53 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಹತ್ಯೆಗೈದ ಅಪ್ರಾಪ್ತ ಬಾಲಕ!
53 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದ ಘಟನೆ ನಡೆದಿದೆ. ಆರೋಪಿ ವಯಸ್ಸು ಕೇವಲ 16. ಅಪ್ರಾಪ್ತ ಬಾಲಕನ ಸೇಡಿಗಾಗಿ ಅತ್ಯಾಚಾರ ಎಸಗಿ ಕೊಲೈಗೈದಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಭೋಪಾಲ್(ಫೆ.04): ದೇಶದಲ್ಲಿ ಮಹಿಳೆ ಹಾಗೂ ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಹಲ್ಲೆ ಪ್ರಕರಣಗಳು ನಾಗರೀಕರ ಸಮಾಜವನ್ನೇ ತಲೆತಗ್ಗಿಸುವಂತೆ ಮಾಡುತ್ತಿದೆ. ಇದೀಗ ಅಪ್ರಾಪ್ತ ಬಾಲಕನೊಬ್ಬ 53 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಹೈತ್ಯಗೈದಿರುವ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ. ಪತಿ ಹಾಗೂ ಮಗ ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಿದ ವೇಳೆ ಮನೆಗೆ ನುಗ್ಗಿದ ಅಪ್ರಾಪ್ತ ಬಾಲಕ ಆರಂಭದಲ್ಲೇ ಹಲ್ಲೆ ನಡೆಸಿದ್ದಾರೆ. ಬಳಿಕ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾನೆ. ಪತಿ ಹಾಗೂ ಮಗ ಆಸ್ಪತ್ರೆಯಿಂದ ಮನಗೆ ಹಿಂತಿರುಗಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಇದೀಗ ಅನಾರೋಗ್ಯ ಪೀಡಿತ ಮಗ ನೀಡಿದ ಮಾಹಿತಿ ಮೇರೆಗೆ 16ರ ಬಾಲಕನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.
ಮಹಿಳೆ ಪತಿ ಹಾಗೂ ಓರ್ವ ಮಗನ ಜೊತೆ ರೇವಾ ಜಿಲ್ಲೆಯ ಪುಟ್ಟ ಗ್ರಾಮದಲ್ಲಿ ವಾಸವಿದ್ದರು. ಪತಿ ಹಾಗೂ ಮಗ ಅನಾರೋಗ್ಯ ಕಾರಣ ಜಬಲಪುರದಲ್ಲಿ ಚಿಕಿತ್ಸೆಗಾಗಿ ತೆರಳಿದ್ದರು. ಮಹಿಳೆ ಮನೆಯಲ್ಲಿ ಒಂಟಿಯಾಗಿರುವುದನ್ನು ಅರಿತ 16 ವರ್ಷದ ಬಾಲಕ ನೇರವಾಗಿ ಮನೆಗೆ ನುಗ್ಗಿ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾನೆ. ಬಾಲಕನ ಹಲ್ಲೆಗೆ ಪ್ರಜ್ಞೆ ತಪ್ಪಿ ಬಿದ್ದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಮೂರು ವರ್ಷದ ಮಗುವಿನ ಮೇಲೆ ಗ್ಯಾಂಗ್ ರೇಪ್, ದೆಹಲಿಯಲ್ಲಿ ಮತ್ತೊಂದು ಭೀಕರ ಕೃತ್ಯ!
ಅತ್ಯಾಚಾರದ ಬಳಿಕ ಮನೆಯಲ್ಲಿರುವ ಚಿನ್ನಾಭರಣ ಹಾಗೂ ಹಣವನ್ನೂ ದೋಚಿ ಬಾಲಕ ಪರಾರಿಯಾಗಿದ್ದಾನೆ. ಆಸ್ಪತ್ರೆಗೆ ತೆರಳಿದ ತಂದೆ ಹಾಗೂ ಮಗ ಹಿಂತಿರುಗಿದಾಗ ಆಘಾತವಾಗಿದೆ. ಪತ್ನಿಯನ್ನು ಎತ್ತಿ ಆಸ್ಪತ್ರೆ ದಾಖಲಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಮಹಿಳೆ ಮತೃಪತ್ತ ಗಂಟೆಗಳೇ ಕಳೆದಿತ್ತು. ಇತ್ತ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಪೊಲೀಸರು ಯಾರ ಮೇಲಾದರು ಅನುಮಾನ ಇದೆಯಾ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಅನಾರೋಗ್ಯ ಪೀಡಿತ ಮಗ, 16 ವರ್ಷದ ಬಾಲಕನ ಹೆಸರು ಹೇಳಿದ್ದಾನೆ. ಕೆಲ ವರ್ಷಗಳ ಹಿಂದೆ ಅದೇ ಬಾಲಕ ತಮ್ಮ ಮನಗೆ ಟಿವಿ ನೋಡಲು ಬರುತ್ತಿದ್ದ. ಆದರೆ ಒಂದು ಬಾರಿ ಮನೆಯಿಂದ ಹಣ, ಚಿನ್ನಾಭರಣ ಕಳ್ಳತನ ಮಾಡಿದ್ದ. ಇಷ್ಟೇ ಅಲ್ಲ ಈ ಚಿನ್ನಾಭರಣ ಮಾರಾಟ ಮಾಡುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ. ಅಲ್ಲಿಂದ ಆತನನ್ನು ಮನೆಗೆ ಸೇರಿಸುತ್ತಿರಲಿಲ್ಲ. ಇಷ್ಟೇ ಅಲ್ಲ ಆತ ನಮ್ಮ ಕುಟುಂಬಕ್ಕೆ ಶತ್ರುವಾಗಿದೆ. ಈ ಹಿಂದೆ ಕಲ ಬಾರಿ ನನ್ನ ಮೇಲೆ ಹಲ್ಲೆಗೂ ಯತ್ನಿಸಿದ್ದ. ಆದರೆ ಕೂದಲೆಳೆಯುವ ಅಂತರಿಂದ ನಾನು ಪಾರಾಗಿದ್ದೆ ಎಂದು ಮೃತ ಮಹಿಳೆ ಪುತ್ರ ಪೋಲಿಸರ ಬಳಿ ಹೇಳಿದ್ದಾನೆ.
ಅರೆಸ್ಟ್ ಮಾಡ್ತಿದ್ದಾರೆಂದು ಎಸ್‌ಐ ಕಿವಿ ಕಚ್ಚಿದ ಕುಡುಕ: ಆಸ್ಪತ್ರೆಗೆ ದಾಖಲಾದ ಪೊಲೀಸ್..!
ಕಳ್ಳತನದ ಬಳಿಕ ದೊಡ್ಡ ರಾದ್ದಾಂತವೇ ನಡೆದು ಹೋಗಿತ್ತು. ಬಾಲಕನ ಪೋಷಕರು ರಾಜೀ ಪಂಚಾಯಿತಿ ಮಾಡಿಸಿ ಬಾಲಕನಿಗೆ ಬುದ್ದಿ ಹೇಳಿದ್ದರು. ಆಧರೆ ಆತನ ಮಾನ ಹರಜಾಗಿತ್ತು. ಗ್ರಾಮದವರು ಕಳ್ಳ ಕಳ್ಳ ಎಂದೇ ಕರೆಯುತ್ತಿದ್ದರು. ಇದರಿಂದ ನಮ್ಮ ಕುಟುಂಬದ ಮೇಲೆ ಸೇಡು ತೀರಿಸಿಕೊಳ್ಳಲು ಯತ್ನಿಸಿದ್ದ. ಆತನ ಮೇಲೆ ಅನುಮಾನವಿದೆ ಎಂದು ಮೃತ ಮಹಿಳೆ ಪುತ್ರ ಪೊಲೀಸರಿಗೆ ಮಾಹಿತಿ ನೀಡಿದ್ದ. ಈ ಮಾಹಿತಿ ಆಧರಿಸಿ 16 ವರ್ಷದ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ವಿಚಾರಣೆ ನಡೆಯುತ್ತಿದೆ. ಪ್ರಾಥಮಿಕ ತನಿಖೆಗಳ ಪ್ರಕಾರ ಈತ ಅತ್ಯಾಚಾರ ಎಸಗಿ ಹತ್ಯೆ ಮಾಡಿರುವುದು ಸಾಬೀತಾಗಿದೆ. ಇದಕ್ಕೆ ಪೂರಕ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ