Asianet Suvarna News Asianet Suvarna News

ಹಾಸನ : ಜನರನ್ನು ಬೆಚ್ಚಿ ಬೀಳಿಸಿದ ಜೋಡಿ ಕೊಲೆ

ಹಾಸನದಲ್ಲಿ ನಡೆದ ಜೋಡಿ ಕೊಲೆ ಇದೀಗ ಇಲ್ಲಿನ ಜನರನ್ನು ಬೆಚ್ಚಿ ಬಿಳಿಸುವಂತೆ ಮಾಡಿದೆ. ದುಷ್ಕರ್ಮಿಗಳು ದಂಪತಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ.

Old Couple Found Murdered inside Of house in Holenarasipura
Author
Bengaluru, First Published Aug 30, 2020, 12:28 PM IST

ಹಾಸನ (ಆ.30): ಹಾಸನ ಜಿಲ್ಲೆಯಲ್ಲಿ ಸರಣಿ ಹತ್ಯೆ ಪ್ರಕರಣಗಳು ಮುಂದುವರಿದಿದ್ದು, ಜೋಡಿ ಹತ್ಯೆಯಿಂದ ಜನರು ಬೆಚ್ಚಿ ಬಿದ್ದಿದ್ದಾರೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹಾಲುಗೋಡನಹಳ್ಳಿಯಲ್ಲಿ ವೃದ್ಧ ದಂಪತಿಯನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. 

ಪತ್ನಿ ಕೊಂದು, ಆತ್ಮಹತ್ಯೆಗೆ ಶರಣಾದ ಪತಿ: ಅನಾಥರಾದ ಇಬ್ಬರು ಮಕ್ಕಳು...

ಹಾಲುಗೊಂಡನಹಳ್ಳಿಯ ಮುರಳಿಧರ್ (80), ಉಮಾದೇವಿ (70) ಎಂಬ ದಂಪತಿ ಕೊಲೆ ಮಾಡಿದ್ದು, ಆಸ್ತಿ ವಿಚಾರದಲ್ಲಿ ನಡೆದ ಕಲಹದಿಂದ ಈ ಕೃತ್ಯ ಎಸಗಿರಬಹುದಾದ ಶಂಕೆ ವ್ಯಕ್ತವಾಗಿದೆ. 

ಉಸಿರು ಗಟ್ಟಿಸಿ ದಂಪತಿ ಕೊಲೆ ಮಾಡಿರಬಹುದಾದ ಶಂಕೆ ವ್ಯಕ್ತವಾಗಿದ್ದು, ಮನೆಯಲ್ಲಿ ವಸ್ತುಗಳನ್ನು ಚಲ್ಲಾಪಿಲ್ಲಿ ಮಾಡಲಾಗಿದೆ.

ಸುರೇಶ್ ರೈನಾ ಕುಟುಂಬಕ್ಕೆ ಶಾಕ್, ದರೋಡೆಕೋರರಿಂದ ಕ್ರಿಕೆಟರ್ ಮಾವನ ಹತ್ಯೆ!...

ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

Follow Us:
Download App:
  • android
  • ios