ವಾಲ್ಮೀಕಿ ನಿಗಮದ ಹಣದಲ್ಲಿ 14 ಕೇಜಿ ಚಿನ್ನ ಖರೀದಿಸಿದ್ದ ಮಾಸ್ಟರ್ ಮೈಂಡ್ ವರ್ಮಾ!

ವಾಲ್ಮೀಕಿ ನಿಗಮದಲ್ಲಿ ದೋಚಿದ್ದ ಬಹುಕೋಟಿ ಹಣದಲ್ಲಿ 'ಹೈದರಾಬಾದ್ ಗ್ಯಾಂಗ್‌'ನ ಮಾಸ್ಟರ್‌ಮೈಂಡ್ ಎನ್ನಲಾದ ಸತ್ಯನಾರಾಯಣ ವರ್ಮಾ 10 ಕೋಟಿ ರು. ಮೌಲ್ಯದ 14 ಕೆಜಿ ಚಿನ್ನವನ್ನು ಖರೀದಿಸಿದ್ದ ಎಂಬ ಸಂಗತಿ ವಿಶೇಷ ತನಿಖಾ ದಳ (ಎಸ್‌ಐಟಿ) ತನಿಖೆಯಲ್ಲಿ ಬೆಳಕಿಗೆ ಬಂದಿದೆ. 

Mastermind satyanarayana varma who bought 14 kg of gold with the money of Valmiki Corporation gvd

• ಗಿರೀಶ್ ಮಾದೇನಹಳ್ಳಿ

ಬೆಂಗಳೂರು (ಜು.20): ವಾಲ್ಮೀಕಿ ನಿಗಮದಲ್ಲಿ ದೋಚಿದ್ದ ಬಹುಕೋಟಿ ಹಣದಲ್ಲಿ 'ಹೈದರಾಬಾದ್ ಗ್ಯಾಂಗ್‌'ನ ಮಾಸ್ಟರ್‌ಮೈಂಡ್ ಎನ್ನಲಾದ ಸತ್ಯನಾರಾಯಣ ವರ್ಮಾ 10 ಕೋಟಿ ರು. ಮೌಲ್ಯದ 14 ಕೆಜಿ ಚಿನ್ನವನ್ನು ಖರೀದಿಸಿದ್ದ ಎಂಬ ಸಂಗತಿ ವಿಶೇಷ ತನಿಖಾ ದಳ (ಎಸ್‌ಐಟಿ) ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಅಲ್ಲದೆ ವಾಲ್ಮೀಕಿ ನಿಗಮದ ಹಣದಲ್ಲಿ ಹೈದರಾಬಾದ್‌ನ 4 ಬಾರ್‌ಗೆ ವರ್ಗಾವಣೆಯಾಗಿದ್ದ 4 ಲಕ್ಷರು.ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿ ಯಾದ ಎಸ್‌ಐಟಿ, ಈಗ ಚಿನ್ನ ಪತ್ತೆ ಕಾರ್ಯ ಮುಂದುವರೆಸಿದೆ. ನಿಗಮದ ಹಣದಿಂದಲೇ ಒಂದು ಕೆಜಿ ತೂಕದ 14 ಚಿನ್ನದ ಗಟ್ಟಿಗಳನ್ನು ವರ್ಮಾಖರೀದಿಸಿರುವುದಕ್ಕೆ ಎಸ್‌ಐಟಿ ಅಧಿಕಾರಿಗಳು ಪುರಾವೆ ಸಂಗ್ರಹಿಸಿದ್ದಾರೆ. 

ಆದರೆ ತಾನು ಕೊಂಡಿರುವ ಕೆಜಿಗಟ್ಟಲೇ ಚಿನ್ನವನ್ನು ಎಲ್ಲಿಟ್ಟಿದ್ದೇನೆ ಎಂಬ ವಿಚಾರವನ್ನು ಆರೋಪಿ ಬಾಯ್ದಿಡದಿರುವುದು ಎಸ್‌ಐಟಿಗೆ ಚಿನ್ನ ವಶಪಡಿಸಿಕೊಳ್ಳಲು ಭಾರಿ ಸವಾಲಾಗಿ ಪರಿಣಮಿಸಿದೆ ಎನ್ನಲಾಗಿದೆ. ವಾಲ್ಮೀಕಿ ನಿಗಮದಿಂದ ಹೈದರಾಬಾದ್‌ನ ಫಸ್ಟ್ ಫೈನಾನ್ಸ್ ಕೋ ಆಪರೇಟಿವ್ ಸೊಸೈಟಿಗೆ ಅಕ್ರಮವಾಗಿ89 ಕೋಟಿ ರು. ಹಣ ವರ್ಗಾವಣೆ ಯಾಗಿತ್ತು. ಈ ಅಕ್ರಮ ಹಣ ವರ್ಗಾವಣೆಗೆಯಲ್ಲಿ ಪ್ರಮುಖ ಪಾತ್ರವಹಿ ಸಿದ್ದ ವರ್ಮಾನನ್ನು ಎಸ್‌ಐಟಿ ಬಂಧಿಸಿ ವಿಚಾರಣೆ ನಡೆಸಿತ್ತು. ಈ ತನಿಖೆ ವೇಳೆ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿದಾಗ ಚಿನ್ನ ಖರೀದಿ ಬಗ್ಗೆ ದಾಖಲೆಗಳು ಸಿಕ್ಕಿವೆ ಎಂದು ಮೂಲಗಳು ಕನ್ನಡಪ್ರಭ'ಕ್ಕೆ ತಿಳಿಸಿವೆ. 

ಚನ್ನಪಟ್ಟಣದ ಎನ್‌ಡಿಎ ಮೈತ್ರಿಯಲ್ಲಿ ಒಡಕು: ಉಪಚುನಾವಣೆ ಟಿಕೆಟ್‌ಗಾಗಿ ತೀವ್ರ ಪೈಪೋಟಿ

ಪ್ರಖ್ಯಾತ ಜ್ಯುವೆಲರ್ಸ್‌ನಿಂದ 6 ಕೆಜಿ ಚಿನ್ನ: ವಾಲ್ಮೀಕಿ ನಿಗಮದ ಎಂ.ಜಿ ರಸ್ತೆಯ ಯೂನಿಯನ್ ಬ್ಯಾಂಕ್ ಖಾತೆಯಿಂದ ಹೈದಾರಾಬಾದ್‌ನ ಫಸ್ಟ್ ಫೈನಾನ್ಸ್ ಕೋ ಆಪರೇಟಿವ್ ಸೊಸೈಟಿಯ 18 ನಕಲಿ ಖಾತೆಗಳಿಗೆ ಹಣ ವರ್ಗಾವಣೆಯಾಗಿತ್ತು. ಈ ಹಣದಲ್ಲಿ ಹೈದರಾಬಾದ್‌ನ ಪ್ರಖ್ಯಾತ ಜ್ಯುವೆಲರ್ಸ್‌ವೊಂದರಲ್ಲಿ6 ಕೆ.ಜಿ ಚಿನ್ನವನ್ನು ಆತ ಚಿನ್ನ ಖರೀದಿಸಿದ್ದಾನೆ. ಇನ್ನುಳಿದ 8 ಕೆ.ಜಿ ಚಿನ್ನವನ್ನು ಬೇರೆ ಚಿನ್ನಾಭರಣ ವ್ಯಾಪಾರಿಗಳಿಂದ ಕಾಳ ಸಂತೆಯಲ್ಲಿ (ಬ್ಲ್ಯಾಕ್) ಕೊಂಡಿದ್ದ ಎಂದು ಮೂಲಗಳು ಹೇಳಿವೆ.

ಚಿನ್ನ ಮಾರಾಟ ಒಪ್ಪಿದ ವ್ಯಾಪಾರಿ: ಈ ಚಿನ್ನ ಖರೀದಿ ಸಂಬಂಧ ವ್ಯಾಪಾರಿಗಳನ್ನು ಎಸ್‌ಐಟಿ ಅಧಿಕಾರಿಗಳು ವಿಚಾರಣೆ ಕೂಡ ನಡೆಸಿದ್ದಾರೆ. ಆದರೆ ಕಾನೂನು ಪ್ರಕಾರ ಚಿನ್ನ ಮಾರಾಟ ಮಾಡಿದ್ದ ವ್ಯಾತ ಚಿನ್ನ ಖರೀದಿಗೆ ಎಸ್‌ಐಟಿಗೆ ಲೆಕ್ಕ ಕೊಟ್ಟಿದ್ದಾರೆ ಎನ್ನಲಾಗಿದೆ. ಪಾರಿ ಮಾತ್ರ ಬ್ಯಾಂಕಿಂಗ್ ಮೂಲಕ ಹಣ ಸ್ವೀಕರಿಸಿ ಒಂದು ಕೆಜಿ ತೂಕದ 6 ಚಿನ್ನದ ಗಟ್ಟಿಗಳನ್ನು ವರ್ಮಾನಿಗೆ ಮಾರಾಟ ಮಾಡಿರುವುದನ್ನು ಹೈದರಾಬಾದ್‌ನ ಜ್ಯುವೆಲರ್ಸ್‌ನ ಮಾಲಿಕ ಒಪ್ಪಿಕೊಂಡಿದ್ದಾನೆ. ಈಗ ಆತನಿಂದ ಚಿನ್ನ ಖರೀದಿಸಿದ್ದ ಹಣ ಮರಳಿ ಪಡೆಯುವ ಪ್ರಕ್ರಿಯೆ ನಡೆದಿದೆ. ಬ್ಲ್ಯಾಕ್‌ನಲ್ಲಿ ಚಿನ್ನ ಮಾರಿದ್ದ ಮೂವರು ವ್ಯಾಪಾರಿಗಳಿಗೆ ಸಂಕಷ್ಟ ಎದುರಾಗಿದೆ. 

ಚಿನ್ನದ ಬಗ್ಗೆ ಬಾಯ್ದಿಡದ ವರ್ಮಾ: ದೋಚಿದ್ದ ಹಣದಲ್ಲಿ ಖರೀದಿಸಿದ್ದ ಚಿನ್ನದ ಬಗ್ಗೆ ವರ್ಮಾ ವಿಚಾರಣೆ ವೇಳೆ ಬಾಯ್ದಿಡುತ್ತಿಲ್ಲ. ಇನ್ನು ನಿಗಮದ ಹಣದಲ್ಲೇ ಪ್ರತ್ಯೇಕವಾಗಿ ಆತನ ಸಹಚರ ಜಗದೀಶ್ ಬಳಿ 47 ಗ್ರಾಂ ಹಾಗೂ ಚಂದ್ರಮೋಹನ್ ಬಳಿ ಖರೀದಿಸಿದ್ದ 264 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಹೀಗಾಗಿ ವರ್ಮಾ ಬಾಯ್ದಿಟ್ಟರೆ 10 ಕೋಟಿ ರು ಹಣ ಮರಳಿ ಸಿಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಗೂಂಡಾ ವರ್ತನೆ, ಟಾರ್ಗೆಟ್ ರಾಜಕಾರಣ ಕಾಂಗ್ರೆಸ್ ಸಂಸ್ಕೃತಿ: ನಿಖಿಲ್ ಕುಮಾರಸ್ವಾಮಿ

ಬಾರ್‌ಗಳಿಗೆ ಹೋಗಿದ್ದ 54 ಲಕ್ಷ ರು. ಹಣ ಜಪ್ತಿ: ವಾಲ್ಮೀಕಿ ನಿಗಮದಲ್ಲಿ ದೋಚಿದ್ದ ಹಣದಲ್ಲಿ ಬಾರ್‌ಗಳಿಗೆ ನಗದೀಕರಣಕ್ಕೆ ಹೋಗಿದ್ದು 54 ಲಕ್ಷರು. ಎಂಬುದು ಎಸ್‌ಐಟಿ ತನಿಖೆಯಲ್ಲಿ ಗೊತ್ತಾಗಿದೆ. ಈ ಹಣವನ್ನು ಬಾರ್ ಮಾಲಿಕರಿಂದ ಜಪ್ತಿ ಮಾಡುವಲ್ಲಿ ಸಹ ಎಸ್‌ಐಟಿ ಯಶಸ್ಸು ಕಂಡಿದೆ. ಅಕ್ರಮ ಹಣ ವರ್ಗಾವಣೆ ತನಿಖೆ ವೇಳೆ ಹೈದರಾಬಾದ್ ನಗರದ ನಾಲ್ಕು ಬಾರ್‌ಗಳಿಗೆ 20 ಹಾಗೂ 10 ತಲಾ ಲಕ್ಷ ರು.ಗಳಂತೆ ಹಣ ವರ್ಗಾವಣೆಯಾಗಿತ್ತು. ಈ ಹಣ ನಗದಿಗೆ ಬಾರ್ ಮಾಲಿಕರು ಶೇ.5ರಷ್ಟು ಕಮೀಷನ್‌ ಪಡೆದಿದ್ದರು. ಕೊನೆಗೆ ಆ ಬಾರ್ ಮಾಲಿಕರನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಿದಾಗ ಹಣ ಮರಳಿಸಿದರು ಎಂದು ಮೂಲಗಳು ಹೇಳಿವೆ.

Latest Videos
Follow Us:
Download App:
  • android
  • ios