ಅಪ್ರಾಪ್ತೆಯನ್ನು ಸಾಮೂಹಿಕ ಅತ್ಯಾಚಾರವೆಸಗಿ ರೋಡಿಗೆ ಎಸೆದ ಅಲ್ಪಸಂಖ್ಯಾತ ಫೇಸ್‌ಬುಕ್ ಗೆಳೆಯ!
ತ್ರಿಪುರಾದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದಲ್ಲಿ ಭಾಗಿಯಾಗಿದ್ದ ಮೂವರು ಶಂಕಿತರ ಪೈಕಿ ಓರ್ವನನ್ನು ಬಂಧಿಸಲಾಗಿದೆ
ತ್ರಿಪುರಾ (ಜೂ.2): ತ್ರಿಪುರಾದಲ್ಲಿ ಭಯಾನಕ ಘಟನೆಯೊಂದು ಬೆಳಕಿಗೆ ಬಂದಿದ್ದು, ಗೋಮತಿ ಜಿಲ್ಲೆಯ ತೆಪಾನಿಯಾ ಪಾರ್ಕ್‌ನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದಲ್ಲಿ ಭಾಗಿಯಾಗಿದ್ದ ಮೂವರು ಶಂಕಿತ ವ್ಯಕ್ತಿಗಳ ಪೈಕಿ ಓರ್ವನನ್ನು ಬಂಧಿಸಲಾಗಿದೆ ಉದಯಪುರ ಉಪವಿಭಾಗದ ರಾಧಾ ಕಿಶೋರ್‌ಪುರ ಮಹಿಳಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಆಕೆಯ ಪೀಡಕರು ಕಾರಿನಿಂದ ಹೊರಗೆ ಎಸೆದಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಬುಧವಾರ ಟೆಪಾನಿಯಾ ಇಕೋ ಪಾರ್ಕ್‌ನಲ್ಲಿ ಈ ಘಟನೆ ನಡೆದಿದ್ದು, ಫೇಸ್‌ಬುಕ್‌ನಲ್ಲಿ ಹುಡುಗಿಯ ಜೊತೆ ಸ್ನೇಹ ಬೆಳೆಸಿದ ಪ್ರಮುಖ ಆರೋಪಿ 21 ವರ್ಷದ ಯುವಕ ಟೆಪಾನಿಯಾ ಇಕೋ ಪಾರ್ಕ್‌ನಲ್ಲಿ ಭೇಟಿಯಾಗುವಂತೆ ಯುವತಿಯನ್ನು ಒತ್ತಾಯಿಸಿ ಈ ಕೃತ್ಯ ಎಸಗಿದ್ದಾನೆ. ಆರೋಪಿಯನ್ನು ಪುರ್ಬಾ ಗೋಕುಲ್‌ಪುರದಲ್ಲಿರುವ ಆತನ ಮನೆಯಿಂದ ಬಂಧಿಸಲಾಗಿದೆ. ಯುವಕ ಅಲ್ಪಸಂಖ್ಯಾತ ಧರ್ಮದವನೆಂದು ತಿಳಿದುಬಂದಿದ್ದು ಯುವತಿ ಬೇರೆ ಧರ್ಮದವಳಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಯನ್ನು ಸುಹೇಲ್ ಮಿಯಾ ಎಂದು ಗುರುತಿಸಲಾಗಿದೆ.
ಹುಡುಗಿಯನ್ನು ಟೆಪಾನಿಯಾ ಇಕೋ ಪಾರ್ಕ್‌ನಲ್ಲಿ ಭೇಟಿಯಾದ ಬಳಿಕ ಅಲ್ಲಿ ಆಕ್ಷೇಪಣೆಯ ಹೊರತಾಗಿಯೂ ಅವಳ ಕೆಲವು ಫೋಟೋ ಕ್ಲಿಕ್ ಮಾಡಿದ್ದಾನೆ. ಹುಡುಗಿ ತನಗೆ ಬ್ಲ್ಯಾಕ್‌ಮೇಲ್ ಮಾಡಲಾಗುತ್ತಿದೆ ಎಂದು ಅರಿತುಕೊಂಡಾಗ, ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಳು ಆದರೆ ಸಾಧ್ಯವಾಗಲಿಲ್ಲ
ಪ್ರಮುಖ ಆರೋಪಿಯು 17 ವರ್ಷದ ಯುವತಿಯನ್ನು ಕಾಡಿನೊಳಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಆತನೊಂದಿಗೆ ಇತರ ಇಬ್ಬರು ಸಹಚರರು ಸೇರಿಕೊಂಡು ಹುಡುಗಿಯನ್ನು ಅತ್ಯಾಚಾರ ಮಾಡಿ ಸಂಜೆವರೆಗೆ ಚಿತ್ರಹಿಂಸೆ ನೀಡಿದ್ದಾರೆ. ಬಳಿಕ ಮನೆಗೆ ಹಿಂತಿರುಗುವಾಗ ಮೂವರು ವ್ಯಕ್ತಿಗಳು ಅಪ್ರಾಪ್ತೆಯನ್ನು ಕಾರಿನಿಂದ ಎಸೆದರು ಹೋಗಿದ್ದಾರೆ.
ಬಾಲಕಿ ಮತ್ತು ಪ್ರಮುಖ ಆರೋಪಿ ಕಳೆದ ಆರು ತಿಂಗಳಿನಿಂದ ಫೇಸ್‌ಬುಕ್‌ನಲ್ಲಿ ಸ್ನೇಹಿತರಾಗಿದ್ದು, ವ್ಯಕ್ತಿ ತನ್ನ ಗುರುತನ್ನು ಆಕೆಗೆ ಮರೆ ಮಾಚಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ತ್ರಿಪುರಾ ಮಹಿಳಾ ಆಯೋಗದ ಅಧ್ಯಕ್ಷೆ ಬರ್ನಾಲಿ ಗೋಸ್ವಾಮಿ ಈ ಘಟನೆಯನ್ನು ಖಂಡಿಸಿದ್ದಾರೆ. ಸಾಮಾಜಿಕ ಮಾಧ್ಯಮ ವೇದಿಕೆಯ ಮೂಲಕ ಅಪ್ರಾಪ್ತ ಬಾಲಕಿಯರನ್ನು ಯುವಕರ ಒಂದು ಗುಂಪು ಬಲೆಗೆ ಬೀಳಿಸುತ್ತಿರುವುದನ್ನು ನಾವು ಗಮನಿಸುತ್ತಿದ್ದೇವೆ. ಶಾಲೆ, ಕಾಲೇಜಿಗೆ ಹೋಗುವ ಹೆಣ್ಣು ಮಕ್ಕಳನ್ನು ಗುರಿಯಾಗಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಮಂಡ್ಯ: ತಂಗಿ ಅಸುನೀಗಿದ ವರ್ಷದಲ್ಲೇ ವೈದ್ಯ ಅಣ್ಣ ಆತ್ಮಹತ್ಯೆಗೆ ಶರಣು
ಸುಹೇಲ್ ನನ್ನು ಬಂಧಿಸಲಾಗಿದ್ದು, ಕೃತ್ಯದಲ್ಲಿ ಭಾಗಿಯಾಗಿರುವ ಆತನ ಇಬ್ಬರು ಸಹಚರರು ಇನ್ನೂ ಪತ್ತೆಯಾಗಿಲ್ಲ. ಇವರಿಬ್ಬರಿಗಾಗಿ ಪೊಲೀಸ್ ಶೋಧ ಮುಂದುವರೆದಿದೆ.
BENGALURU: ಒಂಟಿ ಮಹಿಳೆಯ ರುಂಡ ಇಲ್ಲದ ದೇಹ ಚರಂಡಿಯಲ್ಲಿ ಪತ್ತೆ, ತುಂಡರಿಸಿದ ಅಂಗಾಗ ಜತೆ ಹಂತಕರು ಪರಾರಿ!
ಮನೆಗೆ ಹಿಂದಿರುಗಿದ ನಂತರ, ಸಂತ್ರಸ್ತೆ ತನ್ನ ಕುಟುಂಬಕ್ಕೆ ನಡೆದ ಘಟನೆ ಬಗ್ಗೆ ವಿವರಿಸಿದ್ದಾಳೆ, ಕೂಡಲೇ ಪೋಷಕರು ಆರ್‌ಕೆ ಪುರ್ ಮಹಿಳಾ ಪೊಲೀಸ್ ಠಾಣೆಯಲ್ಲಿ ಮೂವರು ಯುವಕರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಬಂಧಿತ ಆರೋಪಿ ಮತ್ತು ಬಾಲಕಿ ನಡುವಿನ ಫೋನ್ ಕರೆ ದಾಖಲೆಗಳು ಮತ್ತು ಚಾಟ್ ಹಿಸ್ಟ್ರಿ ಪುರಾವೆಗಳನ್ನು ಪೊಲೀಸರು ಪಡೆದುಕೊಂಡಿದ್ದಾರೆ.