ನಿವೃತ್ತ ಸೇನಾಧಿಕಾರಿಗೆ ಮದುವೆ ಮಾಡಿಸುವುದಾಗಿ ವಂಚನೆ, ಹೋಂ ಸ್ಟೇಗೆ ಕರೆದೊಯ್ದು ಖದೀಮರು ಮಾಡಿದ್ದೇನು?

ನಿವೃತ್ತ ಸೇನಾಧಿಕಾರಿಗೆ ಮದುವೆ ಮಾಡಿಸುವುದಾಗಿ ಲಕ್ಷಾಂತರ ರೂಪಾಯಿ ವಂಚಿಸಿದ ಘಟನೆ ನಡೆದಿದ್ದು, ವಂಚನೆ ಪ್ರಕರಣ ಸಂಬಂಧ ಮಡಿಕೇರಿ ನಗರ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

Miscreants who cheated a retired army officer in marriage issue at madikeri rav

ಕೊಡಗು (ಡಿ.10): ನಿವೃತ್ತ ಸೇನಾಧಿಕಾರಿಗೆ ಮದುವೆ ಮಾಡಿಸುವುದಾಗಿ ಲಕ್ಷಾಂತರ ರೂಪಾಯಿ ವಂಚಿಸಿದ ಘಟನೆ ನಡೆದಿದ್ದು, ವಂಚನೆ ಪ್ರಕರಣ ಸಂಬಂಧ ಮಡಿಕೇರಿ ನಗರ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಫೈಜಲ್, ಅಬ್ದುಲ್ ಬಷೀರ್, ಸಾದಿಕ್ ಬಂಧಿತ ಆರೋಪಿಗಳು. ಜಾನ್ ಮ್ಯಾಥ್ಯು ಮೋಸ ಹೋದ ನಿವೃತ್ತ ಸೇನಾಧಿಕಾರಿ. ಕೇರಳ ಮೂಲದವರಾದ ನಿವೃತ್ತ ಸೇನಾಧಿಕಾರಿ ಜಾನ್ ಮ್ಯಾಥ್ಯು ಅವಿವಾಹಿತರಾಗಿಯೇ ಉಳಿದಿದ್ದರು. ಆದರೆ ಜಾನ್ ಮ್ಯಾಥ್ಯುಗೆ ಪರಿಚಯವಾಗಿದ್ದ ಆರೋಪಿಗಳು. ಮದುವೆ ಮಾಡಿಕೊಳ್ಳುವಂತೆ ಪುಸಲಾಯಿಸಿದ್ದರು. ಮದುವೆ ಮಾಡಿಕೊಂಡರೆ ನಿವೃತ್ತ ಜೀವನ ಸುಖವಾಗಿರುತ್ತದೆ ಎಂದು ನಂಬಿಸಿದ್ದರು. 

ಪಾರ್ಟ್‌ ಟೈಂ ಜಾಬ್ ಹೆಸರಿನಲ್ಲಿ ಮಹಿಳೆಗೆ 1.47 ಲಕ್ಷ ರೂ. ಉಂಡೇನಾಮ !

ಖದೀಮರ ಮಾತುಗಳನ್ನು ನಂಬಿದ್ದ ನಿವೃತ್ತ ಸೇನಾಧಿಕಾರಿ ಮದುವೆಯಾಗಲು ಒಪ್ಪಿಕೊಂಡಿದ್ದರು. ಅದರಂತೆಯೇ ಹುಡುಗಿ ತೋರಿಸುವುದಾಗಿ ಅವಳೊಂದಿಗೆ ಮದುವೆ ಮಾಡಿಸುವುದಾಗಿ ಪಕ್ಕಾ ಪ್ಲಾನ್ ಮಾಡಿಕೊಂಡು ನಿವೃತ್ತಕ ಸೇನಾಧಿಕಾರಿಯನ್ನ ಮಡಿಕೇರಿ ಹೋಂ ಸ್ಟೇಗೆ ಕರೆದುಕೊಂಡು ಬಂದಿದ್ದ ಆರೋಪಿಗಳು. ಹೋಂ ಸ್ಟೇನಲ್ಲೇ ಗೊತ್ತುಪಡಿಸಿದ ಮಹಿಳೆಯೊಬ್ಬಳೊಂದಿಗೆ ವಿವಾಹ ಮಾಡಿಸಿದ್ದ ಖದೀಮರು. ಬಳಿಕ ವಿವಾಹದ ಫೋಟೊಗಳನ್ನು ಇಟ್ಟುಕೊಂಡು ನಿವೃತ್ತ ಸೇನಾಧಿಕಾರಿಗೆ ಬ್ಲಾಕ್ ಮಾಡಲು ಶುರು ಮಾಡಿದ್ದಾರೆ. 

ಅಯ್ಯಪ್ಪ ಮಾಲೆ ಧರಿಸಿ ವಂಚನೆ; ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು!

10 ಲಕ್ಷ ಹಣಕ್ಕೆ ಬೇಡಿಕೆ ಇಟ್ಟ ಖದೀಮರು. ಹಣ ನೀಡದಿದ್ದರೆ ಮದುವೆ ಫೋಟೋ ನಿಮ್ಮ ಕುಟುಂಬದವರಿಗೆ ಕಳುಹಿಸುವುದಾಗಿ ಬ್ಲಾಕ್ ಮೇಲ್ ಮಾಡಿದ್ದಾರೆ. ಬ್ಲಾಕ್‌ಮೇಲ್ ಮಾಡಿ 8 ಲಕ್ಷ ನಗದು, 2.10 ಲಕ್ಷದ ಚೆಕ್ ಪಡೆದಿದ್ದ ಖದೀಮರು. ಬಳಿಕ ಅಲ್ಲಿಂದ ಕಾಲ್ಕಿತ್ತು ತಲೆಮರೆಸಿಕೊಂಡಿದ್ದರು. ಈ ಬಗ್ಗೆ ನಿವೃತ್ತ ಸೇನಾಧಿಕಾರಿ ಮಡಿಕೇರಿ ಪೊಲೀಸ್ ಠಾಣೆ ಬಗ್ಗೆ ದೂರು ನೀಡಿದ್ದರು. ಪ್ರಕರಣದ ಬೆನ್ನುಹತ್ತಿದ ಪೊಲೀಸರು ವಂಚಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಇನ್ನೊಬ್ಬ ಆರೋಪಿ ಅಮೀರ್ ತಲೆಮರೆಸಿಕೊಂಡಿದ್ದಾನೆ. ಬಂಧಿತರಿಂದ 1.05 ಲಕ್ಷ ರೂಪಾಯಿ ನಗದು 2.10 ಲಕ್ಷ ರೂಪಾಯಿಯ ಚೆಕ್ ವಶಕ್ಕೆ ಪಡೆದ ಪೊಲೀಸರು. 

Latest Videos
Follow Us:
Download App:
  • android
  • ios