*  ಮಳಿಗೆಯ ಬಳಿಯ ಸ್ಟೇರ್‌ ಕೇಸ್‌ಗೆ ತಡಗನ್ನಿಟ್ಟು ಗೋಡೆ ಕೊರೆದ ದರೋಡೆಕೋರರು*  ಬೆಂಗಳೂರಿನ ಸಾರಾಯಿಪಾಳ್ಯದಲ್ಲಿ ನಡೆದ ಘಟನೆ*  ಮೆಟ್ಟಿಲ ಮರೆಯಲ್ಲಿ ಕುಳಿತು ಕೃತ್ಯ 

ಬೆಂಗಳೂರು(ಫೆ.24): ಗೋಡೆ ಕೊರೆದು ಚಿನ್ನಾಭರಣ ಮಳಿಗೆಗೆ ಕನ್ನ ಹಾಕಿ 1 ಕೇಜಿ ಬಂಗಾರ ದೋಚಿ ದುಷ್ಕರ್ಮಿಗಳು(Miscreants) ಪರಾರಿಯಾಗಿರುವ ಘಟನೆ ಸಾರಾಯಿಪಾಳ್ಯದ ಥಣಿಸಂದ್ರ ಮುಖ್ಯರಸ್ತೆಯಲ್ಲಿ ನಡೆದಿದೆ. ಥಣಿಸಂದ್ರ ಮುಖ್ಯರಸ್ತೆಯ ರಾಘವೇಂದ್ರ ಜ್ಯುವೆಲ​ರ್ಸ್‌ ಮತ್ತು ಬಾಲಾಜಿ ಬ್ಯಾಂಕ​ರ್ಸ್‌ ಮಳಿಗೆಯಲ್ಲೇ ಮಂಗಳವಾರ ರಾತ್ರಿ 2ರ ಸುಮಾರಿಗೆ ದರೋಡೆ(Robbery) ನಡೆದಿದ್ದು, ಅಂಗಡಿ ಬಾಗಿಲು ತೆರೆಯಲು ಬುಧವಾರ ಬೆಳಗ್ಗೆ ಸಿಬ್ಬಂದಿ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೆಟ್ಟಿಲ ಮರೆಯಲ್ಲಿ ಕುಳಿತು ಕೃತ್ಯ:

ಚಿನ್ನಾಭರಣ ವ್ಯಾಪಾರಿ ಏಳಗೋವನ್‌ ಅವರು, ಐದಾರು ವರ್ಷಗಳಿಂದ ಥಣಿಸಂದ್ರ ರಸ್ತೆಯಲ್ಲಿ ‘ರಾಘವೇಂದ್ರ ಜ್ಯುವೆಲ​ರ್ಸ್‌ ಮತ್ತು ಬಾಲಾಜಿ ಬ್ಯಾಂಕ​ರ್ಸ್‌’ ಹೆಸರಿನ ಆಭರಣ ಮಾರಾಟ ಮಳಿಗೆ ನಡೆಸುತ್ತಿದ್ದಾರೆ. ಪ್ರತಿ ದಿನ ಬೆಳಗ್ಗೆ 9ರಿಂದ ರಾತ್ರಿ 8.30ರ ವರೆಗೆ ಅವರು ವ್ಯವಹರಿಸಿ ನಂತರ ಬಂದ್‌ ಮಾಡುತ್ತಿದ್ದರು. ಮಂಗಳವಾರ ರಾತ್ರಿ ಸಹ ರಾತ್ರಿ 8.30ರ ಸುಮಾರಿಗೆ ವ್ಯಾಪಾರ ಮುಗಿಸಿ ಏಳಗೋವನ್‌ ತೆರಳಿದ್ದರು.

Bengaluru Crime: ಮನೆ ಮಾಲೀಕರ ಕಟ್ಟಿಹಾಕಿ 88 ಲಕ್ಷ ದೋಚಿದ ಖದೀಮರು

ಆ ಮಳಿಗೆಗೆ ಹೊಂದಿಕೊಂಡಂತೆ ಮೊದಲ ಮಹಡಿಗೆ ತೆರಳುವ ಮೆಟ್ಟಿಲುಗಳಿವೆ (ಸ್ಟೇರ್‌ ಕೇಸ್‌). ಅದರ ಪಕ್ಕದಲ್ಲಿ ಮೆಡಿಕಲ್‌ ಸ್ಟೋರ್‌ ಸಹ ಇದೆ. ಮಂಗಳವಾರ ರಾತ್ರಿ 12ರವರೆಗೆ ಮೆಡಿಕಲ್‌ ಸ್ಟೋರ್‌ನಲ್ಲಿ ವಹಿವಾಟು ನಡೆದಿದೆ. ನಂತರ ಚಿನ್ನಾಭರಣ ಮಾರಾಟ ಮಳಿಗೆಗೆ ಆರೋಪಿಗಳು(Accused) ಕನ್ನ ಹಾಕಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಚಿನ್ನಾಭರಣ ಮಳಿಗೆಗೆ ಹೊಂದಿಕೊಂಡ ಶಟರ್‌ ಕೇಸ್‌ ಬಳಿ ಬಂದು ರಾತ್ರಿ 2ರ ಸುಮಾರಿಗೆ ಅಡಗಿ ಕುಳಿತ ಆರೋಪಿಗಳು, ಸ್ಟೇರ್‌ ಕೇಸ್‌ ಹೊರಗೆ ಗೊತ್ತಾಗದಂತೆ ತಗಡಿನಿಂದ ಮುಚ್ಚಿದ್ದಾರೆ. ಆನಂತರ ಡ್ರಿಲ್ಲಿಂಗ್‌ ಮೆಷಿನ್‌ ಬಳಸಿ ಸುಮಾರು ಎರಡೂವರೆ ಅಡಿಯಷ್ಟು ಆಭರಣ ಮಳಿಗೆಯ ಗೋಡೆ ಕೊರೆದು ದುಷ್ಕರ್ಮಿಗಳು ಒಳ ಪ್ರವೇಶಿಸಿದ್ದಾರೆ. ಬಳಿಕ ಅಂಗಡಿಯ ಲಾಕರ್‌ನಲ್ಲಿಟ್ಟಿದ್ದ ಸುಮಾರ 1 ಕೇಜಿ ಒಡವೆ ದೋಚಿ ಪರಾರಿಯಾಗಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಈ ಅಂಗಡಿಗೆ ಸಿಸಿಟಿವಿ(CCTV) ಕ್ಯಾಮೆರಾ ಕೂಡಾ ಅಳವಡಿಸಿರಲಿಲ್ಲ. ಹೀಗಾಗಿ ಕನ್ನ ಹಾಕುವ ಮುನ್ನ ಅಂಗಡಿಯ ಸುತ್ತಮುತ್ತಲ ಭದ್ರತಾ ವ್ಯವಸ್ಥೆಗೆ ಬಗ್ಗೆ ಮಾಹಿತಿ ಕಲೆ ಹಾಕಿ ಸೂಕ್ತ ಪೂರ್ವ ಸಿದ್ಧತೆ ಮಾಡಿಕೊಂಡೇ ಆರೋಪಿಗಳು ಕೃತ್ಯ ಎಸಗಿದ್ದಾರೆ. ರಾಘವೇಂದ್ರ ಜ್ಯುವೆಲ​ರ್ಸ್‌ ಸಮೀಪದ ಅಂಗಡಿಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಇಬ್ಬರ ಚಲನವಲನ ಸೆರೆಯಾಗಿದ್ದು, ಈ ಕೃತ್ಯದಲ್ಲಿ ಇಬ್ಬರಿಗಿಂತ ಹೆಚ್ಚಿನ ಜನರು ಪಾಲ್ಗೊಂಡಿರುವ ಶಂಕೆ ಇದೆ ಎಂದು ಪೊಲೀಸರು(Police) ತಿಳಿಸಿದ್ದಾರೆ.

ಈ ಸಂಬಂಧ ಹೆಣ್ಣೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Vijayapura Kidnap Case: 8 ಗಂಟೆಯಲ್ಲೇ ಐವರು ಅಪಹರಣಕಾರರ ಹೆಡೆಮುರಿ ಕಟ್ಟಿದ ಪೊಲೀಸರು

ಥಣಿಸಂದ್ರ ಮುಖ್ಯರಸ್ತೆಯ ಆಭರಣ ಅಂಗಡಿಗೆ ಕನ್ನ ಹಾಕಿರುವ ಆರೋಪಿಗಳ ಸುಳಿವು ಪತ್ತೆಯಾಗಿದೆ. ಶೀಘ್ರವೇ ಅವರನ್ನು ಪತ್ತೆ ಹಚ್ಚುತ್ತೇವೆ. ಇದೊಂದು ಪಕ್ಕಾ ಪೂರ್ವನಿಯೋಜಿತ ಕೃತ್ಯವಾಗಿದೆ ಅಂತ ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್‌ ಗುಳೇದ್‌ ತಿಳಿಸಿದ್ದಾರೆ.

ವೃದ್ಧೆಯ ಕೈ-ಕಾಲು ಕಟ್ಟಿ ಒಡವೆ ದೋಚಿದ್ದವ ಅರೆಸ್ಟ್‌

ಬೆಂಗಳೂರು: ಬಾಡಿಗೆಗೆ ಮನೆ ಕೇಳುವ ನೆಪದಲ್ಲಿ ಮನೆಗೆ ಹೋಗಿ ವೃದ್ಧೆಯೊಬ್ಬರ ಕೈ-ಕಾಲು ಕಟ್ಟಿಹಾಕಿ ಚಿನ್ನಾಭರಣ(Gold) ದೋಚಿದ್ದ ಕಿಡಿಗೇಡಿಯೊಬ್ಬ ಜ್ಞಾನಭಾರತಿ ಠಾಣೆ ಪೊಲೀಸರಿಗೆ(Police) ಸಿಕ್ಕಿಬಿದ್ದಿದ್ದಾನೆ.

ಬಾಲಾಜಿ ಲೇಔಟ್‌ ನಿವಾಸಿ ಕಿರಣ್‌ ಕುಮಾರ್‌ ಬಂಧಿತ. ಆರೋಪಿಯಿಂದ(Accused)9 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿಯಾಗಿದೆ. ಕೆಲ ದಿನಗಳ ಹಿಂದೆ ಸರ್‌ ಎಂ.ವಿಶ್ವೇಶ್ವರಯ್ಯ ಲೇಔಟ್‌ನ 6ನೇ ಹಂತದ ರಾಜ್ಯ ಆರೋಗ್ಯ ಇಲಾಖೆಯ ನಿವೃತ್ತ ಉದ್ಯೋಗಿ ಶಾಂತಮ್ಮ(70) ಅವರ ಮನೆಯಲ್ಲಿ ಆರೋಪಿ ಈ ಕೃತ್ಯ ಎಸಗಿದ್ದ. ಪ್ರಕರಣದ ತನಿಖೆ ನಡೆಸಿದ ಇನ್ಸ್‌ಪೆಕ್ಟರ್‌ ಲಕ್ಷ್ಮಣ್‌ ನಾಯಕ್‌ ತಂಡವು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.