Asianet Suvarna News Asianet Suvarna News

Bengaluru: ಒಂಟಿ ಮಹಿಳೆಯ ರುಂಡ ಇಲ್ಲದ ದೇಹ ಚರಂಡಿಯಲ್ಲಿ ಪತ್ತೆ, ತುಂಡರಿಸಿದ ಅಂಗಾಗ ಜತೆ ಹಂತಕರು ಪರಾರಿ!

ಒಬ್ಬಂಟಿಯಾಗಿದ್ದ ಮಹಿಳೆ ಅಂಗಾಂಗಗಳನ್ನು ಕಡಿದು ನಗ್ನ ಮುಂಡವನ್ನು ಮೂಟೆಯಲ್ಲಿಟ್ಟು, ಕೈ ಕಾಲು ರುಂಡದ ಜೊತೆ ಹಂತಕರು ಪರಾರಿಯಾಗಿದ್ದಾರೆ.  

Bengaluru  woman murder Headless limbless body  found in Bannerghatta area kannada news  gow
Author
First Published Jun 2, 2023, 7:04 PM IST

ಬೆಂಗಳೂರು (ಜೂ.2) : ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಒಂಟಿ ವೃದ್ಧೆ ಕೊಲೆ ಪ್ರಕರಣ ಮಾಸುವ ಮುನ್ನವೇ ಬೆಂಗಳೂರು ಹೊರವಲಯದಲ್ಲಿ ಮತ್ತೊಂದು ಒಂಟಿ ಮಹಿಳೆ ಕೈ ಕಾಲು ಮತ್ತು ರುಂಡ ಕಡಿದು ಬರ್ಬರವಾಗಿ ಕೊಲ್ಲಲಾಗಿದೆ.   ಒಬ್ಬಂಟಿಯಾಗಿದ್ದ ಮಹಿಳೆ ಅಂಗಾಂಗಗಳನ್ನು ಕಡಿದು ನಗ್ನ ಮುಂಡವನ್ನು ಮೂಟೆಯಲ್ಲಿಟ್ಟು, ಕೈ ಕಾಲು ರುಂಡದ ಜೊತೆ ಹಂತಕರು ಪರಾರಿಯಾಗಿದ್ದಾರೆ.  

ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ಜನತಾ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ಬನ್ನೇರುಘಟ್ಟ ಜನತಾ ಕಾಲೋನಿ ವಾಸಿ ಗೀತಾಮ್ಮ(53)  ಬರ್ಬರವಾಗಿ ಕೊಲೆಯಾದ  ಒಂಟಿ ಮಹಿಳೆ. ಖಾಸಗಿ ಕಂಪನಿಯೊಂದರಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡಿಕೊಂಡ ಜೀವನ ಸಾಗಿಸುತ್ತಿದ್ದ ಗೀತಾಮ್ಮ ಇಬ್ಬರು ಹೆಣ್ಣು ಮಕ್ಕಳ ಮದುವೆ ಮತ್ತು ಪತಿ ಸಾವಿನ ಬಳಿಕ ಒಬ್ಬಂಟಿಯಾಗಿದ್ದಳು. ಕೊಠಡಿಯೊಂದರಲ್ಲಿ ವಾಸವಿದ್ದ ಗೀತಾಮ್ಮ ಉಳಿದ ಎರಡು ಕೊಂಡಿಗಳನ್ನು ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಯುವಕರಿಗೆ ಬಾಡಿಗೆಗೆ ನೀಡಿದ್ದಳು.

ಹೇಗೋ ಜೀವನ ಸಾಗಿಸುತ್ತಿದ್ದ ಒಂಟಿ ಮಹಿಳೆ ಗೀತಾಮ್ಮ ಇದ್ದಕ್ಕಿದ್ದಂತೆ ಮೂರ್ನಾಲ್ಕು ದಿನಗಳ ಹಿಂದೆ ಕಾಣೆಯಾಗಿದ್ದು, ಇಂದು ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಕೆಟ್ಟ ವಾಸನೆ ಬರುತ್ತಿದ್ದರಿಂದ ಅಕ್ಕಪಕ್ಕದ ಮನೆಯವರು ಮಾಹಿತಿ ನೀಡಿದ್ದು, ಸ್ಥಳದಲ್ಲಿ ನೋಡಲಾಗಿ ಮೂಟೆಯಲ್ಲಿ ತುಂಬಿದ ಮುಂಡ ಪತ್ತೆಯಾಗಿದೆ ಎಂದು ಕೊಲೆಯಾದ ಗೀತಾಮ್ಮನ ಸಂಬಂಧಿಕರು ತಿಳಿಸಿದ್ದಾರೆ.

ಮಂಡ್ಯ: ತಂಗಿ ಅಸುನೀಗಿದ ವರ್ಷದಲ್ಲೇ ವೈದ್ಯ ಅಣ್ಣ ಆತ್ಮಹತ್ಯೆಗೆ ಶರಣು

ಇನ್ನೂ ಕಳೆದ ಮೂರ್ನಾಲ್ಕು ದಿನಗಳಿಂದ ಕಾಣೆಯಾಗಿದ್ದ ಮದ್ಯ ವಯಸ್ಸಿನ ಮಹಿಳೆಯ ಶವ ಕೈ ಕಾಲು ರುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಮುಂಡ ಬನ್ನೇರುಘಟ್ಟ ಬಳಿ ಪತ್ತೆಯಾಗಿದೆ. ಯಾರೋ ದುಷ್ಕರ್ಮಿಗಳು ಕೈ ಕಾಲು ರುಂಡ ಕಡಿದು ಕೊಲೆಗೈದು ಬಳಿಕ ನಗ್ನ ಮುಂಡವನ್ನು ಮೂಟೆಯಲ್ಲಿಟ್ಟು ಪರಾರಿಯಾಗಿದ್ದಾರೆ. ಮಹಿಳೆ ಕಾಣೆಯಾದ ದಿನದಿಂದ ಬಾಡಿಗೆ ಮನೆಯಲ್ಲಿದ್ದ ಬಿಹಾರ ಮೂಲದ ಯುವಕರು ಕಾಣೆಯಾಗಿದ್ದು, ಅವರ ಪೋನ್ ಸಹ ಸ್ವಿಚ್ ಆಫ್ ಆಗಿದೆ. ಎಲ್ಲಾ ಆಯಾಮದಲ್ಲು ತನಿಖೆ ನಡೆಯುತ್ತಿದ್ದು, ಯಾರು ಯಾವ ಕಾರಣಕ್ಕೆ ಮಹಿಳೆಯನ್ನು ಕೊಲೆಗೈದಿದ್ದಾರೆ ಎಂಬ ವಿಚಾರ ತನಿಖೆಯಿಂದ ತಿಳಿದು ಬರಬೇಕಿದೆ. ಮೃತ ಗೀತಾಮ್ಮ ಮನೆಯಲ್ಲಿ ಬಾಡಿಗೆಗೆ ವಾಸವಿದ್ದ ಬಿಹಾರ ಮೂಲದ ಯುವಕರು ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ.

ಬೆಂಗಳೂರು: ಶಾಲೆ-ಕಾಲೇಜು ಬಳಿ ಅಂಗಡಿಗಳಲ್ಲಿ ಡ್ರಗ್ಸ್‌ ಮಾರಾಟ, 154 ಮಾದಕ ವ್ಯಸನಿಗಳ ಬಂಧನ

 ಒಟ್ನಲ್ಲಿ ಒಂಟಿ ಮಹಿಳೆ ಬರ್ಬರ ಕೊಲೆ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದ್ದು, ರುಂಡ ಕೈ ಕಾಲು ಪತ್ತೆ ಬಳಿಕ ಕೊಲೆಯಾದವರ ಗುರುತು ಪತ್ತೆಯಾಗಲಿದೆ. ಇದರ ನಡುವೆ ಒಂಟಿ ಮಹಿಳೆ ಬರ್ಬರ ಕೊಲೆಗೆ ಅಕ್ರಮ ಸಂಬಂಧ ಅಥವಾ ಹಣ ಆಭರಣ ಕಾರಣನಾ ಎಂಬುದು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ.

Follow Us:
Download App:
  • android
  • ios