ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಕಳ ಹೆಸರಿನಲ್ಲಿ ವಂಚನೆ ಯತ್ನ
ಮಾಜಿ ಪ್ರಧಾನಿಗಳ ಸಾಮಾಜಿಕ ಜಾಲತಾಣ ನಿರ್ವಹಣೆ ಮಾಡುತ್ತಿರುವ ಆರ್. ನಾರಾಯಣಪ್ಪ ಎಂಬುವರಿಂದ ದೂರು| ಫೇಸ್‌ಬುಕ್‌ನಲ್ಲಿ ಎಚ್.ಡಿ.ದೇವೇಗೌಡರವರ ಮೊಮ್ಮಗ ಎಂದು ನಿಶಾಂತ್ ಖಾತೆ ತೆರೆದಿದ್ದ| ಈ ಖಾತೆಯಲ್ಲಿ ತಾನು ರೋಲ್ಸ್ ರಾಯ್ ಕಾರನ್ನು ಖರೀದಿಗೆ ತೆರಳಿರುವುದಾಗಿ ಹೇಳಿ ವಿಡಿಯೋ ಆಪ್ ಲೋಡ್ ಮಾಡಿದ್ದ. ಈ ವಿಡಿಯೋ ವೈರಲ್|

ಬೆಂಗಳೂರು(ಸೆ.09): ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮೊಮ್ಮಕ್ಕಳು ಎಂದು ಹೇಳಿಕೊಂಡು ರೋಲ್ಸ್ ರಾಯ್ ಕಾರು ಮಾರಾಟದ ಹೆಸರಿನಲ್ಲಿ ಸಾರ್ವಜನಿಕರಿಗೆ ದುಷ್ಕರ್ಮಿಗಳು ವಂಚಿಸಲು ಯತ್ನಿಸಿದ್ದಾರೆ ಎಂದು ಆರೋಪಿಸಿ ಬನಶಂಕರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಶಾಂತ್ ಹಾಗೂ ಪ್ರದೀಪ್ ಎಂಬುವರೇ ಈ ಕೃತ್ಯ ಎಸಗಿದ್ದು, ಮಾಜಿ ಪ್ರಧಾನಿಗಳ ಸಾಮಾಜಿಕ ಜಾಲತಾಣ ನಿರ್ವಹಣೆ ಮಾಡುತ್ತಿರುವ ಆರ್. ನಾರಾಯಣಪ್ಪ ಎಂಬುವರು ದೂರು ನೀಡಿದ್ದಾರೆ.
ಹಾಸನ : ಜನರನ್ನು ಬೆಚ್ಚಿ ಬೀಳಿಸಿದ ಜೋಡಿ ಕೊಲೆ
ಫೇಸ್‌ಬುಕ್‌ನಲ್ಲಿ ಎಚ್.ಡಿ.ದೇವೇಗೌಡರವರ ಮೊಮ್ಮಗ ಎಂದು ನಿಶಾಂತ್ ಖಾತೆ ತೆರೆದಿದ್ದ. ಈ ಖಾತೆಯಲ್ಲಿ ತಾನು ರೋಲ್ಸ್ ರಾಯ್ ಕಾರನ್ನು ಖರೀದಿಗೆ ತೆರಳಿರುವುದಾಗಿ ಹೇಳಿ ವಿಡಿಯೋ ಆಪ್ ಲೋಡ್ ಮಾಡಿದ್ದ. ಈ ವಿಡಿಯೋ ವೈರಲ್ ಆಗಿದೆ. ಇದೇ ರೀತಿ ಮತ್ತೊಬ್ಬ ಪ್ರದೀಪ್, ಸಹ ನಾನು ದೇವೇಗೌಡರ ಮೊಮ್ಮಗ. ಸರ್ಕಾರದ ವಿವಿಧ ಕೆಲಸಗಳನ್ನು ಮಾಡಿಸಿಕೊಡುತ್ತೇನೆ ಎಂದು ಹೇಳಿ ಜನರನ್ನು ಮೋಸಗೊಳಿಸಲು ಯತ್ನಿಸಿದ್ದಾನೆ. ಈ ಆರೋಪಿಗಳ ಪತ್ತೆಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.