ಬೆಂಗಳೂರು[ಡಜ.04] ಉದ್ಯೋಗ ಕೊಡಿಸುವ ನೆಪದಲ್ಲಿ ಹೆಣ್ಣು ಮಕ್ಕಳನ್ನು ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ಮಹಿಳೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ನಾಗಾಲ್ಯಾಂಡ್ ಮೂಲದ 29 ವರ್ಷದ ಕಟ್ಟಿ ರುಡಿ ಎಂಬುವಳನ್ನು ಬಂಧಿಸಲಾಗಿದೆ. ಕಳೆದ ಆರು ತಿಂಗಳಿನಿಂದ ಜಯನಗರದಲ್ಲಿ ಸ್ಪಾ ಹೆಸರಿನಲ್ಲಿಯೇ ವೇಶ್ಯಾವಾಟಿಕೆ ನಡೆಸುತ್ತಿದ್ದಳು. ಮೂವರು ಹೆಣ್ಣು ಮಕ್ಕಳನ್ನು ರಕ್ಷಿಸಲಾಗಿದ್ದು 3 ಸಾವಿರ ರೂ. ಮೊಬೈಲ್ ಪೋನ್ ಮತ್ತು ಕಾಂಡೋಮ್ ಪ್ಯಾಕೇಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬೆಂಗಳೂರಲ್ಲಿ ಸಲಿಂಗ ಕಾಮಕ್ಕೆ ಹೋದರೆ ಅಷ್ಟೆ ಕತೆ

ಫೇಶಿಯಲ್ ಮಸಾಜ್ , ಹೇರ್ ಕಟ್ ಹೆಸರಿನಲ್ಲಿ ಹೆಣ್ಣು ಮಕ್ಕಳನ್ನು ಕೆಲಸಕ್ಕೆ ತೆಗೆದುಕೊಂಡು ನಂತರ ಅವರನ್ನು ವೇಶ್ಯಾವಾಟಿಕೆಗೆ ತಳ್ಳಲಾಗುತ್ತಿತ್ತು. ರಕ್ಷಣೆ ಮಾಡಿರುವ ವಿಚಾರವನ್ನು ನಾರ್ತ್ ಈಸ್ಟ್ ಸೋಲಿಡಾರಿಟಿ ಫೌರ್ಮ್‌ನ ಅಧ್ಯಕ್ಷೆ ಡಾ.ರಿನಿ ರಾಟ್ಲೆ ಅವರ ಗಮನಕ್ಕೂ ತರಲಾಗಿದೆ. ಇಂತಹ ಪಾರ್ಲರ್‌ಗಳ ಮೇಲೆ ಪೊಲೀಸರು ಆಗಾಗ ಪರಿಶೀಲನೆ ನಡೆಸುತ್ತಿರಬೇಕು ಎಂಬ ಸಲಹೆಯನ್ನು ಅವರು ನೀಡಿದ್ದಾರೆ.