ಧಾರವಾಡ(ಮಾ.24): ಬಿಡಾಡಿ ಗೋವುಗಳನ್ನು ವಾಹನದ ಮೂಲಕ ಕದ್ದೊಯ್ಯುತ್ತಿದ್ದ ತಂಡದ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ಕಳ್ಳತನದ ತಂಡವನ್ನು ಬಂಧಿಸುವಂತೆ ಭಜರಂಗದಳ, ವಿಶ್ವ ಹಿಂದು ಪರಿಷತ್‌ ಸದಸ್ಯರು ಆಗ್ರಹಿಸಿದ್ದಾರೆ. 

ಭಾನುವಾರ ತಡರಾತ್ರಿ ಕೆಲಗೇರಿಯ ವೈದ್ಯಮಠ ಕಾಂಪ್ಲೆಕ್ಸ್‌ ಬಳಿ ಕಾರಿನಲ್ಲಿ ಬಂದಿದ್ದ ಕಳ್ಳರು ಗೋವುಗಳು ಕಳ್ಳತನ ಮಾಡಿದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. 

ಕೊಟ್ಟಿಗೆಗೆ ನುಗ್ಗಿ ಹಸುಗಳ ಕಳವು: ಸಿನಿಮೀಯ ಮಾದರಿಯಲ್ಲಿ ಚೇಸ್..!

ಮೊದಲಿಗೆ ಒಂದು ಗೋವನ್ನು ಬೇರೆ ಕಡೆಯಿಂದ ಕಾರಿನಲ್ಲಿ ಹಾಕಿಕೊಂಡು ಬಂದಿದ್ದ ಕಳ್ಳರ ತಂಡ ಕಾಂಪ್ಲೆಕ್ಸ್‌ ಬಳಿ ಬಂದು ಮತ್ತೊಂದು ಗೋವನ್ನು ಹಾಕಿಕೊಂಡಿದ್ದಾರೆ. ಸಿಸಿ ಟಿವಿ ದೃಶ್ಯಗಳನ್ನು ಆಧರಿಸಿ ಉಪನಗರ ಪೊಲೀಸ್‌ ಠಾಣೆಯಲ್ಲಿ ಸ್ಥಳಿಯರು ಪ್ರಕರಣ ದಾಖಲಾಗಿದ್ದು ಕಳ್ಳರ ಬಂಧನಕ್ಕೂ ಆಗ್ರಹಿಸಲಾಗಿದೆ.