ಬೆಂಗಳೂರು(ಏ. 09) ಲಾಕ್ ಡೌನ್ ಪ್ರೇಮಿಗಳಿಗೂ ಕಡಿವಾಣ ಹಾಕಿದೆ. ಆದರೆ ಇಲ್ಲೊಂದು ಜೋಡಿ ಮದುವೆಯಾಗಿ ನೇರವಾಗಿ ಪೊಲೀಸ್ ಠಾಣೆಗೆ ಬಂದಿದೆ. ಹೌದು ರಕ್ಷಣೆ ಕೋರಿ ಬಂದಿದೆ.
 ಲಾಕ್ ಡೌನ್ ಪರಿಸ್ಥಿತಿ ನಿಭಾಯಿಸುವಲ್ಲಿ ಪೊಲೀಸರು ಹೈರಾಣರಾಗಿ ಹೋಗಿದ್ದಾರೆ. ಇದೆಲ್ಲದರ ನಡುವೆ ಪ್ರೇಮಿಗಳು ರಕ್ಷಣೆ ಕೊಡಿ ಎಂದು ಪೊಲೀಸರ ಮೊರೆಗೆ ಬಂದಿದ್ದಾರೆ.

ಗಿರಿನಗರ ಠಾಣೆಗೆ ಬಂದ ಪ್ರೇಮಿಗಳು ರಕ್ಷಣೆ ಕೋರಿದ್ದಾರೆ.   ಮದುವೆ ಡ್ರೆಸ್ ನಲ್ಲಿ ಠಾಣೆಗೆ‌ ಬಂದ ಜೋಡಿ ರಕ್ಷಣೆ ಕೋರಿದ್ದಾರೆ.  ಪ್ರೇಮಿಗಳಾದ ಮುರುಘ ಮತ್ತು ಮೇಘಶ್ವಿನಿ ಮದುವೆಯಾಗಿ ಠಾಣೆಗೆ ಆಗಮಿಸಿದ್ದಾರೆ.  ಮನೆಯವರ ವಿರೋಧದ ನಡುವೆ ಜೋಡಿ ಮದುವೆಯಾಗಿ ಬಂದಿದ್ದಾರೆ.

ಬುಲೆಟ್ ಪ್ರಕಾಶ್ ಮಗಳ ಮದುವೆ ಜವಾಬ್ದಾರಿ ವಹಿಸಿಕೊಂಡ ದರ್ಶನ್

ದೇವಸ್ಥಾನದ ಮುಂದೆ ತಾಳಿ ಕಟ್ಟಿ ಪೊಲೀಸ್ ಠಾಣೆಗೆ ಎಂಟ್ರಿ ಕೊಟ್ಟಿದ್ದಾರೆ.  ಮೇಘ ಮನೆಯವರಿಂದ ತೊಂದರೆ ಇದೆ ರಕ್ಷಣೆ ಕೊಡಿ ಎಂದು ನವಜೋಡಿ ಪೊಲೀಸರ ಮೊರೆ ಹೋಗಿದೆ.  ಮಾಸ್ಕ್ ಹಾಕಿಕೊಂಡೆ ಠಾಣೆಗೆ ಬಂದಿದ್ದ ನವಜೋಡಿ ಇದೀಗ ರಕ್ಷಣೆಯಲ್ಲಿದ್ದಾರೆ.