Vijayapura Kidnap Case: 8 ಗಂಟೆಯಲ್ಲೇ ಐವರು ಅಪಹರಣಕಾರರ ಹೆಡೆಮುರಿ ಕಟ್ಟಿದ ಪೊಲೀಸರು

*   ಬೇಕರಿ ಮಾಲೀಕನ ಅಪಹರಣ ಮಾಡಿ 20 ಲಕ್ಷ ಹಣದ ಬೇಡಿಕೆ ಇಟ್ಟಿದ್ದ ದುಷ್ಕರ್ಮಿಗಳು
*   ಪ್ರಕರಣವನ್ನು ಚಾಣಾಕ್ಷತನದಿಂದ ಬೇಧಿಸಿದ ಪೊಲೀಸರು
*   ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗುವವರ ವಿರುದ್ಧ ಕ್ರಮ ಖಚಿತ
 

Five Accused Arrested For Kidnap Case in Vijayapura grg

ಇಂಡಿ(ಫೆ.23):  ಬೇಕರಿ ಮಾಲೀಕನನ್ನು ಅಪಹರಣ(Kidnap) ಮಾಡಿ 20 ಲಕ್ಷ ಹಣದ ಬೇಡಿಕೆ ಇಟ್ಟಿದ್ದ ಆರೋಪಿಗಳನ್ನು(Accused) ಕೇವಲ ಎಂಟು ಗಂಟೆಯೊಳಗೆ ಬಂಧಿಸಿ ಬೇಕರಿ ಮಾಲೀಕನನ್ನು ರಕ್ಷಣೆ ಮಾಡಲಾಗಿದೆ ಎಂದು ಎಸ್ಪಿ ಎಚ್‌.ಡಿ. ಆನಂದಕುಮಾರ ಹೇಳಿದರು.

ಅಗರಖೇಡದ ಷಣ್ಮುಖ ಕಾಂಬಳೆ (24), ರಿಯಾಜ ಮುಜಾವರ (25), ದೇವರನಿಂಬರಗಿಯ ಉತ್ತಮ ಹೋಕುಳೆ (35), ದಿಲೀಪ ಗಾಡಗೆ (40), ಚಡಚಣದ ರಾಮಚಂದ್ರ ಅಪ್ಪು ಜಾಧವ ಬಂಧಿತ(Arrest) ಆರೋಪಿಗಳು. ಈ ಕುರಿತು ಮಂಗಳವಾರ ಪಟ್ಟಣದ ಇಂಡಿ ಶಹರ ಪೊಲೀಸ್‌ ಠಾಣೆಯ ಆವರಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.

Five Accused Arrested For Kidnap Case in Vijayapura grg

Bengaluru Pistol Mafia: ಸ್ಯಾಟಲೈಟ್‌ ಬಸ್‌ ನಿಲ್ದಾಣದಲ್ಲಿ ಪಿಸ್ತೂಲ್‌, 5 ಜೀವಂತ ಗುಂಡು ಜಪ್ತಿ: ಇಬ್ಬರ ಸೆರೆ!

ಜಿಲ್ಲೆಯಲ್ಲಿ ಗೂಂಡಾಗಿರಿ ಕಾನೂನು ಬಾಹಿರ ಚಟುವಟಿಕೆಗಳನ್ನು(Illegal Activities) ತೊಡಗುವವರನ್ನು ಪೊಲೀಸರು ಸುಮ್ಮನೆ ಬಿಡುವುದಿಲ್ಲ. ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗುವವರ ವಿರುದ್ಧ ಕ್ರಮ ಖಚಿತ. ಕಿಡ್ನಾಪ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 5 ಜನ ಆರೋಪಿಗಳಬನ್ನು ಬಂಧಿಸಲಾಗಿದೆ ಎಂದು ಹೇಳಿದರು.

ಘಟನೆ ವಿವರ:

ಪಟ್ಟಣದಲ್ಲಿ ಬೇಕರಿ ಅಂಗಡಿ ಇಟ್ಟುಕೊಂಡಿದ್ದ ಮಾನಸಿಂಗ್‌ ಎಂಬುವವರನ್ನು ಸೋಮವಾರ ಸಂಜೆ 7 ಗಂಟೆ ಸುಮಾರಿಗೆ ವಿಜಯಪುರ ರಸ್ತೆಯ ಭಾರತ ಗ್ಯಾಸ್‌ ಏಜೆನ್ಸಿ ಬಳಿ ಕಾರ್‌ನಲ್ಲಿ ಹಾಕಿಕೊಂಡು ಹೋಗಿ 20 ಲಕ್ಷ ಹಣಕ್ಕೆ(Money) ಬೇಡಿಕೆ ಇಟ್ಟಿದ್ದರು. ಕಿಡ್ನಾಪ್‌ ಮಾಡಿ ಬೇಕರಿ ಮಾಲೀಕನ ಕೈ ಹಾಗೂ ಕಾಲಿಗೆ ಚಾಕುವಿನಿಂದ ಚುಚ್ಚಿ ಗಾಯಗೊಳಿಸಿದ್ದಾರೆ. ಇಂಡಿ ಪೊಲೀಸರು(Police) ಮಿಂಚಿನ ಕಾರ್ಯಾಚರಣೆ ನಡೆಸಿದ್ದರ ಪರಿಣಾಮ ಲೋಣಿ ಕ್ರಾಸ್‌ ಬಳಿ ಆರೋಪಿತರ ಕಾರು ಬೆನ್ನಟ್ಟಿ ಕಾರು ಸಮೇತ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಪಹರಣ ಆಗಿರುವ ಮಾನಸಿಂಗ್‌ನ ಪತ್ನಿ ದೂರು ಸಲ್ಲಿಸಿದ್ದರು. ಆಕೆಗೆ ಪತಿ ಮಾನಸಿಂಗ್‌ ಕರೆ ಮಾಡಿ, ಭಾರತ ಗ್ಯಾಸ್‌ ಏಜೆನ್ಸಿ ಬಳಿ ಕೆಲವರು ನನ್ನನ್ನು ಒಂದು ಕಾರ್‌ನಲ್ಲಿ ಕಿಡ್ನಾಪ್‌ ಮಾಡಿದ್ದಾರೆ. ಅವರು 20 ಲಕ್ಷ ಕೇಳುತ್ತಿದ್ದಾರೆ. ಇಲ್ಲವಾದಲ್ಲಿ ಅವರು ನನಗೆ ಜೀವ ಸಹಿತ ಬಿಡಲ್ಲ ಅಂತಿದ್ದಾರೆ ಎಂದಿದ್ದಾನೆ.

ಆಗ ಅಲ್ಲಿದ್ದ ಬೇರೊಬ್ಬರು ಆ ಫೋನ್‌ ತೆಗೆದುಕೊಂಡು ನಾವು ಶಶಿ ಮುಂಡೆವಾಡಿ ಕಡೆಯವರು ಇದ್ದೀವಿ. ನಿಮ್ಮ ಗಂಡನನ್ನು ಕಿಡ್ನಾಪ್‌ ಮಾಡಿದ್ದೇವೆ. ನಮ್ಮ ಜೊತೆ ಕಾರಿನಲ್ಲಿ ಹಿಡಿದುಕೊಂಡು ಬಂದಿದ್ದೇವೆ. 20 ಲಕ್ಷ ತಂದು ಕೊಟ್ಟರೆ ನಿಮ್ಮ ಗಂಡನಿಗೆ ಬಿಡ್ತಿವಿ. ಇಲ್ಲವಾದರೆ ಅವನ ಕೊಲೆ ಮಾಡ್ತಿವಿ ಅಂತ ಹೇಳಿದ್ದಾರೆ ಎಂದು ಇಂಡಿ ಶಹರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Bengaluru Crime: ಕೊರಿಯರ್‌ನಲ್ಲಿ ಬಂದಿದ್ದ 7 ಕೋಟಿ ಮೌಲ್ಯದ ಡ್ರಗ್ಸ್‌ ಜಪ್ತಿ

ಈ ದೂರಿನ ಆಧಾರದ ಮೇಲೆ ಮಿಂಚಿನ ಕಾರ್ಯಾಚರಣೆ ಮಾಡಿದ ಪೊಲೀಸರು ಮೊಬೈಲ್‌ ಲೋಕೇಷನ್‌ ಮತ್ತು ನೂತನ ತಂತ್ರಜ್ಞಾನಗಳನ್ನು ಬಳಸಿಕೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಪ್ರಕರಣವನ್ನು ಚಾಣಾಕ್ಷತನದಿಂದ ಬೇಧಿಸಿದ ಪೊಲೀಸ್‌ ಸಿಬ್ಬಂದಿಗೆ ಎಸ್ಪಿ ಪ್ರಶಂಸಿಸಿ, ನಗದು ಬಹುಮಾನ ನೀಡಿದರು. ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಡಾ.ರಾಮ ಅರಸಿದ್ದಿ, ಡಿವೈಎಸ್ಪಿ ಶ್ರೀಧರ ದೊಡ್ಡಿ, ಸಿಪಿಐ ಭೀಮನಗೌಡ ಬಿರಾದಾರ, ಗ್ರಾಮೀಣ ಸಿಪಿಐ ರಾಜಶೇಖರ ಬಡದೇಸಾರ ಈ ಸಂದರ್ಭದಲ್ಲಿ ಇದ್ದರು.

ಬೈಕ್‌ ಕದ್ದು ಬರೀ 5000ಗೆ ಮಾರಾಟ ಮಾಡ್ತಿದ್ದ ಖತರ್ನಾಕ್‌ ಕಳ್ಳನ ಸೆರೆ

ಬೆಂಗಳೂರು: ಮನೆ ಎದುರು ನಿಲುಗಡೆ ಮಾಡಿದ ದ್ವಿಚಕ್ರ ವಾಹನಗಳನ್ನು(Bike) ಕಳವು ಮಾಡುತ್ತಿದ್ದ ಖತರ್ನಾಕ್‌ ಕಳ್ಳನನ್ನು ಕೆಂಗೇರಿ ಠಾಣೆ ಪೊಲೀಸರು(Police) ಬಂಧಿಸಿದ ಘಟನೆ ಫೆ.22 ರಂದು ನಡೆದಿತ್ತು.

ಚಿಕ್ಕಬಳ್ಳಾಪುರ(Chikaballapur) ಜಿಲ್ಲೆಯ ಚಿಂತಾಮಣಿ ಮೂಲದ ವೆಂಕಟಸ್ವಾಮಿ(38) ಬಂಧಿತ. ಆರೋಪಿ(Accused) ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ 6.7 ಲಕ್ಷ ರು. ಮೌಲ್ಯದ 12 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಯು ಇತ್ತೀಚೆಗೆ ಕೆಂಗೇರಿ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನದಲ್ಲಿ ಅನುಮಾನಾಸ್ಪದವಾಗಿ ಓಡಾಡುವಾಗ ಪೊಲೀಸರು ಗಮನಿಸಿ, ವಶಕ್ಕೆ ಪಡೆದು ಪ್ರಶ್ನಿಸಿದಾಗ ದುಷ್ಕೃತ್ಯಗಳು ಬೆಳಕಿಗೆ ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದರು.
 

Latest Videos
Follow Us:
Download App:
  • android
  • ios