Asianet Suvarna News Asianet Suvarna News

Bengaluru: ಕೇಂದ್ರ ವಿಭಾಗ ಪೊಲೀಸರ ದಾಳಿ : 24 ಮಂದಿ ಬಂಧನ, ಕೋಟ್ಯಾಂತರ ಮೌಲ್ಯದ ವಸ್ತು ಜಪ್ತಿ

ರಾಬರಿ, ಬೈಕ್ ಕಳ್ಳತನ ಹಾಗೂ ಮನೆ ಕಳವು ಪ್ರಕರಣ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ 24 ಮಂದಿ ಆರೋಪಿಗಳನ್ನು ಬಂಧಿಸಿರುವ ನಗರ ಕೇಂದ್ರ ವಿಭಾಗದ ಪೊಲೀಸರು ಒಟ್ಟು 30 ಪ್ರಕರಣಗಳನ್ನು ಪತ್ತೆ ಹಚ್ಚಿ 1.32 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ, ವಾಹನ ಸೇರಿ ಇನ್ನಿತರ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

Massive operation of Bengaluru Central Division Police, 24 people arrested, material worth crores seized akb
Author
Bangalore, First Published Aug 9, 2022, 2:44 PM IST

ಬೆಂಗಳೂರು: ರಾಬರಿ, ಬೈಕ್ ಕಳ್ಳತನ ಹಾಗೂ ಮನೆ ಕಳವು ಪ್ರಕರಣ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ 24 ಮಂದಿ ಆರೋಪಿಗಳನ್ನು ಬಂಧಿಸಿರುವ ನಗರ ಕೇಂದ್ರ ವಿಭಾಗದ ಪೊಲೀಸರು ಒಟ್ಟು 30 ಪ್ರಕರಣಗಳನ್ನು ಪತ್ತೆ ಹಚ್ಚಿ 1.32 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ, ವಾಹನ ಸೇರಿ ಇನ್ನಿತರ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಶೇಷಾದ್ರಿಪುರ, ವೈಯ್ಯಾಲಿಕಾವಲ್, ಎಸ್.ಜೆ.ಪಾರ್ಕ್, ಕಬ್ಬನ್ ಪಾರ್ಕ್, ವಿಲ್ಸನ್ ಗಾರ್ಡನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾಬರಿ ಹಾಗೂ ಕಳ್ಳತ‌ನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಒಟ್ಟು 24 ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 87 ಮೊಬೈಲ್ ಪೋನ್, 27 ದ್ವಿಚಕ್ರ ವಾಹನ, 340 ಗ್ರಾಂ ಚಿನ್ನ, 58 ಕೆಜಿ ಬೆಳ್ಳಿ, 7 ಕಾರು, 6.39 ಲಕ್ಷ ನಗದು ಹಾಗೂ ಆರೋಪಿಗಳ ಬ್ಯಾಂಕ್ ನಲ್ಲಿದ್ದ 7.50 ಲಕ್ಷ ನಗದು ಸೇರಿ ಒಟ್ಟು 1,32 ಕೋಟಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳುವಲ್ಲಿ ಕೇಂದ್ರ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ. ಜಪ್ತಿಯಾದ 87 ಮೊಬೈಲ್ ಗಳ ಪೈಕಿ 10 ಮೊಬೈಲ್ ಗಳು ರಾಬರಿ‌ ಪ್ರಕರಣಕ್ಕೆ ಸೇರಿವೆ. ಇನ್ನುಳಿದ ಮೊಬೈಲ್‌ಗಳ ಮಾಲೀಕರನ್ನು ಪತ್ತೆ ಹಚ್ಚುವಲ್ಲಿ ನಿರತರಾಗಿದ್ದೇವೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.

ಹೊರಗಡೆ ಸ್ಪಾ..ಒಳಗೆ ವೇಶ್ಯಾವಾಟಿಕೆ ಅಡ್ಡೆ..ಜಯನಗರದ ಒಂಟಿ ಮಹಿಳೆ ರಹಸ್ಯ!

ಒಂಟಿ ಪಯಣಿಗರೇ ಟಾರ್ಗೆಟ್

ಕದ್ದ ಬೈಕಿನಲ್ಲಿ ಒಬ್ಬಂಟಿಯಾಗಿ ನಡೆದುಕೊಂಡು ಹೋಗುವವರನ್ನು ಟಾರ್ಗೆಟ್ ಮಾಡಿಕೊಂಡು ವಿವಿಧ ಠಾಣಾ ವ್ಯಾಪ್ತಿಯಲ್ಲಿ 74 ಮೊಬೈಲ್ ಕಳ್ಳತನ ಮಾಡಿದ್ದ ಐವರು ಆರೋಪಿಗಳನ್ನು ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ಉಸ್ಮಾನ್, ಮಹಮ್ಮದ್ ಹುಸೇನ್, ತಬ್ರೇಜ್ ಖಾನ್ ಹಾಗೂ ಜುನೈದ್ ಮತ್ತು ಇರ್ಫಾನ್ ಪಾಷ ಬಂಧಿತ ಆರೋಪಿಗಳಾಗಿದ್ದಾರೆ‌. ಕಬ್ಬನ್ ಪಾರ್ಕ್, ಅಶೋಕನಗರ, ಮಾಗಡಿ ರೋಡ್, ಸುದ್ದಗುಂಟೆ ಪಾಳ್ಯ, ಹೈಗ್ರೌಂಡ್ಸ್ ಹಾಗೂ ಶ್ರೀರಾಮಪುರ ಪೊಲೀಸ್ ಠಾಣಾ ವ್ಯಾಪ್ತಿ ಸೇರಿ ನಗರದ ಹಲವು ಠಾಣಾ ವ್ಯಾಪ್ತಿಯಲ್ಲಿ ರಾಬರಿ ಮಾಡುತ್ತಿದ್ದರು. ಪ್ರತಿ ಬಾರಿ ಕಳ್ಳತನ ಮಾಡುವಾಗ ಇಬ್ಬರು ಹೊಸ ಹುಡುಗರನ್ನು ಸೇರಿಸಿಕೊಳ್ಳುತ್ತಿದ್ದರು‌.‌ ಒಂದು ಮೊಬೈಲ್‌ ಕಳ್ಳತನ ಮಾಡಿದರೆ 500 ರೂಪಾಯಿ ಕಮೀಷನ್ ನೀಡುತ್ತಿದ್ದರು. ಕದ್ದ ಮೊಬೈಲ್ ಗಳನ್ನು ಜೆಜೆ ನಗರಕ್ಕೆ ಸಾಗಿಸಿ ಅಲ್ಲಿಂದ ಹೊರ ರಾಜ್ಯಗಳಿಗೆ ಬಿಡಿ ಬಿಡಿಯಾಗಿ ಮಾರಾಟ ಮಾಡಿ ಅಕ್ರಮ ಹಣ‌ ಸಂಪಾದನೆ‌ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸಿಸಿಬಿ ಮೇಜರ್ ಸರ್ಜರಿಗೆ ಬ್ರೇಕ್? ಯಾರಿದ್ದಾರೆ ಹಿಂದೆ!

Follow Us:
Download App:
  • android
  • ios