Bengaluru: ಬಾರ್ ಮುಂದೆ ಗಲಾಟೆ: ಅಣ್ಣನಿಂದಲೇ ತಮ್ಮನ ಹತ್ಯೆ!
ಕುಡಿದ ಅಮಲಿನಲ್ಲಿ ಅಣ್ಣನೇ ತಮ್ಮನನ್ನು ಕೊಲೆ ಮಾಡಿರೋ ಘಟನೆ ಬೆಂಗಳೂರಿನ ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಪಿಲನ್ ಕೊಲೆಯಾದ ದುರ್ದೈವಿ. ಕಪಿಲನ್ ಮತ್ತು 54 ವರ್ಷದ ಅಶೋಕನ್ ಇಬ್ಬರೂ ಸಹೋದರರು.
ಬೆಂಗಳೂರು (ಜೂ.08): ಕುಡಿದ ಅಮಲಿನಲ್ಲಿ ಅಣ್ಣನೇ ತಮ್ಮನನ್ನು ಕೊಲೆ ಮಾಡಿರೋ ಘಟನೆ ಬೆಂಗಳೂರಿನ ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಪಿಲನ್ ಕೊಲೆಯಾದ ದುರ್ದೈವಿ. ಕಪಿಲನ್ ಮತ್ತು 54 ವರ್ಷದ ಅಶೋಕನ್ ಇಬ್ಬರೂ ಸಹೋದರರು. ಒಟ್ಟಿಗೆ ಆಡಿ ಬೆಳೆದವರು. ಪೈಂಟಿಂಗ್ ಕೆಲಸ ಮಾಡಿಕೊಳ್ತಾ ಬದುಕು ಕಟ್ಟಿಕೊಂಡಿದ್ರು. ಮದುವೆಯಾಗಿ ಗೋವಿಂದಪುರದಲ್ಲಿ ಬೇರೆ ಬೇರೆ ಕಡೆಗಳಲ್ಲಿ ಮನೆ ಮಾಡಿಕೊಂಡು ವಾಸವಿದ್ದರು.
51 ವರ್ಷದಿಂದ ಇದ್ದ ಇವರ ಮಧ್ಯೆ ಯಾವುದೇ ಮನಸ್ತಾಪ ಇರಲಿಲ್ಲ. ಆದ್ರೆ 6ರ ರಾತ್ರಿ 8 ಗಂಟೆ ಸುಮಾರಿಗೆ ನಡೆದ ಘಟನೆ ಸಾಕಷ್ಟು ಪ್ರಶ್ನೆ ಹುಟ್ಟುಹಾಕಿದೆ. ಅಷ್ಟಕ್ಕೂ ಆಗಿದ್ದೇನಂದ್ರೆ ಮೊನ್ನೆ (ಸೋಮವಾರ) 6ನೇ ತಾರೀಕು ಅಣ್ಣ ತಮ್ಮ ಇಬ್ಬರು ಬಾರ್‌ವೊಂದಕ್ಕೆ ಕುಡಿಯಲು ಹೋಗಿದ್ರು. ಹೋಗಿ ಕೆಲವೇ ಕೆಲವು ಹೊತ್ತಲ್ಲಿ ಬಾರ್ ಮುಂದೆ ತಮ್ಮ ಕಪಿಲನ್ ಕುಸಿದು ಬಿದ್ದಿದ್ದ. ಆಯಾ ತಪ್ಪಿ ಬಿದ್ದಿರಬಹುದು ಅಂತಾ ತಕ್ಷಣ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದ.
ಚಾಮರಾಜಪೇಟೆ ಜುಗುರಾಜ್ ಹತ್ಯೆ ಪ್ರಕರಣ: ನಾಲ್ವರ ಬಂಧನ, 8.75 ಕೆ.ಜಿ ಚಿನ್ನಾಭರಣ ವಶ!
ಅಶೋಕನ್ ಮೇಲೆ ಕಪಿಲನ್ ಪತ್ನಿಯಿಂದ ಮರ್ಡರ್ ಕೇಸ್: ಹೌದು! ಇಲ್ಲಿ ತನಕ ಆಕಸ್ಮಿಕ ಸಾವು ಅಂತಲೇ ಇದ್ದ ಕೇಸ್‌ಗೆ ಕಪಿಲನ್ ಪತ್ನಿ ಪುಷ್ಪ ರಾಣಿ ಗೋವಿಂದಪುರ ಠಾಣೆಗೆ ಬಂದು ನೀಡಿದ್ದ ದೂರು ಟ್ವಿಸ್ಟ್ ಕೊಟ್ಟಿತ್ತು. ಅಶೋಕನ್ ಮತ್ತು ಕಪಿಲ್ ಮಧ್ಯೆ ಜಾಗದ ವಿಚಾರವಾಗಿ ಜಗಳ ನಡದು ಅಶೋಕನ್ ಹೊಡೆದು ಕೊಂದಿದ್ದಾನೆಂದು ಕೇಸ್ ದಾಖಲಿಸಿದ್ದಾರೆ. ಬಾಟೆಲ್‌ನಿಂದ ಹೊಡೆದು ಕೊಂದಿದ್ದಾರೆಂದು ಆರೋಪಿಸಿದ್ದಾರೆ.
ಕೊಲೆ ಕೇಸ್ ದಾಖಲಿಸಿಕೊಂಡಿರುವ ಗೋವಿಂದಪುರ ಠಾಣೆ ಪೊಲೀಸರು ಅಶೋಕನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸ್ತಿದ್ದಾರೆ. ಒಡಹುಟ್ಟಿದವರ ಮಧ್ಯೆ ಒಳಗೊಳಗೆ ಅದೇನು ಅಸಮಾಧಾನ ಇತ್ತೋ ಏನೊ, ಅಥವಾ ಬಿದ್ದು ಸಾವನ್ನಪ್ಪಿದ್ದಾರೊ ಗೊತ್ತಿಲ್ಲ. ತಮ್ಮನ ಪ್ರಾಣ ಹೋದ್ರೆ ಅಣ್ಣ ಜೈಲು ಸೇರಿದ್ದಾನೆ. ಪೊಲೀಸರ ತನಿಖೆಯಿಂದಷ್ಟೇ ಸತ್ಯಾಸತ್ಯತೆ ಗೊತ್ತಾಗಬೇಕಿದೆ.
ಗಂಡನ ಕೊಲೆಗೆ ಹೆಂಡತಿಯಿಂದಲೇ ಸುಪಾರಿ: ನಗರದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ಕಳೆದ 11 ದಿನಗಳ ಹಿಂದೆ ಶಿಕ್ಷಣ ಇಲಾಖೆ ನೌಕರರ ಕಾರನ್ನು ಅಡ್ಡಗಟ್ಟಿಹಲ್ಲೆ ನಡೆಸಿದ್ದ ಪ್ರಕರಣವನ್ನು ಗ್ರಾಮಾಂತರ ಠಾಣೆ ಪೊಲೀಸರು ಭೇದಿಸಿದ್ದು, ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಸೋಮವಾರ ಗ್ರಾಮಾಂತರ ಪೊಲೀಸ್ ಠಾಣೆ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬೆ.ಗ್ರಾ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಂಶಿಕೃಷ್ಣ ಮಾಹಿತಿ ನೀಡಿ, ಮೇ25ರಂದು ಬೀರಸಂದ್ರದಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿದ್ದ.
Hyderabad gang-rape case: ಸಂತ್ರಸ್ತೆಯ ವಿಡಿಯೋ ಸೋರಿಕೆ, ಬಿಜೆಪಿ MLA ಮೇಲೆ ಎಫ್‌ಐಆರ್
ಸಾರ್ವಜನಿಕ ಶಿಕ್ಷಣ ಇಲಾಖೆಯ ಸಿಬ್ಬಂದಿ ಕಾರು ಅಡ್ಡಗಟ್ಟಿದ್ದ ಕಿರಾತಕರು ಕಾರು ಜಖಂಗೊಳಿಸಿ ಪರಾರಿಯಾಗಿದ್ದರು ಎಂದು ಕಾರು ಚಲಾಯಿಸುತ್ತಿದ್ದ ಸಿಬ್ಬಂದಿ ಮುಕುಂದ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣದ ತನಿಖೆ ವೇಳೆ ಶಿಡ್ಲಘಟ್ಟಮೂಲದ ಮೌಲಾ(36), ಕೆಜಿ ಹಳ್ಳಿ ನಿವಾಸಿ ಸೈಯದ್ ನಹೀಮ್(32) ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ, ಮುಕುಂದ ಅವರ ಪತ್ನಿ ಮಮತ ತನ್ನ ಗಂಡನ ಕೊಲೆಗೆ ಸುಪಾರಿ ನೀಡಿದ್ದಳು. ಮಮತ, ತನ್ನ ಪತಿ ಮುಕುಂದ ಅವರ ಹತ್ಯೆಗೆ 40 ಲಕ್ಷ ರು. ಸುಪಾರಿ ನೀಡಿದ್ದಳು ಎನ್ನಲಾಗಿದೆ. ಬಳಿಕ ಪೊಲೀಸರು ಮಮತ(44) ಮತ್ತು ಆಕೆಯ ಗೆಳತಿ ಟಿ.ದಾಸರಹಳ್ಳಿಯ ತಸ್ಲಿಮ್(45)ಎಂಬುವವರನ್ನು ಬಂಧಿಸಿ ತನಿಖೆ ಮುಂದುವರೆಸಲಾಗಿದೆ ಎಂದರು.