ಸೆಹೋರ್(ನ. 30)  ಈ ಸೋಶಿಯಲ್ ಮೀಡಿಯಾ ಎಲ್ಲಿಂದ ಎಲ್ಲಿಗೆ ಬೇಕಾದರೂ ಲಿಂಕ್ ಕೊಡಬಹುದು. ಅಂಥದ್ದೆ ಒಂದು ಪ್ರಕರಣ ನಿಮ್ಮ ಮುಂದ ಇಡುತ್ತಿದ್ದೇವೆ.

ನೇಪಾಳದ 16 ವರ್ಷದ ಬಾಲಕಿ ಮಧ್ಯಪ್ರದೇಶದ ಸೆಹೋರ್ ಜಿಲ್ಲೆಗೆ  ತನ್ನ 20 ವರ್ಷದ ಫೇಸ್‌ಬುಕ್ ಸ್ನೇಹಿತನ ಭೇಟಿ ಮಾಡಲು ಏಕಾಂಗಿಯಾಗಿ ಬಂದಿದ್ದಾಳೆ.   ಬಾಲಕಿಯನ್ನು ರಕ್ಷಣೆ ಮಾಡಿ ಮಕ್ಕಳ ಕಲ್ಯಾಣ ಸಮಿತಿಗೆ  ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಎರಡು ವರ್ಷಗಳಿಂದ ಸೆಹೋರ್ ಜಿಲ್ಲೆಯ ಅಷ್ಟ ಪಟ್ಟಣದಲ್ಲಿ ವಾಸಿಸುತ್ತಿರುವ ವ್ಯಕ್ತಿ ನನಗೆ ಸೋಶಿಯಲ್ ಮೀಡಿಯಾದಲ್ಲಿ ಸ್ನೇಹಿತ ಎಂದು ಕಠ್ಮಂಡು ನಿವಾಸಿ ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ ಎಂದು ಉಪ ವಿಭಾಗೀಯ ಪೊಲೀಸ್ ಅಧಿಕಾರಿ (ಎಸ್‌ಡಿಒಪಿ) ಮೋಹನ್ ಸರ್ವಾನ್  ಮಾಹಿತಿ ನೀಡಿದ್ದಾರೆ.

ಅರಣ್ಯ ಇಲಾಖೆ ವಾಹನದ ಮೇಲೆ ಕೂತು ಬಿಂದಾಸ್ ಪೋಸ್ ಕೊಟ್ಟಳು

ಕಠ್ಮಂಡುದಿಂದ ಭಾರತಕ್ಕೆ ಪ್ರವೇಶ ಮಾಡಿ ಅಲ್ಲಿಂದ ವಿವಿಧ ಬಸ್ಸುಗಳ ಮೂಲಕ ಭೋಪಾಲ್ ತಲುಪಿದ್ದಾಳೆ.  ಮೆಡಿಕಲ್ ಶಾಪ್ ಒಂದರಲ್ಲಿ ಕೆಲಸ ಮಾಡುವ ಆಕೆಯ ಸ್ನೇಹಿತ ಬಾಲಕಿ ಆಗಮನದ ವಾರ್ತೆಯನ್ನು ಪೊಲೀಸರಿಗೆ ತಿಳಿಸಿದ್ದಾನೆ.

ಬಾಲಕಿಯ ಕೊರೋನಾ ಪರೀಕ್ಷೆ ನಡೆಸಿ ಆಕೆಯನ್ನು ಕಠ್ಮಂಡುಗೆ ಕಳುಹಿಸಿಕೊಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.