ಆಂಕರ್ ಅನುಶ್ರೀ ನಂಟಿದ್ದ ಡ್ರಗ್ ಪ್ರಕರಣದ ಆರೋಪಿ ಕಿಶೋರ್ ಶೆಟ್ಟಿ ಬಟ್ಟೆ ಬಿಚ್ಚಿಸಿ ಕಮಿಷನರ್ ಕ್ಲಾಸ್
* ರೌಡಿ, ಡ್ರಗ್ಸ್, ಗಾಂಜಾ, ಕಳ್ಳ ಗಿರಾಕಿಗಳ ಚಳಿ ಬಿಡಿಸಿದ ಮಂಗಳೂರು ಕಮೀಷನರ್
* ಡ್ರಗ್ಸ್ ಪ್ರಕರಣ ಆರೋಪಿ ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿಗೆ ಕಮೀಷನರ್ ಕ್ಲಾಸ್
* ಕಿಶೋರ್ ಶೆಟ್ಟಿ ಬಟ್ಟೆ ಬಿಚ್ಚಿಸಿದ ಕಮೀಷನರ್ ಶಶಿಕುಮಾರ್
ಮಂಗಳೂರು, (ಜುಲೈ.06): ಆಂಕರ್ ಅನುಶ್ರೀ ನಂಟಿದ್ದ ಡ್ರಗ್ ಪ್ರಕರಣದ ಆರೋಪಿ ಕಿಶೋರ್ ಶೆಟ್ಟಿಗೆ ಮಂಗಳೂರು ಕಮಿಷನರ್ ಶಶಿಕುಮಾರ್ ಕಮಿಷನರ್ ಫುಲ್ ಕ್ಲಾಸ್ ತೆಗೆದುಕೊಂಡದ್ದಾರೆ.
ಮಂಗಳೂರಿನ ಪೊಲೀಸ್ ಗ್ರೌಂಡ್ ನಲ್ಲಿ ಇಂದು(ಬುಧವಾರ) ಆರೋಪಿಗಳ ಪರೇಡ್ ನಡೆಸಿದರು. ಈ ವೇಳೆ ಮಂಗಳೂರು ಕಮಿಷನರ್ ಶಶಿಕುಮಾರ್ ಅವರು ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿಗೆ ಬಟ್ಟೆ ಬಿಚ್ಚಿಸಿ ತರಾಟೆಗೆ ತೆಗೆದುಕೊಂಡರು. ಏನಪ್ಪಾ ಮೈ ಮೇಲೆ ಇಷ್ಟು ಟ್ಯಾಟೋ ಹಾಕಿಸಿಕೊಂಡಿದ್ಯಾ.? ಅಂತ ಪ್ರಶ್ನಿಸಿದ್ದಾರೆ. ಈ ವೇಳೆ ಕಿಶೋರ್ ಅಮನ್, ಇದು ತಾಯಿಯ ಟ್ಯಾಟೋ ಅಂತ ಉತ್ತರಿಸಿದ್ದಾರೆ. ಮಾಡೋದೆಲ್ಲಾ ಮಾಡಿ ತಾಯಿಯದ್ದು ಯಾಕೆ ಹಾಕಿಸಿಕೊಂಡಿದ್ಯಾ ಎಂದು ಗದರಿದರು.
ಕಿಶೋರ್ ಶೆಟ್ಟಿಗೂ ಬುಕ್ಕಿಗಳಿಗೂ ಭಾರೀ ನಂಟು; ಡ್ರಗ್ ಜೊತೆಗೆ ಬೆಟ್ಟಿಂಗ್ ದಂಧೆಯಲ್ಲೂ ಭಾಗಿ
ನೆಟ್ಟಗೆ ಬಾಳಿದರೆ ಸಾಕು ಹಚ್ಚೆ ಹಾಕಿಸಿಕೊಳ್ಳಬೇಕಿಲ್ಲ. ಎಲ್ಲಿಂದ ಡ್ರಗ್ಸ್ ಸಫ್ಲೈ ಮಾಡಿಕೊಂಡಿದ್ಯಾ, ಸಫ್ಲೈ ನಿಲ್ಲಿಸಿದ್ಯಾ? ನೀನು ತಿನ್ನುತ್ತಿಯಾ ಅಥವಾ ಬೇರೆಯವರಿಗೆ ತಿನ್ನಿಸುತ್ತಿಯಾ? ಎಂದು ಪ್ರಶ್ನೆಗಳ ಮೇಲೆ ಪ್ರಶ್ನಿಸಿದರು.
ಇನ್ನು ಇದೇ ವೇಳೆ ಕಮೀಷನರ್ ಶಶಿಕುಮಾರ್ ಅವರು, ಕಿಶೋರ್ ಶೆಟ್ಟಿಯ ಉದ್ದ ಕೂದಲು ಬಿಟ್ಟಿದ್ದನ್ನು ಪ್ರಶ್ನಿಸಿದ್ರು. ಡ್ಯಾನ್ಸ್‌ಗಾಗಿ ಬಿಟ್ಟಿದ್ದೇನೆ ಎಂದು ಕಿಶೋರ್ ಅಮನ್ ಶೆಟ್ಟಿ ಉತ್ತರಿಸಿದರು. ಆಂಕರ್ ಅನುಶ್ರೀ ನಂಟಿದ್ದ ಡ್ರಗ್ ಕೇಸ್ ನಲ್ಲಿ ಕಿಶೋರ್ ಅಮನ್ ಶೆಟ್ಟಿ ಆರೋಪಿಯಾಗಿದ್ದ.
ಮೂಲತಃ ಡ್ಯಾನ್ಸರ್ ಆಗಿರುವ ಕಿಶೋರ್ ಅಮಾನ್ ಶೆಟ್ಟಿ ಹಿಂದಿಯ ಕೆಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾನೆ. ಅಲ್ಲದೆ, ಜನಪ್ರಿಯ 'ABCD' ಚಿತ್ರದಲ್ಲೂ ಚಿಕ್ಕ ಪಾತ್ರ ನಿಭಾಯಿಸಿದ್ದಾನೆ. ಮಾದಕ ವಸ್ತು ಮಾರಾಟ ಮಾಡುತ್ತಿದ್ದುದು ಮಾತ್ರವಲ್ಲದೆ ಸ್ವತಃ ಈತಗೂ ಮಾದಕ ವ್ಯಸನಿ ಆಗಿದ್ದ.
ಶಾಕಿಂಗ್ ಸಂಗತಿ ಏನೆಂದರೆ ಕನ್ನಡ ಚಿತ್ರರಂಗದ ಕೆಲವು ನಟಿಯರು ಮತ್ತು ನಿರೂಪಕಿಯರ ಜೊತೆಗೂ ಕಿಶೋರ್ ಶೆಟ್ಟಿ ಸಂಪರ್ಕ ಹೊಂದಿದ್ದಾನೆ ಎನ್ನಲಾಗಿದೆ. ಡ್ರಗ್ಸ್ ಮಾಫಿಯಾಗೆ ಸಂಬಂಧಿಸಿದಂತೆ ಆ ನಟಿಯರು ಮತ್ತು ನಿರೂಪಕಿಯ ಕೈವಾಡ ಏನಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು.