ನಾಗರ ಪಂಚಮಿ ಆಚರಿಸುತ್ತಲೇ ಪ್ರಾಣ ಕಳೆದುಕೊಂಡ ಮೂವರು ಬಾಲಕಿಯರು, ಪೋಷಕರು ಕಂಗಾಲು!

ನಾಗರ ಪಂಚಮಿ ಹಬ್ಬವನ್ನು ಶ್ರದ್ಧೆ, ಭಕ್ತಿಯಿಂದ ಆಚರಿಸಿದ ಕುಟುಂಬಕ್ಕೆ ಆಘಾತ ಎದುರಾಗಿದೆ. ಮೂವರು ಬಾಲಕಿಯರು ನಾಗರ ಪಂಚಮಿ ಹಬ್ಬ ಆಚರಿಸುತ್ತಲೆ ಮೃತಪಟ್ಟ ದಾರುಣ ಘಟನೆ ನಡೆದಿದೆ.

Minor sisters fell into pond and dies while immersing idol during nagara panchami celebration ckm

ಭೋಪಾಲ್(ಆ.10) ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ನಾಗರ ಪಂಚಮಿ ಹಬ್ಬ ಆಚರಿಸಲಾಗಿದೆ. ಆದರೆ ಈ ನಾಗರ ಪಂಚಮಿ ಆಚರಣೆ ಮಧ್ಯಪ್ರದೇಶದ ರೇವಾ ಜೆಲ್ಲಿಯ ತಾಮರ ಕುಟುಂಬಕ್ಕೆ ಬರಸಿಡಿಲಿನಂತೆ ಎರಗಿದೆ. ನಾಗರ ಪಂಚಮಿ ಪೂಜೆ ಬಳಿಕ ಮೂವರು ಬಾಲಕಿಯರು ಮೂರ್ತಿಯನ್ನು ವಿಸರ್ಜಿಸಲು ತೆರಳಿದ್ದಾರೆ. ಆದರೆ ವಿಸರ್ಜನೆ ವೇಳೆ ಕಾಲು ಜಾರಿ ನಿರ್ಣಾ ಹಂತದ ಕೊಳದಲ್ಲಿ ಮುಳುಗಿ ಮೂವರು ಸಹೋದರಿಯರು ಮೃತಪಟ್ಟಿದ್ದಾರೆ. ಮಕ್ಕಳನ್ನು ಕಳೆದುಕೊಂಡ ಪೋಷಕರು ಕಂಗಾಲಾಗಿದ್ದಾರೆ.

ರೇವಾ ಜಿಲ್ಲೆಯ ಬಡ ಕುಟುಂಬದ ಈ ಮೂವರು ಬಾಲಕಿಯರು ನಿಧನದಿಂದ ಗ್ರಾಮಕ್ಕೆ ಸೂಚಛಾಯೆ ಆವರಿಸಿದೆ. ಮನೆಯಲ್ಲಿ ನಾಗರ ಪಂಚಮಿ ಆಚರಿಸಿದ ಕುಟುಂಬದ ಸಂತೋಷದಲ್ಲಿ ಮೂವರು ಸಹೋದರಿಯರಾದ ಜಾಹ್ನವಿ ರಾಜಕ್(6) ತಾನ್ವಿ(7) ಸುಹಾನಿ(9) ಮಣ್ಣಿನಲ್ಲಿ ನಾಗನ ಮೂರ್ತಿ ನಿರ್ಮಿಸಿದ್ದಾರೆ. ಈ ಮೂರ್ತಿಯನ್ನು ಮನೆಯಲ್ಲಿಟ್ಟು ಪೂಜೆ ಮಾಡಿದ್ದಾರೆ.

 ಹುಟ್ಟುಹಬ್ಬದ ದಿನವೇ ದುರಂತ ಅಂತ್ಯಕಂಡ ಶಾಸಕಿ ಪುತ್ರ, 2 ವರ್ಷದ ಮಗಳಿಂದ ಅಂತಿಮ ನಮನ!

ಪೂಜೆ ಬಳಿಕ ಮೂವರು ಸಹೋದರಿಯರು ಮನೆಯಿಂದ ಕೆಲ ದೂರದಲ್ಲಿರುವ ನಿರ್ಮಾಣ ಹಂತದ ನೀರಿನ ಕೊಳದಲ್ಲಿ ವಿಸರ್ಜಿಸಲು ಮುಂದಾಗಿದ್ದಾರೆ. ಇದಕ್ಕಾಗಿ ಮೂರ್ತಿ ಎತ್ತಿಕೊಂಡು ಸಾಗಿದ ಮೂವರು ಬಾಲಕಿಯರು ಕೊಳದ ಬಳಿ ಬಂದಿದ್ದಾರೆ. ಈ ವೇಳೆ ಕಾಲು ಜಾರಿ ಮೂವರು ಕೊಳಕ್ಕೆ ಬಿದ್ದಿದ್ದಾರೆ. ಈ ದುರ್ಘಟನೆಯಲ್ಲಿ ಮೂವರು ಮೃೃತಪಟ್ಟಿದ್ದಾರೆ. 

ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೋಷಕರು ಸೇರಿದಂತೆ ಗ್ರಾಮಸ್ಥರು ಧಾವಿಸಿದ್ದಾರೆ. ಮಕ್ಳನ್ನು ನೀರಿನಿಂದ ಹೊರರತೆಗೆದಿದ್ದಾರೆ. ಅಷ್ಟರಲ್ಲೇ ಸಹೋದರಿಯರು ಮೃತಪಟ್ಟಿದ್ದಾರೆ. ಈ ಘಟನೆ ಕುರಿತು ದೂರು ದಾಖಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ಮೂವರು ಬಾಲಕಿಯರು ಕಾಲು ಜಾರಿ ನೀರಿಗೆ ಬಿದ್ದಿರುವ ಸಾಧ್ಯತೆ ಹೆಚ್ಚಿದೆ. ಪ್ರಾಥಮಿಕ ತನಿಖೆಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ ಎಂದಿದ್ದಾರೆ.

ನಿರ್ಮಾಣ ಹಂತದ ಕೊಳದಲ್ಲಿ ಸುರಕ್ಷತೆ ಪಟ್ಟಿಯನ್ನು, ಮಕ್ಕಳು, ಪ್ರಾಣಿಗಳು ನೀರಿ ಬೀಳದಂತೆ ಅಡ್ಡಲಾಗಿ ಯಾವುದೇ ತಡೆಗೋಡೆಯಾಗಲಿ, ಇತರ ಯಾವುದೇ ತಾತ್ಕಾಲಿಕ ತಡೆಗೋಡೆಯನ್ನು ಇಟ್ಟಿಲ್ಲ. ಮಕ್ಕಳು ಇದೇ ನೀರಿನಲ್ಲಿ ಮೂರ್ತಿ ವಿಸರ್ಜಿಲು ಹೋಗಿ ಮೃತಪಟ್ಟಿದ್ದಾರೆ ಎಂದು ಗ್ರಾಮಸ್ಥರು ನೋವು ತೋಡಿಕೊಂಡಿದ್ದಾರೆ. ಅತ್ತ ಪೋಷಕರು ಮೂವರು ಮಕ್ಕಳನ್ನು ಕಳೆದುಕೊಂಡು ಅಸ್ವಸ್ಥರಾಗಿದ್ದರೆ.ಪೋಷಕರನ್ನು ಅಳಲು ಎಂತವರ ಹೃದಯವನ್ನು ಕರಗಿಸುತ್ತಿದೆ. ಇತ್ತ ಪೊಲೀಸರು ಘಟನೆ ಕುರಿತು ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದರೆ. ಈ ದುರಂತ ಘಟನೆ ಗ್ರಾಮಸ್ಥರಲ್ಲೂ ಆಘಾತ ತಂದಿದೆ.

ಮನೆ ಪಕ್ಕದಲ್ಲಿಯೇ ಆಡ್ತಿದ್ದ 4 ವರ್ಷದ ಮಗುವಿನ ಸಾವು, ಸಿಸಿಟಿವಿಯಲ್ಲಿ ಸೆರೆಯಾಯ್ತು ಕಂದಮ್ಮನ ಕೊನೆ ಕ್ಷಣ!
 

Latest Videos
Follow Us:
Download App:
  • android
  • ios