* ಮಂಗಳೂರಿನಲ್ಲಿ ವಕೀಲನಿಂದ ಇಂಟರ್ನ್ ಶಿಪ್ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಪ್ರಕರಣ* ಪೊಲೀಸರಿಂದ ತಲೆ‌ ಕರೆಸಿಕೊಂಡಿದ್ದ ಆರೋಪಿ ವಕೀಲ ಕೊನೆಗೂ ನ್ಯಾಯಾಲಯಕ್ಕೆ ಶರಣು* ಮಂಗಳೂರಿನ ಮೂರನೇ ಜೆ.ಎಂ.ಎಫ್.ಸಿ ಕೋರ್ಟ್ ಗೆ ಶರಣಾದ ವಕೀಲ ಕೆ.ಎಸ್.ಎನ್.ರಾಜೇಶ್* ಮಂಗಳೂರಿನ ಪ್ರಖ್ಯಾತ ವಕೀಲನಾಗಿದ್ದ ಕೆ.ಎಸ್.ಎನ್.ರಾಜೇಶ್ ವಿರುದ್ದ ದೂರು ನೀಡಿದ್ದ ಕಾನೂನು ವಿದ್ಯಾರ್ಥಿನಿ

ಮಂಗಳೂರು (ಡಿ. 20): ಮಂಗಳೂರಿನಲ್ಲಿ ವಕೀಲನಿಂದ ಇಂಟರ್ನ್ ಶಿಪ್ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ (Sexual Harassment) ಆರೋಪ ಕೇಳಿ ಬಂದಿತ್ತು. ಪೊಲೀಸರಿಂದ (Karnataka Police)ತಲೆ‌ ಕರೆಸಿಕೊಂಡಿದ್ದ ಆರೋಪಿ ವಕೀಲ ಕೊನೆಗೂ ನ್ಯಾಯಾಲಯಕ್ಕೆ(Court) ಶರಣಾಗಿದ್ದಾರೆ.

ಮಂಗಳೂರಿನ ಮೂರನೇ ಜೆ.ಎಂ.ಎಫ್.ಸಿ ಕೋರ್ಟ್ ಗೆ ವಕೀಲ ಕೆ.ಎಸ್.ಎನ್.ರಾಜೇಶ್ ಶರಣಾಗಿದ್ದಾರೆ. ಮಂಗಳೂರಿನ ಪ್ರಖ್ಯಾತ ವಕೀಲನಾಗಿದ್ದ ಕೆ.ಎಸ್.ಎನ್.ರಾಜೇಶ್ ವಿರುದ್ದ ಕಾನೂನು ವಿದ್ಯಾರ್ಥಿನಿ ದೂರು ನೀಡಿದ್ದರು.

ಆರೋಪಿ ವಕೀಲನಿಂದ ನಿರಂತರ ಲೈಂಗಿಕ ಕಿರುಕುಳದ ಬಗ್ಗೆ ಅಕ್ಟೋಬರ್.19ರಂದು ದೂರು ದಾಖಲಾಗಿತ್ತು ಲೈಂಗಿಕ ಕಿರುಕುಳದ ಜೊತೆ ಜೀವ ಬೆದರಿಕೆ ಹಾಕಿರುವ ಬಗ್ಗೆಯೂ ಪ್ರಕರಣ ದಾಖಲಾಗಿತ್ತು. ದೂರು ದಾಖಲಾದ ಬಳಿಕ ಕಳೆದ ಎರಡು ತಿಂಗಳಿನಿಂದ ನಾಪತ್ತೆಯಾಗಿದ್ದ ವಕೀಲ ರಾಜೇಶ್ ಈಗ ಶರಣಾಗಿದ್ದಾರೆ. ಸುಪ್ರೀಂ ಕೋರ್ಟ್ ನಲ್ಲೂ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕಾರಗೊಂಡ ಹಿನ್ನೆಲೆ ನ್ಯಾಯಾಲಯಕ್ಕೆ ಶರಣಾಗಿದ್ದಾರೆ.

ಲೈಂಗಿಕ ದೌರ್ಜನ ನಡೆದೇ ಇಲ್ಲ, ಹಣಕ್ಕಾಗಿ ನಡೆದ ಷಡ್ಯಂತ್ರವಿದು: ವಕೀಲ ರಾಜೇಶ್

ನನ್ನ ವಿರುದ್ಧ ಷಡ್ಯಂತ್ರ:  ಈ ಆರೋಪದ ಬಗ್ಗೆ ವಕೀಲ ರಾಜೇಶ್ ಪ್ರತಿಕ್ರಿಯೆ ನೀಡಿದ್ದರು. ಪ್ರಕರಣ ನಡೆದೇ ಇಲ್ಲ. ಇದು ನನ್ನ ವಿರುದ್ಧ ನಡೆದ ಷಡ್ಯಂತ್ರ. ನಾನು ಕದ್ರಿ ಪೊಲೀಸ್ ಠಾಣೆಗೆ ಈ ಮೊದಲೇ ದೂರು ಕೊಟ್ಟಿದ್ದೆ. ಆದರೆ ಪೊಲೀಸರು ಇನ್ನೂ ವಿಚಾರಣೆ ಮಾಡಿಲ್ಲ. ಹಣ ವಸೂಲಿ ಮಾಡುವ ಉದ್ದೇಶದಿಂದ ಈ ರೀತಿ ಆರೋಪ ಮಾಡಲಾಗಿದೆ. ಇದರಲ್ಲಿ ಸಾಕಷ್ಟು ಮಂದಿ ಭಾಗಿಯಾಗಿದ್ಧಾರೆ' ಎಂದು ರಾಜೇಶ್ ಆಡಿಯೋ ಮೂಲಕ ತಿಳಿಸಿದ್ದರು.

ಮಂಗಳೂರಿನ ಭಾಗದಲ್ಲಿ ವೈರಲ್ ಆದ ಆಡಿಯೋ ಕ್ಲಿಪ್ ಪ್ರಕರಣವನ್ನು ಮುನ್ನೆಲೆಗೆ ತಂದಿತ್ತು. ನನ್ನಿಂದ ಹಣ ವಸೂಲಿ ಮಾಡಲು ಉತ್ತರ ಭಾರತದ ಹುಡುಗಿ ಮತ್ತು ಹಲವರು ಸೇರಿಕೊಂಡು ಹುನ್ನಾರ ನಡೆಸಿದ್ದರು ಎಂದು ರಾಜೇಶ್ ಪ್ರತಿಕ್ರಿಯೆ ನೀಡಿದ್ದರು.

ಪಟ್ನಾದ ಘೋರ ಪ್ರಕರಣ:  ಇಡೀ ಸಮಾಜವೇ ತಲೆತಗ್ಗಿಸುವಂತಹ ಪ್ರಕರಣವೊಂದು ಪಾಟ್ನಾದಿಂದ ವರದಿಯಾಗಿದೆ. ಬಿಹಾರದ ಹಾಜಿಪುರ ಪಟ್ಟಣದಲ್ಲಿ 60 ವರ್ಷದ ವ್ಯಕ್ತಿಯೊಬ್ಬ ತನ್ನ ಸಂಬಂಧಿಯ (ಸೊಸೆ) ಮೂರೂವರೆ ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿದ್ದಾನೆ.

ಡಿಸೆಂಬರ್ 16 ರಂದೇ ಎಸಗಿರುವ ಕೃತ್ಯ ಶನಿವಾರ ಬೆಳಕಿಗೆ ಬಂದಿದೆ. ಬಾಲಕಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದಾಳೆ.ಈ ಹಿನ್ನೆಲೆಯಲ್ಲಿ 60 ವರ್ಷದ ಆರೋಪಿಯನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ದೂರು ನೀಡಿದ ಮಹಿಳೆ ಆರೋಪಿಗೆ ಸಂಬಂಧದಲ್ಲಿ ಹಿತಿಯ ಸೊಸೆಯಾಗಬೇಕು. ಮದುವೆ ಸಮಾರಂಭವೊಂದರಲ್ಲಿ ಭಾಗವಹಿಸಲು ವೃದ್ಧ ಹಾಜಿಪುರಕ್ಕೆ ಬಂದಿದ್ದ. ಡಿಸೆಂಬರ್ 16 ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಮನೆಯ ಟೆರೆಸ್ ನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ವೃದ್ಧ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಮಗುವಿನ ಖಾಸಗಿ ಅಂಗಗಳಿಗೆ ಗಾಯಗಳಾಗಿವೆ. ಮಗುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ನಂತರ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಸ್ನೇಹ ಸಂಪಾದಿಸಿ ಕೃತ್ಯ ಎಸಗಿದ್ದ ಬಸ್ ಚಾಲಕ: ಬಾಲಕಿ ಮೇಲೆ ಅತ್ಯಾಚಾರದ (Rape) ಪ್ರಕರಣಕ್ಕೆ ಸಂಬಧಿಸಿ ಮಿನಿ ಬಸ್ (Bus Driver)ಚಾಲಕನೊಬ್ಬನನ್ನು ತಮಿಳುನಾಡಿನಲ್ಲಿ ಬಂಧಿಸಲಾಗಿತ್ತು. 17 ವರ್ಷದ 12 ನೇ ತರಗತಿ ವಿದ್ಯಾರ್ಥಿನಿ ಮೂರು ದಿನದಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಇದೇ ಕಾರಣಕ್ಕೆ ಶಾಲೆಗೆ (School) ಹೋಗಲು ಹಿಂದೇಟು ಹಾಕಿದ್ದಾಳೆ. ಮಗಳ ಸ್ಥಿತಿಯನ್ನು ನೋಡಿ ತಾಯಿ (Mother) ಪ್ರಶ್ನೆ ಮಾಡಿದಾಗ ಪ್ರಕರಣ ಗೊತ್ತಾಗಿತ್ತು.

ಪುಣೆ ಪ್ರಕರಣ: ಮಹಾರಾಷ್ಟ್ರದ ಪುಣೆಯ ಹಡಪ್ಸರ್‌ನ 25 ವರ್ಷದ ಮಾಡೆಲ್ (Model) ಮೂವರ ವಿರುದ್ಧ ದೂರು ದಾಖಲಿಸಿದ್ದರು. ತನ್ನನ್ನು ಲೈಂಗಿಕವಾಗಿ (Sexual Harassment)ಬಳಸಿಕೊಂಡಿದ್ದು ಅಲ್ಲದೇ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದರು. ರೂಪದರ್ಶಿಯ ದೂರು ಆಧರಿಸಿ ವಾರ್ಜೆ ಪೊಲೀಸರು ಚಲನಚಿತ್ರ (Bollywood)ನಿರ್ಮಾಪಕ ಸೇರಿ ಮೂವರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದರು.

ಬಾಲಕಿಯ ಡೆತ್ ನೊಟ್:  'Stop Sexual harassment', ಶಿಕ್ಷಕರಿರಲಿ, ಸಂಬಂಧಿಕರಾಗಿರಲಿ ಯಾರನ್ನೂ ನಂಬಬೇಡ. ಹೆಣ್ಣುಮಕ್ಕಳಿಗೆ ಈಗ ತಾಯಿಯ ಗರ್ಭ ಮತ್ತು ಸಮಾಧಿ ಮಾತ್ರ ಸುರಕ್ಷಿತವಾಗಿದೆ'. ಬಾಲಕಿಯೊಬ್ಬಳ ಡೆತ್‌ನೋಟ್‌ನಲ್ಲಿ ಕಂಡು ಬಂದ ಭಾವುಕಗೊಳಿಸುವ ಸಾಲುಗಳಿವು. ಚೆನ್ನೈನ ಹೊರವಲಯದ 11ನೇ ತರಗತಿ ಓದುತ್ತಿರುವ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡು, ಸದ್ಯ ಆಕೆ ಬರೆದ ಡೆತ್‌ನೋಟ್ ವೈರಲ್ ಆಗಿದೆ.

ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು ಚೆನ್ನೈನ ಹೊರವಲಯದಲ್ಲಿ ಗಂಡ-ಹೆಂಡತಿ ವಾಸವಾಗಿದ್ದಾರೆ. ಅವರ ಮಗಳು 11ನೇ ತರಗತಿಯಲ್ಲಿ ಓದುತ್ತಿದ್ದಳು. ಶನಿವಾರ ಬಾಲಕಿ ಚಾವಣಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ ಎಂದಿದ್ದಾರೆ. ತನಿಖೆಯಲ್ಲಿ, ಪೊಲೀಸರು ಈ ಹುಡುಗಿಯ ಕೊಠಡಿಯಿಂದ ಆತ್ಮಹತ್ಯೆ ಪತ್ರವನ್ನು ವಶಪಡಿಸಿಕೊಂಡಿದ್ದಾರೆ. ಈ ಆತ್ಮಹತ್ಯೆ ಪತ್ರದಲ್ಲಿ ‘ತಾಯಿಯ ಗರ್ಭ ಮತ್ತು ಸಮಾಧಿ ಮಾತ್ರ ಸುರಕ್ಷಿತವಾಗಿ ಉಳಿದಿದೆ’ ಎಂದು ಬರೆಯದಿದ್ದಾಳೆ ಎನ್ನಲಾಗಿದೆ. 11ನೇ ತರಗತಿ ಓದುತ್ತಿರುವ ಈ ಬಾಲಕಿಯ ಈ ಪತ್ರ ಇದೀಗ ವೈರಲ್ ಆಗಿದೆ.