ಬೆಂಗಳೂರು(ಆ. 23)  ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ  ಮೇಲೆ ಬೆಂಗಳೂರಿನಲ್ಲಿ ಗುಂಡಿನ ದಾಳಿ ಮಾಡಲಾಗಿದೆ. ಕೆ.ಆರ್‌ ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಉದ್ಯಮಿಯೊಬ್ಬರ ಮೇಲೆ ಐವರು ದುಷ್ಕರ್ಮಿಗಳ ತಂಡ ಗುಂಡಿನ ದಾಳಿ ನಡೆಸಿದೆ.  ಶನಿವಾರ ರಾತ್ರಿ ಗುಂಡಿನ ದಾಳಿಯಾಗಿದೆ.

ಆಟೋ ಡ್ರೈವರ್  ಮತ್ತು ಉದ್ಯಮಿಯಾಗಿರುವ ಬಾಬು ಎಂಬುವರ ಮೇಲೆ ದಾಳಿ ನಡೆದಿದ್ದು ಗಾಯಾಳು ಬಾಬು ಅವರನ್ನು ಕೆ ಆರ್ ಪುರ ಖಾಸಗಿ ಅಸ್ಪತ್ರೆಗೆ  ದಾಖಲಿಸಲಾಗಿದೆ. ಬಾಬು ಸಚಿವ ಭೈರತಿ ಬಸವರಾಜ್ ಅವರ ಬೆಂಬಲಿಗ.  ಮೊದಲು ಗುಂಡಿನ ದಾಳಿ ಮಾಡಿ ನಂತರ ಲಾಂದು ಮಚ್ಚಿನಿಂದ ಹಲ್ಲೆ  ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಕೆಲವರನ್ನು ಬಂಧಿಸಲಾಗಿದೆ. ಸುಹೈಲ್‌ ಆಂಡ್ ಟೀಂ ನಿಂದ ನಡೆದಿದ್ದ ಅಟ್ಯಾಕ್ ನಡೆದಿದೆ ಎನ್ನಲಾಗಿದೆ.

ನಶೆ ಏರಿಸುವ ಆಯಿಲ್ ಬೆಂಗಳೂರಲ್ಲಿ, ಸಿಕ್ಕಿದ್ದು ಬರೋಬ್ಬರಿ  40 ಲಕ್ಷದ ಮಾಲು!

ಘಟನೆಗೆ ಪ್ರಮುಖ ಕಾರಣ ಏನು ಎಂಬುವುದು ತಿಳಿದುಬಂದಿಲ್ಲ. ರಿಯಲ್ ಎಸ್ಟೇಟ್‌ ಉದ್ಯಮದ ಹಿನ್ನೆಲೆಯಲ್ಲಿ ವೈಯಕ್ತಿಕ ದ್ವೇಷದ ಕಾರಣದಿಂದ ಈ ದಾಳಿ ನಡೆದಿರುವ ಸಾಧ್ಯತೆ ಇದೆ ಎನ್ನಲಾಗಿದ್ದು ತನಿಖೆ ಮುಂದುವರಿದಿದೆ.