ಬ್ಲೂಫಿಲಂ ನೋಡಿ, ಪಕ್ಕದಲ್ಲೇ ಮಲಗಿದ್ದ 9 ವರ್ಷದ ತಂಗಿ ಬಾಯಿ ಮುಚ್ಚಿ 13ರ ಅಣ್ಣನಿಂದ ರೇಪ್; ಮಗನಿಗೆ ತಾಯಿ ಸಾಥ್!
ತಾಯಿ ಬಂದು ನೋಡಿದಾಗ ಮಗಳ ಉಸಿರಾಟದ ಚಲನೆ ಇತ್ತು. ಮಗಳ ಜೀವ ಉಳಿಸುವ ಬದಲು ತಾಯಿ ಮಗನ ಜೊತೆ ಸೇರಿ ಮತ್ತಷ್ಟು ಜೋರಾಗಿ ಕತ್ತು ಹಿಸುಕಿ ಬಾಲಕಿಯ ಉಸಿರು ನಿಲ್ಲಿಸಿದ್ದಾರೆ.
ಭೋಪಾಲ್: ಮಧ್ಯಪ್ರದೇಶದ ರಿವಾ ಜಿಲ್ಲೆಯ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. 13 ವರ್ಷದ ಬಾಲಕನೊಬ್ಬನು ರಾತ್ರಿ ಮಲಗುವಾಗ ಮೊಬೈಲ್‌ನಲ್ಲಿ ಪೋರ್ನ್ ವಿಡಿಯೋ ನೋಡಿ, ಪಕ್ಕದಲ್ಲಿಯೇ ಮಲಗಿದ್ದ 9 ವರ್ಷದ ತಂಗಿ ಮೇಲೆ ಅತ್ಯಾಚಾರ ಎಸಗಿ, ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಮಗನನ್ನು ಶಿಕ್ಷಿಸುವ ಬದಲು ಪೋಷಕರು ಇದನ್ನು ಮರೆಮಾಚುವ ಕೆಲಸ ಮಾಡಿದ್ದಾರೆ. ಪೊಲೀಸರ ಮುಂದೆ ಸುಳ್ಳು ಹೇಳಿಕೆ ನೀಡಿದ್ದರು. ಏನಿದು ಘಟನೆ? ಅಂದು ಆಗಿದ್ದೇನು? ಪೊಲೀಸರ ತನಿಖೆಯಲ್ಲಿ ಸತ್ಯ ಬೆಳಕಿಗೆ ಬಂದಿದ್ದೇನು ಎಂಬುದರ ಮಾಹಿತಿ ಇಲ್ಲಿದೆ.
ರಿವಾ ಜಿಲ್ಲೆಯ ನಿವಾಸಿಯಾಗಿರುವ ಬಾಲಕ ಕಳೆದ ಒಂದು ವರ್ಷದಿಂದಲೇ ಮೊಬೈಲ್‌ನಲ್ಲಿ ಅಶ್ಲೀಲ ಸಿನಿಮಾಗಳನ್ನು ನೋಡಲು ಶುರು ಮಾಡಿದ್ದನು. ಯಾರಿಗೂ ತಿಳಿಯದಂತೆ ಅಶ್ಲೀಲ ವಿಡಿಯೋ ನೋಡುವುದು ಬಾಲಕನಿಗೆ ಚಟವಾಗಿ ಬದಲಾಗಿತ್ತು. ಜುಲೈ 24ರಂದು ತಂಗಿಯ ಮೇಲೆಯೇ ಅತ್ಯಾಚಾರಗೈದಿರುವ ಘಟನೆ ನಡೆದಿದೆ.
ತಂಗಿಯ ಮೇಲೆ ರೇಪ್
ಜುಲೈ 24ರಂದು ರಾತ್ರಿ ಮಲಗಿದ್ದಾಗ ಕದ್ದುಮುಚ್ಚಿ ಬಾಲಕ ಮೊಬೈಲ್‌ನಲ್ಲಿ ಅಶ್ಲೀಲ ಸಿನಿಮಾಗಳನ್ನು ನೋಡಿದ್ದಾನೆ. ನಂತರ ಪಕ್ಕದಲ್ಲಿಯೇ ಮಲಗಿದ್ದ 9 ವರ್ಷದ ತಂಗಿಯ ಬಾಯಿಯನ್ನು ಮುಚ್ಚಿ ರೇಪ್ ಮಾಡಿದ್ದಾನೆ. ತಂಗಿ ಎಲ್ಲಾ ಘಟನೆಯನ್ನು ತಂದೆಗೆ ಹೇಳುತ್ತೇನೆ ಅಂದಿದ್ದಾಳೆ. ಇದರಿಂದ ಭಯಗೊಂಡ ಬಾಲಕ ತಂಗಿಯ ಕತ್ತು ಹಿಸುಕಿ ಕೊಲೆ ಮಾಡಲು ಮುಂದಾಗಿದ್ದಾನೆ. ಕತ್ತು ಹಿಸುಕಿದ್ದರಿಂದ ಬಾಲಕ ಪ್ರಜ್ಞೆ ಕಳೆದುಕೊಂಡಿದ್ದಾಳೆ. ಇದರಿಂದ ಮತ್ತಷ್ಟು ಆತಂಕಕ್ಕೊಳಗಾದ ಬಾಲಕ ತಾಯಿ ಬಳಿ ಹೋಗಿ ಎಲ್ಲಾ ವಿಷಯ ಹೇಳಿದ್ದಾನೆ.
ಪೋರ್ನ್ ವಿಡಿಯೋ ಮರುಸೃಷ್ಟಿಗೆ ಮೂವರು ಅಪ್ರಾಪ್ತರಿಂದ 3ನೇ ಕ್ಲಾಸ್ ಬಾಲಕಿ ಮೇಲೆ ರೇಪ್, ಕೊಲೆ
ಮಗನ ಜೊತೆ ಸೇರಿ ಮಗಳನ್ನ ಕೊಂದ ತಾಯಿ
ತಾಯಿ ಬಂದು ನೋಡಿದಾಗ ಮಗಳ ಉಸಿರಾಟದ ಚಲನೆ ಇತ್ತು. ಮಗಳ ಜೀವ ಉಳಿಸುವ ಬದಲು ತಾಯಿ ಮಗನ ಜೊತೆ ಸೇರಿ ಮತ್ತಷ್ಟು ಜೋರಾಗಿ ಕತ್ತು ಹಿಸುಕಿ ಬಾಲಕಿಯ ಉಸಿರು ನಿಲ್ಲಿಸಿದ್ದಾರೆ. ಈ ವಿಷಯವನ್ನು ಮರೆಮಾಚಲು ತಾಯಿ ಪೊಲೀಸರ ಮುಂದೆ ವಿಷಕಾರಿ ಹುಳು ಕಚ್ಚಿದ್ರಿಂದ ಮಗಳ ಸಾವು ಆಗಿದೆ ಎಂದು ಹೇಳಿದ್ದಾಳೆ. ಮೃತ ಬಾಲಕಿಯ ಸೋದರಯರು ಸಹ ಇದೇ ಹೇಳಿಕೆಯನ್ನು ನೀಡಿದ್ದರು.
ಆರೋಪಿಗಳ ಬಂಧನ
ತಂದೆ-ತಾಯಿ ಹಾಗೂ ನಾಲ್ಕು ಮಕ್ಕಳು ಸೇರಿದಂತೆ ಆರು ಜನರು ಕುಟುಂಬದಲ್ಲಿ ವಾಸಿಸುತ್ತಿದ್ದರು. ದಂಪತಿಗೆ ಮೂರು ಹೆಣ್ಮಕ್ಕಳು ಹಾಗೂ ಒಬ್ಬ ಗಂಡು ಮಗನಿದ್ದನು. ಘಟನೆ ನಡೆದ ದಿನದಂದು ಒಂದು ಕೋಣೆಯಲ್ಲಿ ಇಬ್ಬರು ಹೆಣ್ಣಮಕ್ಕಳು ತಾಯಿ ಜೊತೆ ಮಲಗಿದ್ರೆ, ಮತ್ತೊಂದು ರೂಮ್‌ನಲ್ಲಿ ಅಣ್ಣ ಮತ್ತು ತಂಗಿ ಮಲಗಿದ್ದರು. ಪೊಲೀಸರಿಗೆ ಎಲ್ಲರ ಹೇಳಿಕೆಯ ಮೇಲೆ ಸಂಶಯ ಮೂಡಿದ್ದರಿಂದ ಎಲ್ಲರನ್ನು ಪ್ರತ್ಯೇಕವಾಗಿ ಖಡಕ್ ಆಗಿ ವಿಚಾರಣೆ ನಡೆಸಿದಾಗ ಸತ್ಯ ಬಾಯಿ ಬಿಟ್ಟಿದ್ದಾರೆ. ಪೊಲೀಸ್ ವಿಚಾರಣೆಯಲ್ಲಿ ತಪ್ಪೊಪ್ಪಿಕೊಂಡಿದ್ದು, ಎಲ್ಲಾ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮಾಗಡಿ: 4 ವರ್ಷದ ಬಾಲಕಿ ಮೇಲೆ ಅತ್ಯಾಚಾರವಸಗಿ ಕೊಲೆಗೈದ ಕಾಮುಕ, ಸಂಬಂಧಿಕನಿಂದಲೇ ಹೇಯಕೃತ್ಯ..!