಲೂ ಎಲ್ಲರ ಮನಕಲುಕಿದೆ.
 

Wayanad landslides disaster congress district secretary lost her entire family in floods ckm
Author
First Published Aug 4, 2024, 9:58 PM IST | Last Updated Aug 4, 2024, 9:58 PM IST

ವಯನಾಡು(ಆ.04) ವಯನಾಡು ದುರಂತ ಘನಘೋರ. 300ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. 200ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಮತ್ತೊಂದೆಡೆ ಗಾಯಳುಗಳ ಸಂಖ್ಯೆಯೂ ಹೆಚ್ಚಿದೆ. ಇತ್ತ ಬದುಕುಳಿದವರ ಕಣ್ಣೀರ ಕತೆ ಎಂತವರನ್ನೂ ಕರಗಿಸುತ್ತದೆ. ಎಲ್ಲರನ್ನುಕಳೆದುಕೊಂಡು ಏಕಾಂಗಿಯಾದವರ ಸಂಖ್ಯೆ ಹೆಚ್ಚಿದೆ. ಈ ಪೈಕಿ ವಯನಾಡು ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಶೋಭನಾ ಸೋಮನಾಥ್ ಕಣ್ಣೀರ ಕತೆ ರಾಜ್ಯಸಭೆಯಲ್ಲೂ ಮನ ಕಲುಕಿದೆ. 

ವಯನಾಡು ದುರಂತದ ರಾತ್ರಿ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಶೋಭನಾ ಸೋಮನಾಥ್ ಅವರ ಮನೆ ಕೊಚ್ಚಿ ಹೋಗಿದೆ. ಈ ಮನೆಯಲ್ಲಿ ಶೋಭನಾ ಸೋಮನಾಥ್ ತಾಯಿ, ಸಹೋದರ ಸುದೇವ್, ಅವರ ಪತ್ನಿ ಹಾಗೂ ಸಹೋದರ ಇಬ್ಬರು ಮಕ್ಕಳು ಭೂಕುಸಿತ ಹಾಗೂ ಪ್ರವಾಹಕ್ಕೆ ಕೊಚ್ಚಿ ಹೋಗಿದ್ದಾರೆ. ಒಂದೇ ಕುಟುಂಬದ ಐವರನ್ನು ಕಳೆದುಕೊಂಡ ಶೋಭನಾ ಸೋಮನಾಥ್ ಈಗ ಏಕಾಂಗಿಯಾಗಿದ್ದಾರೆ. 

ಶೋಭನಾ ಸೋಮನಾಥ್ ಅವರ ದುರಂತ ಕತೆಯನ್ನು ರಾಜ್ಯಸಭಾ ಸದಸ್ಯ, ಕೇರಳ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜೆಬಿ ಮಾಥೆರ್ ರಾಜ್ಯಸಭೆಯಲ್ಲಿ ವಿವರಿಸಿದ್ದಾರೆ. ರಾಜ್ಯಸಭೆಗೂ ಆಗಮಿಸುವ ಮುನ್ನ ಶೋಭನಾ ಸೋಮನಾಥ್ ಜೊತೆ ಮಾತನಾಡಿದ್ದೆ. ಅವರ ಕುಟುಂಬ ಐವರು ವಯನಾಡು ದುರಂತದಲ್ಲಿ ಕೊಚ್ಚಿ ಹೋಗಿದ್ದಾರೆ. ಎಲ್ಲಿ ನೋಡಿದರು ಕಣ್ಣೀರು, ಆರ್ತನಾದವೇ ಕೇಳಿಸುತ್ತಿದೆ ಎಂದು ಘಟನೆಯನ್ನು ವಿವರಿಸಿದ್ದಾರೆ.

ಇದು ಶೋಭನಾ ಸೋಮನಾಥ ಒಬ್ಬರ ಕತೆಯಲ್ಲಿ, ವಯನಾಡು ದುರಂತದಲ್ಲಿನ ಆಪ್ತರನ್ನು ಕಳೆದುಕೊಂಡ, ಮನೆ ಕಳೆದುಕೊಂಡ ಪ್ರತಿಯೊಬ್ಬರ ಕಣ್ಣೀರಾಗಿದೆ ಎಂದಿದ್ದಾರೆ.  ವಯನಾಡು ಭೂಕುಸಿತ ಹಾಗೂ ದುರಂತವನ್ನು ರಾಷ್ಟ್ರೀಯ ದುರಂತ ಎಂದು ಪರಿಗಣಿಸಬೇಕು. ಈಗ ನೀಡಿರುವ ಕುಟುಂಬಕ್ಕೆ ನೀಡಿರುವ ತಲಾ 2 ಲಕ್ಷ ರೂಪಾಯಿ ಪರಿಹಾರ ಸಾಲದು. ಕಾರಣ ಬದುಕಿ ಉಳಿದಿರುವ ಕುಟುಂಬಗಳು ಶೂನ್ಯದಿಂದ ಬದುಕು ಆರಂಭಿಸಬೇಕು ಎಂದು ಜೆಬಿ ಮಾಥೆರ್ ಮನವಿ ಮಾಡಿದ್ದಾರೆ. 

 

 

ಸುನಾಮಿ, ಪ್ರವಾಹ, ಭೂಕುಸಿತ ಸೇರಿದಂತೆ ಹಲವು ದುರ್ಘಟನೆಗಳು ನಡೆದಿದೆ. ಆದರೆ ನಾವು ಪಾಠ ಕಲಿತಿಲ್ಲ. ಈ ರೀತಿ ಘಟನೆ ಆಗದಂತೆ ತಡೆಯಲು ಯಾವುದೇ ವ್ಯವಸ್ಥೆ ಭಾರತದಲ್ಲಿಲ್ಲ. ನಾವು ಆರ್ಟಿಫೀಶಿಯಲ್ ಇಂಟಲಿಜೆನ್ಸ್, ನಾಸಾ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನ ಯುಗದಲ್ಲಿದ್ದೇವೆ. ಆದರೆ ಗುಡ್ಡ ಕುಸಿತ, ಪ್ರವಾಹ ಬರುವ ಮೊದಲು ಅಲರಾಂ ಸಿಸ್ಟಮ್ ನಮ್ಮಲ್ಲಿ ಇಲ್ಲ. ದುರ್ಘಟನೆಯಿಂದ ಪಾರು ಮಾಡಲು ಯಾವುದೇ ವ್ಯವಸ್ಥೆಗಳಿಲ್ಲ. ಈ ವ್ಯವಸ್ಥೆಗಳನ್ನು ಜಾರಿಗೊಳಿಸಿ ದುರ್ಘಟೆಗಳನ್ನು ತಪ್ಪಿಸಬೇಕಿದೆ ಎಂದು ಜೆಬಿ ಮಾಥೆರ್ ಹೇಳಿದ್ದಾರೆ. 

ವಯನಾಡಿನ ಕಲ್ಲು ಮಣ್ಣು ಅವಶೇಷಗಳಡಿ ಉಸಿರಾಡುತ್ತಿದೆ ಜೀವ, ರೇಡಾರ್‌ನಲ್ಲಿ ನಾಡಿಮಿಡಿತ ಪತ್ತೆ!
 

Latest Videos
Follow Us:
Download App:
  • android
  • ios