* ಅನುಮತಿ ಇಲ್ಲದೇ ವಿದೇಶಕ್ಕೆ ತೆರಳಿದ ಪೊಲೀಸ್ ಇನ್ಸ್ಪೆಕ್ಟರ್ ಸಸ್ಪೆಂಡ್* ಮಂಗಳೂರು ಉತ್ತರ ಸಂಚಾರಿ ಠಾಣೆ ಇನ್ಸ್‌ಪೆಕ್ಟರ್ ಶರೀಫ್ ಅಮಾನತು* ಪೊಲೀಸ್ ಇಲಾಖೆ ನಿಯಮದ ಪ್ರಕಾರ ವಿದೇಶಿ ಪ್ರಯಾಣಕ್ಕೆ ಅನುಮತಿ‌ ಕಡ್ಡಾಯ* ಆದ್ರೆ ಇಲಾಖೆ ಮೇಲಾಧಿಕಾರಿಗಳ ಅನುಮತಿ ಪಡೆಯದೇ ವಿದೇಶಕ್ಕೆ ತೆರಳಿದ್ದ ಶರೀಫ್

ಮಂಗಳೂರು(ಮಾ. 22 )ಅನುಮತಿ ಇಲ್ಲದೇ ವಿದೇಶಕ್ಕೆ ತೆರಳಿದ ಪೊಲೀಸ್(Karnataka Police) ಇನ್ಸ್ಪೆಕ್ಟರ್ ಸಸ್ಪೆಂಡ್ (Suspend) ಆಗಿದ್ದಾರೆ. ಪ್ರವಾಸಕ್ಕೆ ತೆರಳುವುದಾಗಿ ಹೇಳಿ ದುಬೈಗೆ (Dubai) ತೆರಳಿದ್ದ ಸಂಚಾರ ಉತ್ತರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಮುಹಮ್ಮದ್ ಶರೀಫ್‌ರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಮುಹಮ್ಮದ್ ಶರೀಫ್ ಇಲಾಖೆಯ ಹಿರಿಯ ಅಧಿಕಾರಿಗಳ ಅನುಮತಿ ಪಡೆಯದೆ ದುಬೈ ಪ್ರವಾಸ ಮಾಡಿರುವುದು ದೃಢಪಟ್ಟಿದೆ. ಮಹಮ್ಮದ್ ಷರೀಫ್ ಅವರು ಊರಿನ ಮನೆಯಲ್ಲಿ ಅತೀ ಅಗತ್ಯದ ಧಾರ್ಮಿಕ ಕಾರ್ಯಕ್ರಮ ಇರುವುದಾಗಿ ಮಾಹಿತಿ ನೀಡಿ ರಜೆ ಪಡೆದುಕೊಂಡಿದ್ದರು.

ವಿದೇಶ ಪ್ರಯಾಣ ಮಾಡುವಾಗ ಕರ್ನಾಟಕ ನಾಗರೀಕ ಸೇವಾ (ನಡತೆ) ನಿಯಮ 2021ರ ನಿಯಮ 8ರ ಉಪನಿಯಮ 2 ಕ್ಕೆ ಸಂಬಂಧಪಟ್ಟ ಇಲಾಖಾ ಮೇಲಾಧಿಕಾರಿಗಳ ಪೂರ್ವಾನುಮತಿಯನ್ನು ಪಡೆಯದೇ, ಲಾಖಾ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅಮಾನತು ಮಾಡಲಾಗಿದೆ ಎಂದು ಮಂಗಳೂರು ನಗರ ಪೊಲೀಸ್‌ ಆಯುಕ್ತ ಎನ್‌ ಶಶಿಕುಮಾರ್‌ ತಿಳಿಸಿದ್ದಾರೆ.

ಮಂಗಳೂರು ಉತ್ತರ ಸಂಚಾರಿ ಠಾಣೆ ಇನ್ಸ್‌ಪೆಕ್ಟರ್ ಆಗಿ ಶರೀಫ್ ಕೆಲಸ ಮಾಡುತ್ತಿದ್ದರು. ಪೊಲೀಸ್ ಇಲಾಖೆ ನಿಯಮದ ಪ್ರಕಾರ ವಿದೇಶಿ ಪ್ರಯಾಣಕ್ಕೆ ಅನುಮತಿ‌ ಕಡ್ಡಾಯ ಮೂಲಗಳ ಪ್ರಕಾರ ಕ್ರಿಮಿನಲ್ ಒಬ್ಬನ ಜೊತೆ ವಿದೇಶ ಪ್ರವಾಸ ಹೋಗಿದ್ದ ಮಾಹಿತಿ ಲಭ್ಯವಾಗಿದೆ. ಪ್ರಕರಣವೊಂದರ ತನಿಖೆ ವೇಳೆ ಶರೀಫ್ ವಿದೇಶಿ ಪ್ರವಾಸದ ಮಾಹಿತಿ ಲಭ್ಯವಾಗಿದೆ

ಮದ್ಯ ಸೇವಿಸಿ ಬಂದಿದ್ದ ಶಿಕ್ಷಕ:  ಮದ್ಯ ಸೇವನೆ ಮಾಡಿ ಶಾಲೆಗೆ ಬಂದ ಶಿಕ್ಷಕನನ್ನು ಕುಣಿಗಲ್ ಕ್ಷೇತ್ರ ಶಿಕ್ಷಣಾಧಿಕಾರಿ ಅಮಾನತು ಮಾಡಿ ಆದೇಶ ಹೊರಡಿಸಿದ್ದರು. ‌ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹೊಸಕೆರೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸಹ ಶಿಕ್ಷಕನಾಗಿ ಕೆಲಸ ನಿರ್ವಹಿಸುತ್ತಿದ್ದ ಕಾಂತರಾಜು ಎಣ್ಣೆ ಏರಿಸಿ ಶಾಲೆಗೆ ಬಂದಿದ್ದರು.

ಮದ್ಯಪಾನ ಮಾಡಿ ಶಾಲೆ ಬಂದಿರುವ ವಿಚಾರ ಗ್ರಾಮಸ್ಥರಿಗೆ ಹಾಗೂ ಮಕ್ಕಳ ಪೋಷಕರ ಗಮನಕ್ಕೆ ಬಂದಿದೆ. ಕೂಡಲೇ ಗ್ರಾಮಸ್ಥರು ಬಿಇಒ ತಿಮ್ಮರಾಜು ಅವರಿಗೆ ಪೋನ್ ಮೂಲಕ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿದಾಗ ವಾಸನೆಯಲ್ಲೇ ಎಲ್ಲ ಪತ್ತೆಯಾಗಿತ್ತು.

ಬಳಿಕ 1996ರ ಕರ್ನಾಟಕ ನಾಗರೀಕ ಸೇವಾ ಸನ್ನಡತೆ ಅಧಿನಿಯಮ 3(1)(2)(3)ರ ನಿಯಮಗಳನ್ನು ಉಲ್ಲಂಘಟನೆ ಮಾಡಿರುವುದು ಸಾಬೀತಾದ ಪರಿಣಾಮ ಅಮಾನತ್ತು ಮಾಡಲಾಗಿತ್ತು. 

ಶಾಲೆಯಲ್ಲಿ ನಮಾಜ್ ಶಿಕ್ಷಕಿ ಅನಾನತು: ಶಿವಮೊಗ್ಗದ ಖಾಸಗಿ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳಿಗೆ ನಮಾಜ್‌(Namaz) ಮಾಡಲು ಅವಕಾಶ ನೀಡಲಾಗಿದೆ ಎಂಬ ಸುದ್ದಿ ದಟ್ಟವಾಗಿ ಹಬ್ಬಿತ್ತು. ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ(Social Media) ಸಖತ್ತಾಗಿ ವೈರಲ್‌ ಆಗಿದೆ. ಇದರ ಬೆನ್ನಲ್ಲೇ ಶಾಲಾ ಆಡಳಿತ ಮಂಡಳಿಯು ಶಾಲೆ ಮುಖ್ಯಶಿಕ್ಷಕಿಯನ್ನು ಅಮಾನತು ಮಾಡಿತ್ತು.

ತರಗತಿಯಲ್ಲಿ ಅನಗತ್ಯ ಗೊಂದಲ ಸೃಷ್ಟಿ ಮಡ್ತಿದ್ದ ಶಿಕ್ಷಕಿ

ಜಬೀನಾ ಪರ್ವಿನ್‌ ಅಮಾನತುಗೊಂಡ ಅಮಾನತುಗೊಂಡಿದ್ದರು. ಗೋಪಾಲಗೌಡ ಬಡಾವಣೆಯ ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯಲ್ಲಿ ಈ ಘಟನೆ ನಡೆದಿದೆ. ವಿಶೇಷವೆಂದರೆ, ಈ ಶಾಲೆ ಆಡಳಿತ ಮಂಡಳಿ ಅಧ್ಯಕ್ಷ ಬಿಜೆಪಿ ನಾಯಕನಿಗೆ ಸೇರಿದ್ದು.

ಹಿಜಾಬ್ ವಿಚಾರದಲ್ಲಿ ಸರ್ಕಾರ ಮತ್ತು ನ್ಯಾಯಾಲಯದ ಮಾತನ್ನು ಕೇಳದ ವಿದ್ಯಾರ್ಥಿಗಳನ್ನು ಸಸ್ಪೆಂಡ್ ಮಾಡಲಾಗಿತ್ತು. ಹಿಜಾಬ್ ಪ್ರಕರಣ ಇದೀಗ ಸುಪ್ರೀಂ ಅಂಗಳ ತಲುಪಿದೆ. ಕರ್ನಾಟದ ಪ್ರಕರಣ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. 

ಹಿಜಾಬ್ ಬೇಕು, ಶಿಕ್ಷಣವೂ ಬೇಕು ಎಂದು ಮುಸ್ಲಿಂ ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದರು. ಅನೇಕರು ಇದೇ ಕಾರಣಕ್ಕೆ ಪರೀಕ್ಷೆಯನ್ನು ಬಹಿಷ್ಕರಿಸಿದ್ದರು. ಹಿಜಾಬ್ ಕಾರಣಕ್ಕೆ ಪರೀಕ್ಷೆ ಬಹಿಷ್ಕಾರ ಮಾಡಿದವರಿಗೆ ಇನ್ನೊಂದು ಅವಕಾಶ ಇಲ್ಲ ಎಂದು ಶಿಕ್ಷಣ ಸಚಿವರು ಸಹ ಅಷ್ಟೇ ಖಡಕ್ ಆಗಿ ತಿಳಿಸಿದ್ದರು.