ಏರ್‌ಗನ್ ಜೊತೆ ಆಡುವಾಗ ಮಿಸ್‌ಫೈರ್ 8 ವರ್ಷ ಬಾಲಕನ ಎದೆ ತೂರಿದ ಗುಂಡು!
ಪೋಷಕರ ನಿರ್ಲಕ್ಷದಿಂದ ಏರ್‌ಗನ್ ಮಿಸ್ ಫೈರ್ ಆಗಿ ಬಾಲಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮಲ್ಲೇನಹಳ್ಳಿಯ ಹಕ್ಕಿಪಿಕ್ಕಿ ಕಾಲೋನಿಯಲ್ಲಿ ನಡೆದಿದೆ. ವಿಷ್ಣುರಾಜ್(8) ಮೃತ ಬಾಲಕ.
ಚಿಕ್ಕಮಗಳೂರು (ಏ.12): ಪೋಷಕರ ನಿರ್ಲಕ್ಷದಿಂದ ಏರ್‌ಗನ್ ಮಿಸ್ ಫೈರ್ ಆಗಿ ಬಾಲಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮಲ್ಲೇನಹಳ್ಳಿಯ ಹಕ್ಕಿಪಿಕ್ಕಿ ಕಾಲೋನಿಯಲ್ಲಿ ನಡೆದಿದೆ.
ವಿಷ್ಣುರಾಜ್(8) ಮೃತ ಬಾಲಕ. ಕಾಫಿತೋಟದಲ್ಲಿ ಮಂಗಗಳನ್ನ ಓಡಿಸಲು ಬಳಸುವ ಏರ್ ಗನ್. ಏರ್‌ಗನ್ ಮಗುವಿನ ಕೈಗೆ ಸಿಗದಂತೆ ಎತ್ತರದಲ್ಲಿಡದೆ ನಿರ್ಲಕ್ಷ್ಯವಹಿಸಿರುವ ಪೋಷಕರು. ಹೀಗಾಗಿ ಏರ್‌ಗನ್ ಹಿಡಿದು ಆಟವಾಡುತ್ತಿದ್ದ ಬಾಲಕ. ಈ ವೇಳೆ ಏರ್‌ಗನ್ ಉಲ್ಟಾ ಹಿಡಿದು ಟ್ರಿಗರ್ ಒತ್ತಿರುವ ಬಾಲಕ. ಮಿಸ್ಫೈರ್ ಆಗಿ ಎದೆಯ ಭಾಗಕ್ಕೆ ಗುಂಡುಹೊಕ್ಕಿದೆ. ತೀವ್ರ ಗಾಯಗೊಂಡ ಮಗು ಪೋಷಕರ ಕಣ್ಮುಂದೆ ಪ್ರಾಣಬಿಟ್ಟಿರುವ ಬಾಲಕ. ಪೋಷಕರ ಅಕ್ರಂದನ ಮುಗಿಲು ಮುಟ್ಟಿದೆ.
ಮಲೆನಾಡಿನಲ್ಲಿ ಧಾರಾಕಾರ ಮಳೆ: ಕಾಫಿ ಬೆಳೆಗಾರರಲ್ಲಿ ಹರ್ಷ
ಸದ್ ಬಾಲಕನ ಮೃತದೇಹ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಒಂದು ಸಣ್ಣ ತಪ್ಪಿನಿಂದ, ನಿರ್ಲಕ್ಷ್ಯದಿಂದಾಗಿ ಎಂತಹ ಅನಾಹುತಗಳಾಗುತ್ತವೆಂಬುದು ಈ ಘಟನೆ ಸಾಕ್ಷಿಯಾಗಿದೆ. ಅಪಾಯಕಾರಿ, ಸ್ಫೋಟಕ, ಕೀಟನಾಶಕದಂತಹ ವಸ್ತುಗಳು ಮಕ್ಕಳ ಕೈಗೆ ಸಿಗದಂತೆ ಎತ್ತರದ ಸ್ಥಳದಲ್ಲಿರಿಸಬೇಕು. ಏರ್‌ಗನ್ ಬಗ್ಗೆ ಪೋಷಕರು ನಿರ್ಲಕ್ಷ್ಯ ಹೆತ್ತಮಗುವನ್ನು ಕಳೆದುಕೊಳ್ಳುವಂತೆ ಮಾಡಿದ್ದು ದುರ್ದೈವ.