Asianet Suvarna News Asianet Suvarna News

ಚಿತ್ತಾಪುರ: ನಿಧಿ ಆಸೆಗೆ ಶಿವಲಿಂಗ ಕಿತ್ತು ಅಗೆದಿರುವ ದುಷ್ಕರ್ಮಿಗಳು!

ನಿಧಿ ಆಸೆಗಾಗಿ ದುಷ್ಕರ್ಮಿಗಳು ಚಿತ್ತಾಪುರ ತಾಲೂಕಿನ ನಾಲವಾರ ವಲಯದ ಸೂಗೂರ (ಎನ) ಗ್ರಾಮದ ಹೊರ ವಲಯದ ಹೊಲದಲ್ಲಿರುವ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದಲ್ಲಿದ್ದ ಶಿವಲಿಂಗವನ್ನು ಕಿತ್ತು, ಲಿಂಗದ ಅಡಿಯಲ್ಲಿ ಅಗೆದಿದ್ದಾರೆ.

Miscreants dug up Shivlinga for treasure in chittapur at kalaburgi rav
Author
First Published Jun 5, 2023, 5:40 AM IST

ಶಹಾಬಾದ (ಜೂ.5) : ನಿಧಿ ಆಸೆಗಾಗಿ ದುಷ್ಕರ್ಮಿಗಳು ಚಿತ್ತಾಪುರ ತಾಲೂಕಿನ ನಾಲವಾರ ವಲಯದ ಸೂಗೂರ (ಎನ) ಗ್ರಾಮದ ಹೊರ ವಲಯದ ಹೊಲದಲ್ಲಿರುವ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದಲ್ಲಿದ್ದ ಶಿವಲಿಂಗವನ್ನು ಕಿತ್ತು, ಲಿಂಗದ ಅಡಿಯಲ್ಲಿ ಅಗೆದಿದ್ದಾರೆ.

ಗ್ರಾಮದಿಂದ ಸುಮಾರು 1ಕಿ.ಮೀ. ದೂರದಲ್ಲಿರುವ ಹೊಲದಲ್ಲಿ ಈ ದೇವಸ್ಥಾನವಿದ್ದು, ಶನಿವಾರ ಬೆಳಗೆ ಹೊಲಕ್ಕೆ ಹೋದ ರೈತರು, ಕುರಿಗಾಯಿಗಳು ಲಿಂಗ ಯಥಾಸ್ಥಳದಲ್ಲಿ ಇರುವದನ್ನು ನೋಡಿದ್ದರು ಎನ್ನಲಾಗಿದೆ. ಶನಿವಾರ ರಾತ್ರಿ ಈ ಘಟನೆ ನಡೆದಿದೆ ಎಂದು ಶಂಕಿಸಲಾಗಿದೆ.

ಕಾರಹುಣ್ಣಿಮ ನಿಮಿತ್ತ ಭಾನುವಾರ ಬೆಳಗ್ಗೆ ಲಿಂಗಕ್ಕೆ ಪೂಜೆ ಮಾಡಲು ಹೋದ ಮುದಕಪ್ಪ ಪೂಜಾರಿ​ಗೆ ಈ ಘಟನೆ ಕಂಡು ಬಂದಿದ್ದು, ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ. ಸುಮಾರು 2.5 ಅಡಿ ಎತ್ತರ ಇರುವ ಲಿಂಗವನ್ನು ಎತ್ತಿ ಪಕ್ಕಕ್ಕೆ ಇಟ್ಟು, ಅದರ ಅಡಿಯಲ್ಲಿದ್ದ ಬಂಡೆಯನ್ನು ತೆಗೆದು ನೆಲ ಅಗೆಯಲಾಗಿದೆ.

ನಿಧಿ ಆಸೆಗೆ ಪುರಾತನ ಕಾಲದ ಆಂಜನೇಯ ದೇವಾಲಯದ ಗರ್ಭಗುಡಿ ಅಗೆದ ದುಷ್ಕರ್ಮಿಗಳು!

ಈ ಹಿಂದೆ ಇದೇ ದೇವಸ್ಥಾನದ ಎದುರಿನ ಮಾನ ಕಂಭ, ದ್ವಾರದ ಬಳಿ ಅಗೆಯಲಾಗಿತ್ತು ಎನ್ನಲಾಗಿದೆ. 4-5 ವರ್ಷಗಳ ಹಿಂದೆ ಗ್ರಾಮದ ಶ್ರೀರಾಮಲಿಂಗೇಶ್ವರ ಹಾಗೂ ಈಶ್ವರ ದೇವಸ್ಥಾನದಲ್ಲಿಯೂ ಕಳ್ಳತನ ವಿಫಲ ಯತ್ನ ನಡೆಸಲಾಗಿತ್ತು. ಘಟನಾ ಸ್ಥಳಕ್ಕೆ ವಾಡಿ ಪೊಲೀಸ್‌ ಠಾಣೆ ಪೋಲಿಸರು ಭೇಟ್ಟಿನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ತನಿಖೆ ಕೈಗೊಂಡಿದ್ದಾರೆ.

ಉತ್ತರಕನ್ನಡ: ನಿಧಿ ಆಸೆಗೆ ಬಿದ್ದು ಬಾವಿ ತೋಡಿದ ಖದೀಮರು..!

Follow Us:
Download App:
  • android
  • ios