ಆತ್ಮಹತ್ಯೆಗೆ ಶರಣಾದ ಶ್ರೀರಾಮ್ ಬೀದರ್ ನಗರದ ಬ್ರಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ.  ಶ್ರೀರಾಮ್ ಮೂಲತಃ ಬೀದರ್ ಜಿಲ್ಲೆಯ ಚಿಟ್ಟಗುಪ್ಪಾ ತಾಲ್ಲೂಕಿನವನು ಅಂತ ತಿಳಿದು ಬಂದಿದೆ. ಶ್ರೀರಾಮ್ ಎಂಬಿಬಿಎಸ್‌ನಲ್ಲಿ ಟಾಪರ್‌ ಆಗಿದ್ದ ವಿದ್ಯಾರ್ಥಿ. 

ಬೀದರ್(ಫೆ.28): ಬ್ರಿಮ್ಸ್ ಹಾಸ್ಟೆಲ್ ಮೇಲಿಂದ ಹಾರಿ ಎಂಬಿಬಿಎಸ್ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದಲ್ಲಿ ಇಂದು(ಮಂಗಳವಾರ) ನಡೆದಿದೆ. ಶ್ರೀರಾಮ್(22) ಎಂಬಾತನೆ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯಾಗಿದ್ದಾನೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಎಂಬಿಬಿಎಸ್‌ ಪ್ರಾಕ್ಟಿಕಲ್ ಎಕ್ಸಾಂ ಭಯದಲ್ಲಿ ಶ್ರೀರಾಮ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತ ಹೇಳಲಾಗುತ್ತಿದೆ. ಆದರೆ, ಮತ್ತೊಂದೆಡೆ ತಂದೆ ಸಾವಿನಿಂದ ಶ್ರೀರಾಮ್ ಮಾನಸಿಕವಾಗಿ ಕುಗ್ಗಿ ಹೋಗಿದ್ದನು ಅಂತ ಹೇಳಲಾಗುತ್ತಿದೆ. ಶ್ರೀರಾಮ್ ಸಾವಿಗೆ ಪೊಲೀಸರ ತನಿಖೆಯಿಂದಷ್ಟೇ ತಿಳಿದು ಬರಬೇಕಿದೆ. 

ಬೆಂಗಳೂರು: ಪತ್ನಿ ಜೊತೆ ಜಗಳ, ಮರಕ್ಕೆ ಪಂಚೆ ಬಿಗಿದು ಕುಡುಕ ಪತಿ ಆತ್ಮಹತ್ಯೆ

ಆತ್ಮಹತ್ಯೆಗೆ ಶರಣಾದ ಶ್ರೀರಾಮ್ ಬೀದರ್ ನಗರದ ಬ್ರಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ. ಶ್ರೀರಾಮ್ ಮೂಲತಃ ಬೀದರ್ ಜಿಲ್ಲೆಯ ಚಿಟ್ಟಗುಪ್ಪಾ ತಾಲ್ಲೂಕಿನವನು ಅಂತ ತಿಳಿದು ಬಂದಿದೆ. ಶ್ರೀರಾಮ್ ಎಂಬಿಬಿಎಸ್‌ನಲ್ಲಿ ಟಾಪರ್‌ ಆಗಿದ್ದ ವಿದ್ಯಾರ್ಥಿ. 

ಶ್ರೀರಾಮ್ ಸಾವಿಗೆ ಸಹ ವಿದ್ಯಾರ್ಥಿಗಳು ಕಣ್ಣೀರು ಹಾಕಿದ್ದಾರೆ. ಘಟನಾ ಸ್ಥಳಕ್ಕೆ ನ್ಯೂ ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.