Asianet Suvarna News Asianet Suvarna News

ಪವರ್ ಕಟ್, ಲೋಡ್‌ ಶೆಡ್ಡಿಂಗ್ ನಡುವೇ ಗ್ರಾಹಕರಿಗೆ ಮತ್ತೊಂದು ಶಾಕ್; ಇಂದಿನಿಂದ 3 ದಿನ ಬೆಸ್ಕಾಂ ಆನ್‌ಲೈನ್ ಸೇವೆ ಬಂದ್!

ತಾಂತ್ರಿಕ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ಇಂದಿನಿಂದ ಮೂರು ದಿನಗಳ ಕಾಲ ರಾಜ್ಯದ 5 ಎಸ್ಕಾಂಗಳ ವ್ಯಾಪ್ತಿಯ 98 ನಗರಗಳಲ್ಲಿ ಆನ್‌ಲೈನ್ ಸೇವೆಗಳು ಬಂದ್‌ ಆಗಲಿವೆ. ಇಂದು ಮಧ್ಯಾಹ್ನ 12 ರಿಂದ ನಾಡಿದ್ದು- ಬೆಳಗ್ಗೆ 11.59 ವರೆಗೆ ಎಲ್ಲಾ ರೀತಿಯ ಆನ್ ಲೈನ್ ಸೇವೆ  ಬಂದ್ ಆಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

Technical work issue Bescom online service is closed for 3 days from today at bengaluru rav
Author
First Published Nov 24, 2023, 10:33 AM IST

ಬೆಂಗಳೂರು (ನ.24): ತಾಂತ್ರಿಕ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ಇಂದಿನಿಂದ ಮೂರು ದಿನಗಳ ಕಾಲ ರಾಜ್ಯದ 5 ಎಸ್ಕಾಂಗಳ ವ್ಯಾಪ್ತಿಯ 98 ನಗರಗಳಲ್ಲಿ ಆನ್‌ಲೈನ್ ಸೇವೆಗಳು ಬಂದ್‌ ಆಗಲಿವೆ. ಇಂದು ಮಧ್ಯಾಹ್ನ 12 ರಿಂದ ನಾಡಿದ್ದು- ಬೆಳಗ್ಗೆ 11.59 ವರೆಗೆ ಎಲ್ಲಾ ರೀತಿಯ ಆನ್ ಲೈನ್ ಸೇವೆ  ಬಂದ್ ಆಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಏನಿದು ತಾಂತ್ರಿಕ ಸಮಸ್ಯೆ?

ರಾಜ್ಯದ ಐದು ಎಸ್ಕಾಂಗಳನ್ನು ಒಂದೇ ಸೂರಿನಡಿ ತರುವ ವ್ಯವಸ್ಥೆ ಕಲ್ಪಿಸಲು ಆರ್‌-ಎಪಿಡಿಆರ್‌ಪಿ ಅನುಷ್ಠಾನಗೊಳಿಸಲಾಗುತ್ತಿದೆ. ವಿವಿಧ ಪೋರ್ಟಲ್ ಗಳಲ್ಲಿರುವ ಡಾಟಾ ನೂತನ ಪೋರ್ಟಲ್ ಗೆ ವರ್ಗಾವಣೆ ಮಾಡುತ್ತಿರುವ ಅಧಿಕಾರಿಗಳು. ಈ ಹಿನ್ನೆಲೆ ಇಂದು ಮಧ್ಯಾಹ್ನದಿಂದಲೇ ಆನ್‌ಲೈನ್, ಆಫ್‌ಲೈನ್ ಸೇವೆ ಸ್ಥಗಿತಗೊಳ್ಳುವುದರಿಂದ ಮುಂದಿನ ಮೂರು ದಿನ ವಿದ್ಯುತ್ ಬಿಲ್ ಪಾವತಿ, ಹೊಸ ಸಂಪರ್ಕಕ್ಕೆ ಆನ್ ಲೈನ್ ಅರ್ಜಿ ಸಲ್ಲಿಕೆ ಅಲಭ್ಯವಾಗಲಿದೆ.

ವಿದ್ಯುತ್ ಕಳವು: 68526 ರು. ದಂಡ ಕಟ್ಟಿ ಕರೆಂಟ್‌ ಕಳ್ಳ ಎನ್ನುವುದನ್ನು ನಿಲ್ಲಿಸಿ ಎಂದ ಎಚ್‌ಡಿಕೆ 

ಇಂದು ಮಧ್ಯಾಹ್ನ ದಿಂದ ಬೆಸ್ಕಾಂ, ಬೆಸ್ಕಾಂ, ಮೆಸ್ಕಾಂ, ಜೆಸ್ಕಾಂ, ಹೆಸ್ಕಾಂ ವ್ಯಾಪ್ತಿಯ ಗ್ರಾಹಕರಿಗೆ ಸಮಸ್ಯೆ ಎದುರಾಗಲಿದೆ. ಈಗಾಗಲೇ ಲೋಡ್ ಶೆಡ್ಡಿಂಗ್ ಪವರ್ ಕಟ್ ಸಮಸ್ಯೆಯಿಂದ ಹೈರಾಣಾಗಿರುವ ಜನರು ಈ ನಡುವೆ ಎರಡು ದಿನ ಎಸ್ಕಾಂಗಳ ವ್ಯಾಪ್ತಿಯಲ್ಲಿ ಆನ್ ಲೈನ್ ಸೇವೆಗೆ ತೊಂದರೆಯಾಗಲಿದೆ. ತಾಂತ್ರಿಕ ನಿರ್ವಹಣೆ ಕಾಮಗಾರಿ ಮುಗಿದ ಬಳಿಕ ಎಂದಿನಂತೆ ಸೇವೆ ಲಭ್ಯವಾಗಲಿದೆ.

ವಿದ್ಯುತ್ ಸಂಪರ್ಕ ಬದಲಿಸಲು ಲಂಚ; ಬೆಸ್ಕಾಂ ಅಧಿಕಾರಿ ಅರೆಸ್ಟ್:

ವಿದ್ಯುತ್‌ ಸಂಪರ್ಕ ಬದಲಿಸಲು ಲಂಚ ಪಡೆಯುತ್ತಿದ್ದ ಆರೋಪದ ಮೇರೆಗೆ ಬೆಸ್ಕಾಂ ಅಧಿಕಾರಿ ಸೇರಿದಂತೆ ಇಬ್ಬರು ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ.

ಬೆಂಗಳೂರು ವಿದ್ಯುತ್‌ ತಂತಿ ತುಳಿದು ಸಾವು ಪ್ರಕರಣ: ಇಲಿ ಮೇಲೆ ಆರೋಪ ಹೊರಿಸಿದ ಬೆಸ್ಕಾಂ

ಬೆಸ್ಕಾಂನ ಮುಖ್ಯ ಪ್ರಧಾನ ವ್ಯವಸ್ಥಾಪಕ ನಾಗರಾಜ್‌, ಚಾಲಕ ಮುರಳಿಕೃಷ್ಣ ಬಂಧಿತರಾಗಿದ್ದಾರೆ. ವಿದ್ಯುತ್‌ ಗುತ್ತಿಗೆದಾರ ಬಿ.ಎನ್‌.ಪ್ರತಾಪ್‌ ನೀಡಿದ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ. ವಿದ್ಯುತ್‌ ಸಂಪರ್ಕ ಬದಲಿಸಲು ದೂರುದಾರರು ಅರ್ಜಿ ಸಲ್ಲಿಸಿದ್ದರು. ಇದಕ್ಕಾಗಿ ₹7.50 ಲಕ್ಷ ಲಂಚದ ಹಣಕ್ಕಾಗಿ ಬೇಡಿಕೆ ಇಡಲಾಗಿತ್ತು. ಆದರೆ ಲಂಚ ನೀಡಲು ಇಷ್ಟವಿಲ್ಲದ ಕಾರಣ ದೂರುದಾರರು ಲೋಕಾಯುಕ್ತಕ್ಕೆ ದೂರು ನೀಡಿದ್ದರು ಎಂದು ಲೋಕಾಯುಕ್ತ ಪೊಲೀಸರು ಹೇಳಿದ್ದಾರೆ. ಪಾರ್ಕಿಂಗ್‌ ಬಳಿಕ ನಾಗರಾಜ್‌ ಪರವಾಗಿ ಮುರುಳಿಕೃಷ್ಣ ₹7.50 ಲಕ್ಷ ಲಂಚ ಸ್ವೀಕರಿಸುತ್ತಿದ್ದ ವೇಳೆ ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

Follow Us:
Download App:
  • android
  • ios