Asianet Suvarna News Asianet Suvarna News

ಆಂಜ​ನೇಯ ವಿಗ್ರ​ಹಕ್ಕೆ ಬೆಂಕಿ ಹಚ್ಚಿ ಹುಂಡಿ ಕದ್ದ ಖದೀಮರು

ಆಂಜ​ನೇಯ ಸ್ವಾಮಿ ದೇವಾ​ಲಯ ಹಾಗೂ ವಿಗ್ರ​ಹಕ್ಕೆ ಬೆಂಕಿ ಹಚ್ಚಿ, ದೇವರ ಪೋಟೋ​ಗ​ಳನ್ನು ಧ್ವಂಸ ಮಾಡಿದ ಕಿಡಿಗೇಡಿಗಳು| ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ನಡೆದ ಘಟನೆ| ಹುಂಡಿ​ 500 ಮೀ. ದೂರ ತೆಗೆ​ದು​ಕೊಂಡು ಹೋಗಿ ಅದರಲ್ಲಿದ್ದ ಹಣ ದೋಚಿದ ಕಿಡಿಗೇಡಿಗಳು| 

Miscreants Fire on Anjaneya Temple in Nelamangala grg
Author
Bengaluru, First Published Feb 12, 2021, 2:52 PM IST

ನೆಲ​ಮಂಗಲ(ಫೆ.12): ರಾಷ್ಟ್ರೀಯ ಹೆದ್ದಾ​ರಿಗೆ ಹೊಂದಿ​ಕೊಂಡಿರುವ ಸರ್ಕಲ್‌ ಆಂಜ​ನೇಯ ಸ್ವಾಮಿ ದೇವಾ​ಲಯ ಹಾಗೂ ವಿಗ್ರ​ಹಕ್ಕೆ ಬೆಂಕಿ ಹಚ್ಚಿ, ದೇವರ ಪೋಟೋ​ಗ​ಳನ್ನು ಧ್ವಂಸ ಮಾಡಿರುವ ಕೃತ್ಯ ಬುಧವಾರ ತಡರಾತ್ರಿ ನಡೆದಿದೆ.

ಮೊದಲಿಗೆ ದೇವಾ​ಲ​ಯದ ಪಕ್ಕ​ದ​ಲ್ಲಿ​ರು​ವ ಮಂಗಳಮುಖಿಯರ ಮನೆಯ ಬಾಗಿ​ಲ ಚಿಲ​ಕ​ವನ್ನು ಲಾಕ್‌ ಮಾಡಿದ್ದು, ಬಳಿಕ ದೇವಾ​ಲ​ಯದ ಬಾಗಿಲ ಬೀಗ ಒಡೆದು ಕೃತ್ಯ ಎಸಗಿದ್ದಾರೆ.

ದನ ಕದಿಯಲು ಬಂದ ವ್ಯಕ್ತಿ ಅನುಮಾನಾಸ್ಪದ ಸಾವು: ಕಾರಣ..?

ಹುಂಡಿ​ಯನ್ನು 500 ಮೀ. ದೂರ ತೆಗೆ​ದು​ಕೊಂಡು ಹೋಗಿ ಅದರಲ್ಲಿದ್ದ ಹಣ ದೋಚಿದ್ದಾರೆ. ಹುಂಡಿ​ ಹ​ಣ​ವನ್ನು ಕಳ್ಳ​ತನ ಮಾಡುವ ಜೊತೆಗೆ ದೇವರ ನಾಮ​ಫ​ಲಕ ಹಿತ್ತಾಳೆ, ಆಂಜ​ನೇ​ಯನ ವಿಗ್ರಹ ಪುಡಿ​ಪುಡಿ ಮಾಡಿ​ದ್ದಾ​ರೆ.
 

Follow Us:
Download App:
  • android
  • ios