ಹುನಗುಂದ: ಕಾಣೆಯಾಗಿದ್ದ ಅಪ್ರಾಪ್ತೆ ಶವವಾಗಿ ಪತ್ತೆ, ಕಾರಣ ಮಾತ್ರ ನಿಗೂಢ..!

ಬಾವಿಯಲ್ಲಿ ಬಾಲಕಿಯ ಶವ ಪತ್ತೆ| ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹೊನ್ನರಳ್ಳಿ ಮತು ಹಿರೇಯರನಕೇರಿ ಮಾರ್ಗ ಮಧ್ಯೆ ಶವ ಪತ್ತೆ| ಈ ಬಗ್ಗೆ ಹುನಗುಂದ ಪೊಲೀಸ್‌ ಠಾಣೆಯಲ್ಲಿ ಫೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲು| 

Minor Girl Deadbody Found at Hungund in Bagalkot grg

ಹುನಗುಂದ(ಮಾ.10):  ಕಳೆದ ಶನಿವಾರ ಮನೆಯಿಂದ ಕಾಣೆಯಾಗಿದ್ದ ಅಪ್ರಾಪ್ತೆಯು ಶವವಾಗಿ ಪತ್ತೆಯಾಗಿರುವ ಘಟನೆ ಹುನಗುಂದ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ತಾಲೂಕಿನ ಹೊನ್ನರಳ್ಳಿ ಮತು ಹಿರೇಯರನಕೇರಿ ಮಾರ್ಗ ಮಧ್ಯೆ ಇರುವ ಸರ್ಕಾರಿ ಪ್ರೌಢಶಾಲೆಯ ಪಕ್ಕದ ಬಾವಿಯಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ಶವದ ಕುತ್ತಿಗೆ ಮತ್ತು ಮುಖದ ಮೇಲೆ ಬಲವಾದ ಗಾಯಗಳು ಕಂಡು ಬರುತ್ತಿದ್ದು ಇದು ಅನೇಕ ಅನುಮಾನಗಳಿಗೆ ಕಾರಣವಾಗಿದೆ ಎಂದು ಹೇಳಲಾಗಿದೆ.

ಕೋಟಿ ಕೋಟಿ ಡಿಫಾಸಿಟ್ ಮಾಡಿದ್ದ 73ರ ಅಜ್ಜನ ಬುಟ್ಟಿಗೆ ಹಾಕ್ಕೊಂಡ ಬ್ಯಾಂಕ್ ಆಂಟಿ!

ಯುವಕನ ವಿರುದ್ಧ ದೂರು:

ಈ ಸಾವಿಗೆ ಅರುಣಕುಮಾರ ಮುಳ್ಳೂರ ಮತ್ತು ಆತನ ಕುಟುಂಬದ ಸದಸ್ಯರು ಕಾರಣ ಎಂದು ಬಾಲಕಿ ತಂದೆ ಹುನಗುಂದ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾನೆ. ಅಪ್ರಾಪ್ತಳಾಗಿದ್ದ ನನ್ನ ಮಗಳಿಗೆ ಅರುಣಕುಮಾರ ಪ್ರೀತಿ ಮಾಡುವ ನಾಟಕವಾಡಿ ಆಕೆಯನ್ನು ದೈಹಿಕವಾಗಿಯೂ ಬಳಸಿಕೊಂಡಿದ್ದ. ಇದು ಗೊತ್ತಾಗಿ ಯುವಕನಿಗೆ ಬುದ್ಧಿ ಹೇಳಲು ಅವರ ಮನೆಗೆ ಹೋದಾಗ ಅರುಣಕುಮಾರ ಸೇರಿ ಆತನ ತಂದೆ-ತಾಯಿ ನನ್ನ ಮಗಳಿಗೆ ಅವಮಾನಕರ ಮಾತುಗಳನ್ನು ಆಡಿದ್ದರಿಂದ ಆಕೆ ನೊಂದು ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಬಾಲಕಿಯ ತಂದೆ ನೀಡಿದ ದೂರಿನ ಮೇರೆಗೆ ಅರುಣಕುಮಾರ ಮುಳ್ಳೂರ ಹಾಗೂ ಆತನ ತಂದೆ-ತಾಯಿ ವಿರುದ್ಧ ಹುನಗುಂದ ಪೊಲೀಸ್‌ ಠಾಣೆಯಲ್ಲಿ ಫೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
 

Latest Videos
Follow Us:
Download App:
  • android
  • ios