ಹೋಳಿ ಆಚರಣೆಗೆ ತೆರಳಿದ ಬಾಲಕಿ ಮೇಲೆ   ಲೈಂಗಿಕ ದೌರ್ಜನ್ಯ/  ಮನೆಗೆ ಮರಳುತ್ತಿದ್ದ ಬಾಲಕಿಯನ್ನು ಅಡ್ಡಹಾಕಿದ ಕಿರಾತಕರು/ ಬಾಲಕಿಯ ಬಟ್ಟೆ  ಹರಿದು ಕ್ರೌರ್ಯ ಮೆರೆದರು/ ಬಾಲಕಿ ತಾಯಿಯಿಂದ ದೂರು ಸಲ್ಲಿಕೆ

ಮೀರತ್( ಏ. 01) ಉತ್ತರ ಪ್ರದೇಶದಲ್ಲಿ ಮತ್ತೆ ಮತ್ತೆ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ವರದಿಯಾಗುತ್ತಲೇ ಇವೆ. ಹೋಳಿ ಆಚರಣೆ ವೇಳೆ ಬಾಲಕಿಯೊಬ್ಬಳಿಗೆ ಕಿರುಕುಳ ನೀಡಲಾಗಿದೆ.

ಪೂಜೆ ಮುಗಿಸಿ ಮನೆಗೆ ಬರುತ್ತಿದ್ದ ಯುವತಿಯನ್ನು ಅಡ್ಡ ಹಾಕಿ ದೌರ್ಜನ್ಯ ಎಸಗಲಾಗಿದ್ದು ಆಕೆಯ ಬಟ್ಟೆಗಳನ್ನು ಹರಿದು ಹಾಕಲಾಗಿದೆ. 

ಬ್ರಹ್ಮಪುರಿ ಪೊಲೀಸ್ ಠಾಣೆ ವ್ಯಾಪ್ತಿಯ ಸೂರ್ಯಪುರಂ ಪ್ರದೇಶದಲ್ಲಿ ಘಟನೆ ನಡೆದಿದೆ. ಸಂತ್ರಸ್ತೆ ಪೂಜೆ ನಡೆಸಿ ಮನೆಗೆ ಮರಳುತ್ತಿದ್ದಾಗ ಈ ಘಟನೆ ನಡೆದಿದೆ.

ಸಿಡಿ ಕೇಸ್ ನ ಒಂದೊಂದೆ ಮುಖಗಳು ಬಹಿರಂಗ

ಮನೆಗೆ ಬರುತ್ತಿದ್ದ 10 ನೇ ತರಗತಿಯ ವಿದ್ಯಾರ್ಥಿನಿಗೆ ಟೀಸಿಂಗ್‌ ಮಾಡಲಾಗಿದ್ದು ಆಕೆಯ ಬಟ್ಟೆಗಳನ್ನು ಹರಿದು ಹಾಕಲಾಗಿದೆ. ಬಾಲಕಿ ವಿರೋಧಿಸಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿಸ್ದಾರೆ.

ಬಾಲಕಿಯ ತಾಯಿ ಸ್ಥಳೀಯ ನ್ಯಾಯಾಲಯದಲ್ಲಿ ಕೆಲಸ ಮಾಡುತ್ತಿದ್ದಾರೆ ಮಾರ್ಚ್ 29 ರಂದು ಹುಡುಗಿ ಹೋಳಿ ಆಡಲು ತನ್ನ ಸ್ನೇಹಿತನ ಸ್ಥಳಕ್ಕೆ ಹೋದಾಗ ಈ ಘಟನೆ ನಡೆದಿದೆ. 

ಹೋಳಿ ಆಡಿಕೊಂಡು ದೇವಾಲಯಕ್ಕೆ ಬಾಲಕಿ ತೆರಳಿದ್ದಳು. ಅಲ್ಲಿಂದ ವಾಪಸ್ ಬರುವಾಗ ದುಷ್ಕರ್ಮಿಗಳ ತಂಡ ಆಕೆಯನ್ನು ಅಡ್ಡ ಹಾಕಿದೆ. ಆಕೆಯ ಮೇಲೆ ಅಶ್ಲೀಲ ಮಾತುಗಳನ್ನು ಆಡಿದ್ದಾರೆ. ಸ್ಥಳಕ್ಕೆ ಹೋದ ಬಾಲಕಿ ಸಹೋದರನಿಗೆ ಬೆದರಿಕೆ ಹಾಕಲಾಗಿದೆ. 

ಪೊಲೀಸರು ಆರೋಪಿಗಳ ಮೇಲೆ ಹಲ್ಲೆ, ಲೈಂಗಿಕ ಕಿರುಕುಳ ಮತ್ತು ಎಸ್‌ಸಿ / ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಇನ್ಸ್‌ಪೆಕ್ಟರ್ ಸುಭಾಷ್ ಅತ್ರಿ ಮಾತನಾಡಿ, ಆರೋಪಿಗಳನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ.