ಬಲವಂತವಾಗಿ ಅಪ್ರಾಪ್ತ ಬಾಲಕನ ಮತಾಂತರ: 2 ಮಕ್ಕಳ ತಾಯಿಯೊಂದಿಗೆ ಮದ್ವೆ

  • ಬಲವಂತವಾಗಿ ಅಪ್ರಾಪ್ತ ಬಾಲಕನ ಮತಾಂತರಿಸಿ ಮದುವೆ
  • ಎರಡು ಮಕ್ಕಳ ತಾಯಿಯೊಂದಿಗೆ 16ರ ಬಾಲಕನಿಗೆ ನಿಕಾಹ್
  • ಉತ್ತರಪ್ರದೇಶದ ಕಾನ್ಪುರದಲ್ಲಿ ಘಟನೆ
Minor forcibly converted and married to mother of 2 children in Kanpur akb

ಕಾನ್ಪುರ: ಅಪ್ರಾಪ್ತ ಬಾಲಕನೋರ್ವನನ್ನು ಬಲವಂತವಾಗಿ ಮತಾಂತರಗೊಳಿಸಿ, ಆತನಿಗಿಂತ ಎರಡು ಪಟ್ಟು ಪ್ರಾಯದಲ್ಲಿ ಹೆಚ್ಚಿರುವ ಎರಡು ಮಕ್ಕಳ ತಾಯಿಯೊಂದಿಗೆ ಮದುವೆ ಮಾಡಿಸಿದ ಘಟನೆ ಉತ್ತರಪ್ರದೇಶದ ಕಾನ್ಪುರದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

16 ವರ್ಷ ವಯಸ್ಸಿನ ಅಪ್ರಾಪ್ತ ಬಾಲಕನನ್ನು ಇಸ್ಲಾಂಗೆ ಬಲವಂತವಾಗಿ ಮತಾಂತರಿಸಿ ನಂತರ ಕಾನ್ಪುರದಲ್ಲಿ ತನ್ನ ಎರಡು ಪಾಲು ಹೆಚ್ಚಿನ ವಯಸ್ಸಿನ ಮಹಿಳೆಯೊಂದಿಗೆ ಮದುವೆ ಮಾಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಮಧ್ಯಸ್ಥಿಕೆ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿದೆ. ಅಪ್ರಾಪ್ತನನ್ನು ವಿವಾಹವಾದ ಮಹಿಳೆ, ಆಕೆಯ ಪೋಷಕರು ಮತ್ತು 'ನಿಕಾಹ್'(ಮದುವೆ) ಮಾಡಿದ ಮೌಲ್ವಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಕೊಡಗಿನಲ್ಲಿ ಮತಾಂತರಕ್ಕೆ ಯತ್ನ: ಕೇರಳ ಮೂಲದ ದಂಪತಿ ಸೆರೆ

ಈ ಅಪ್ರಾಪ್ತ ಬಾಲಕನ ತಾಯಿ ಈ ಬಗ್ಗೆ ಮಾತನಾಡಿದ್ದು, ತನ್ನ ಮಗ ಹಾಗೂ ತಾನು ಕಾಕಡಿಯೊ ಪ್ರದೇಶದಲ್ಲಿ (Kakadeo locality)  ವಾಸಿಸುತ್ತಿದ್ದೇವೆ. ಅದು ಹೇಗೋ ಆತನಿಗೆ (ಮಗನಿಗೆ) ಜಜ್ಮೌ ಪ್ರದೇಶದಲ್ಲಿ (Jajmau locality) ವಾಸಿಸುವ ಮುಸ್ಲಿಂ ಕುಟುಂಬದೊಂದಿಗೆ (Muslim family) ಸಂಪರ್ಕ ಬೆಳೆದಿದೆ. ಮೇ 22 ರಂದು ನನ್ನ ಪುತ್ರ ನಾಪತ್ತೆಯಾಗಿದ್ದ. ಇದಾದ ಬಳಿಕ ಎಲ್ಲಿಂದಲ್ಲೋ ಬಂದ ವಿಡಿಯೋವೊಂದರಲ್ಲಿ ನನ್ನ ಮಗ ಮದುವೆಯಾಗಿರುವುದು ತಿಳಿದು ಬಂತು ಎಂದು ಮಹಿಳೆ ಹೇಳಿದ್ದಾಳೆ. 

ಮೌಲ್ವಿ ಮದುವೆಗೂ ಮೊದಲು ಹುಡುಗನನ್ನು ಮತಾಂತರಿಸುತ್ತಿರುವುದು ಮತ್ತು ನಂತರ ಆತನೊಂದಿಗೆ ಮದುವೆಗೆ ಸಂಬಂಧಿಸಿದ ಇತರ ಆಚರಣೆಗಳನ್ನು ಮಾಡುತ್ತಿರುವುದನ್ನು ವೀಡಿಯೊ ತೋರಿಸುತ್ತಿದೆ. ಬಾಲಕನನ್ನು ಬಲವಂತವಾಗಿ ಮತಾಂತರಗೊಳಿಸಲಾಗಿದೆ. ಈ ಬಗ್ಗೆ ಬಾಲಕನ ಕುಟುಂಬಸ್ಥರು ಮೂರು ಬಾರಿ ಪೊಲೀಸರಿಗೆ ದೂರು ನೀಡಿದರೂ ದೂರು ದಾಖಲಾಗಿರಲಿಲ್ಲ ಎಂದು ಬಜರಂಗದಳದ ಪ್ರಾಂತ ವಿದ್ಯಾರತಿ ಪ್ರಮುಖ್ ಪ್ರಿನ್ಸ್‌ರಾಜ್ ಶ್ರೀವಾಸ್ತವ ( Prant Vidhyarathi Pramukh Princeraj Srivastava) ಅವರು ಎಂದು ಆರೋಪಿಸಿದ್ದಾರೆ.

ಗುರುಗ್ರಾಮ್: 13 ವರ್ಷದ ಬಾಲಕಿ ಮೇಲೆ ಅಪ್ರಾಪ್ತನಿಂದಲೇ ಅತ್ಯಾಚಾರ: ಕಾವಲು ನಿಂತ ಸ್ನೇಹಿತ
ನಾವು ಸೋಮವಾರ ಎಫ್‌ಐಆರ್ ದಾಖಲಿಸಲು ಪ್ರಯತ್ನಿಸಿದೆವು ಆದರೆ ಕಾಕ್ಡಿಯೊ ಪೊಲೀಸರು (Kakdeo police) ಪ್ರಕರಣ ದಾಖಲಿಸಲು ನಿರಾಕರಿಸಿದರು. ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಇಂದು ಪ್ರಕರಣ ದಾಖಲಿಸಲಾಗಿದೆ ಎಂದು ಶ್ರೀವಾಸ್ತವ ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಲಾಗಿದೆ ಎಂದು ಕಾನ್ಪುರ ಪಶ್ಚಿಮ ಡಿಸಿಪಿ ಬಿಬಿಟಿಜಿಎಸ್ ಮೂರ್ತಿ (BBTGS Murthy) ಮಾಹಿತಿ ನೀಡಿದ್ದಾರೆ.

ಬಾಲಕನಿಗೆ 16 ವರ್ಷ ಎಂದು ಪೊಲೀಸರು ತಿಳಿಸಿದ್ದಾರೆ. ವೈದ್ಯಕೀಯ ಪರೀಕ್ಷೆಯ ನಂತರ ಆತನನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಆದರೆ, ಬಾಲಕನ ಒತ್ತಾಯದ ಮೇರೆಗೆ ಈ ವಿವಾಹ ನಡೆಸಲಾಗಿತ್ತು ಎಂದು ಮಹಿಳೆಯ ಸಂಬಂಧಿಯೊಬ್ಬರು ಹೇಳಿದ್ದಾರೆ. ಮಹಿಳೆಯ ಮನೆಯವರು ಹುಡುಗನೊಂದಿಗೆ ಮದುವೆ ಮಾಡಿದರು. ಆದರೆ ಬಾಲಕ ಅಪ್ರಾಪ್ತ ಎಂಬುದು ಮಹಿಳೆಯ ಮನೆಯವರಿಗೆ ಗೊತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಕರ್ನಾಟಕ ಧಾರ್ಮಿಕ ಹಕ್ಕು ಸಂರಕ್ಷಣಾ (ಮತಾಂತರ ನಿಷೇಧ) ಕಾಯ್ದೆಯ ಸುಗ್ರೀವಾಜ್ಞೆಗೆ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಅಂಕಿತ ಹಾಕಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಅಧಿಕೃತವಾಗಿ ಕಾಯ್ದೆ ಜಾರಿಗೆ ಬಂದಿದೆ. ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಒಪ್ಪಿಗೆ ನೀಡಿ ರಾಜ್ಯಪಾಲರಿಗೆ ಕಳುಹಿಸಿಕೊಡಲಾಗಿತ್ತು. ರಾಜ್ಯಪಾಲರು ಮಂಗಳವಾರ ಅಂಕಿತ ಹಾಕಿದ್ದಾರೆ. ಕೆಲ ಸಂಘಟನೆಗಳು ಹಾಗೂ ಕೈಸ್ತ್ರ ಸಮುದಾಯದ ತೀವ್ರ ವಿರೋಧದ ನಡುವೆಯೇ ಮತಾಂತರ ನಿಷೇಧ ಕಾಯ್ದೆಯನ್ನು ಅನುಷ್ಠಾನ ಮಾಡಲಾಗಿದೆ. 

ಕಳೆದ ವರ್ಷ ಡಿಸೆಂಬರ್‌ ತಿಂಗಳಲ್ಲಿ ಬೆಳಗಾವಿ ಸುವರ್ಣಸೌಧದಲ್ಲಿ ನಡೆದ ಚಳಿಗಾಲ ಅಧಿವೇಶನದ ವೇಳೆ ವಿಧಾನಸಭೆಯಲ್ಲಿ ಮತಾಂತರ ನಿಷೇಧ ಕಾಯ್ದೆ ಅಂಗೀಕಾರಗೊಂಡಿತ್ತು. ಆದರೆ, ವಿಧಾನಪರಿಷತ್‌ನಲ್ಲಿ ಆಡಳಿತಾರೂಢ ಬಿಜೆಪಿಯ ಸಂಖ್ಯಾಬಲ ಇಲ್ಲದಿರುವ ಹಿನ್ನೆಲೆಯಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಹೀಗಾಗಿ ವಿಧಾನಸಭೆಯಲ್ಲಿ ಅಂಗೀಕಾರವಾಗಿರುವ ಸ್ವರೂಪದಲ್ಲಿಯೇ ಮಸೂದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲಾಗಿದೆ.
 

Latest Videos
Follow Us:
Download App:
  • android
  • ios