Prostitution Racket: ಸ್ಟುಡೆಂಟ್ಸ್ ಬಳಸಿಕೊಂಡು ವೇಶ್ಯಾವಾಟಿಕೆ ಜಾಲ

* ಅಪ್ರಾಪ್ತ ಕಾಲೇಜು ವಿದ್ಯಾರ್ಥಿನಿಯರನ್ನು ಬಳಸಿ ಹೈಟೆಕ್ ವೇಶ್ಯಾವಾಟಿಕೆ ಪ್ರಕರಣ
* ವಿದ್ಯಾರ್ಥಿನಿಯನ್ನು ಬಳಸಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದ ಕೃತ್ಯ ಬೆಳಕಿಗೆ
*  ಪ್ರತ್ಯೇಕ ನಾಲ್ಕು ಪೋಕ್ಸೋ ಪ್ರಕರಣ ಸೇರಿದಂತೆ ಒಟ್ಟು ಐದು ಪ್ರಕರಣ ದಾಖಲಿಸಿಕೊಂಡ ಮಂಗಳೂರು ಪೊಲೀಸರು
* ವಿದ್ಯಾರ್ಥಿನಿಗೆ ಲೈಂಗಿಕ ‌ಕಿರುಕುಳ ನೀಡಿದ ನಾಲ್ವರು ಆರೋಪಿಗಳ ಬಂಧನ

Mangaluru Police bust prostitution racket arrest Four mah


ಮಂಗಳೂರು(ಮೇ 08)  ಕಾಲೇಜು ವಿದ್ಯಾರ್ಥಿನಿಯರನ್ನು(Students)  ಬಳಸಿ ಹೈಟೆಕ್ ವೇಶ್ಯಾವಾಟಿಕೆ (prostitution) ನಡೆಸುತ್ತಿದ್ದ ಪ್ರಕರಣ ಮಂಗಳೂರಿನಿಂದ ವರದಿಯಾಗಿದೆ.  ಅಪ್ರಾಪ್ತ ವಿದ್ಯಾರ್ಥಿನಿಯನ್ನು ಬಳಸಿಕೊಂಡು  ವೇಶ್ಯಾವಾಟಿಕೆ ನಡೆಸುತ್ತಿದ್ದ ಕೃತ್ಯ ಬೆಳಕಿಗೆ ಬಂದಿದ್ದು ಪ್ರತ್ಯೇಕ ನಾಲ್ಕು ಪೋಕ್ಸೋ ಪ್ರಕರಣ ಸೇರಿದಂತೆ ಒಟ್ಟು ಐದು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ.

ವಿದ್ಯಾರ್ಥಿನಿಗೆ ಲೈಂಗಿಕ ‌ಕಿರುಕುಳ ನೀಡಿದ ನಾಲ್ವರು ಆರೋಪಿಗಳನ್ನು(Arresst) ಬಂಧಿಸಲಾಗಿದೆ.  ರಶೀದ್ ಸಾಹೇಬ್(73), ಮೊಹಮ್ಮದ್ ಆಲಿ(74), ಗ್ರೆಗರಿ ಲಿಯೋನಾರ್ಡ್ ಸಿಕ್ವೇರಾ(62), ಇಸ್ಮಾಯಿಲ್(41) ಬಂಧಿತ ಆರೋಪಿಗಳು. ಗ್ರಾಹಕರ ರೀತಿಯಲ್ಲಿ ಬಂದು ಲೈಂಗಿಕ ‌ಕಿರುಕುಳ ನೀಡುತ್ತಿದ್ದರು.  ಮಂಗಳೂರಿನ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಂದಿಗುಡ್ಡದ ರಿಯಾನಾ ರೆಸಿಡೆನ್ಸಿ ಅಪಾರ್ಟ್‌ಮೆಂಟ್ ನ ಪೆಂಟ್ ಹೌಸ್ ನಲ್ಲಿ  ವೇಶ್ಯಾವಾಟಿಕೆ ಬೆಳಕಿಗೆ ಬಂದಿತ್ತು. ಈ ಹಿಂದೆಯೇ ಓರ್ವ ಅಪ್ರಾಪ್ತ ವಿದ್ಯಾರ್ಥಿನಿ ಸೇರಿದಂತೆ ನಾಲ್ವರನ್ನು ಪೊಲೀಸರು ರಕ್ಷಣೆ ಮಾಡಿದ್ದರು.

ಪ್ರಕರಣದ ಬೆನ್ನು ಬಿದ್ದು ತನಿಖೆ ನಡೆಸಿದ್ದ ಮಂಗಳೂರು ಸಿಸಿಬಿ ಪೊಲೀಸರು ಈಗಾಗಲೇ ಐದು ಪ್ರಕರಣ ದಾಖಲಿಸಿ ಹತ್ತು ಜನರನ್ನು ಬಂಧಿಸಿದ್ದಾರೆ. ಇದೀಗ ಮತ್ತೆ ಐದು ಪ್ರಕರಣ ದಾಖಲಿಸಿ 10 ಜನರ ವಿರುದ್ಧ ಎಫ್.ಐ.ಆರ್ ದಾಖಲಿಸಿಸಲಾಗಿದ್ದು ಜಾಲವನ್ನು ಬುಡಸಮೇತ ಕಿತ್ತುಹಾಕುವ ಪಣ ತೊಟ್ಟಿದ್ದಾರೆ

ಹೊರಗೆ ಹೋಟೆಲ್..ಒಳಗೆ ವೇಶ್ಯಾವಾಟಿಕೆ.. ಹುಬ್ಬಳ್ಳಿ ಕರಾಮತ್ತು!

ನಿರಂತರ ದಾಳಿ:   ಹುಬ್ಬಳ್ಳಿ (Hubbalii) ಹಾಗೂ ಮಂಗಳೂರಿನಲ್ಲಿ(Mangaluru) ನಡೆಯುತ್ತಿದ್ದ ವೇಶ್ಯಾವಾಟಿಕೆ  ದಂಧೆ ಮೇಲೆ ಪೊಲೀಸರು ದಾಳಿ ಮಾಡಿದ್ದರು.  ಹುಬ್ಬಳ್ಳಿ  ಹಾಗೂ ಮಂಗಳೂರಿನಲ್ಲಿ  ಪ್ರತ್ಯೇಕವಾಗಿ ದಾಳಿಯಾಗಿದ್ದು, ಈ ಎರಡು ಘಟನೆಯ ಬಗ್ಗೆ ಮಾಹಿತಿ ಈ ಕೆಳಗಿನಂತಿದೆ.

ಜಿಲ್ಲೆಯ ಎಸ್.ಜಿ.ಟವರ್ಸ್, ಅಮೃತ ಡಿಲಕ್ಸ್ ಹೋಟೆಲ್‌ನಲ್ಲಿ ಹೈಟೆಕ್‌ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಲಾಡ್ಜ್ ಮಾಲೀಕ ಸೇರಿ ಹಲವರನ್ನು ಪೊಲೀಸರು ಬಂಧಿಸಿದ್ದಾರೆ.  ಲಾಡ್ಜ್ ಮಾಲೀಕ ವೆಂಕಟೇಶ ನಾಯ್ಕ, ಮ್ಯಾನೇಜರ್ ವಿರೇಶ್​ ಮುರುಡೇಶ್ವರ, ಕೆ.ಎಮ್.ಪ್ರದೀಪ್ ಗೌಡ, ಮಂಜುನಾಥ್ ಗೌಡ ಬಂಧಿತ ಆರೋಪಿಗಳು. ಆರೋಪಿಗಳು ಬೇರೆ ರಾಜ್ಯದಿಂದ ಹೆಣ್ಣು ಮಕ್ಕಳನ್ನು ಕರೆತಂದು ವೇಶ್ಯಾವಾಟಿಕೆಗೆ ದೂಡುತ್ತಿದ್ದರು.

ಹುಬ್ಬಳ್ಳಿ ತಾಲೂಕಿನ ವರೂರ ಗ್ರಾಮದಲ್ಲಿನ ಎಸ್.ಜಿ.ಟವರ್ಸ್ ಹಾಗೂ ಅಮೃತ ಕಂಫರ್ಟ್‌ ಹೋಟೆಲ್​ ಮೇಲೆ ದಾಳಿ ಮಾಡಿದ ಗ್ರಾಮೀಣ ಪೋಲಿಸರ ತಂಡ ಆರೋಪಿಗಳನ್ನು ಬಂಧಿಸಿದ್ದಾರೆ. ಸದ್ಯ ಯುವತಿಯರನ್ನು ರಕ್ಷಿಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಮಂಗಳೂರಿನಲ್ಲೂ ವೇಶ್ಯಾವಾಟಿಕೆ ದಂಧೆ  ಇಲ್ಲಿನ ಬೆಂದೋರ್‌ವೆಲ್‌ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆಯನ್ನು ಸಿಸಿಬಿ ಪೊಲೀಸರು ಮಾರ್ಚ್ 1 ಮಂಗಳವಾರ ಭೇದಿಸಿದ್ದು, ದಂಧೆಯಲ್ಲಿ ತೊಡಗಿದ್ದ ಇಬ್ಬರು ಮಹಿಳೆಯರು ಸೇರಿದಂತೆ ಮೂವರನ್ನು ಬಂಧಿಸಿದ್ದರು.

ವಿಟ್ಲ ಪಡ್ನೂರಿನ ಕೆಪಿ ಹಮೀದ್ (54), ಆಕಾಶಭವನದ ಅನುಪಮಾ ಶೆಟ್ಟಿ (46), ಸುಬ್ರಹ್ಮಣ್ಯ ಕುಲ್ಕುಂದದ ನಿಶ್ಮಿತಾ (23) ಎಂಬುವರನ್ನು ಬಂಧಿಸಿ ಮಹಿಳೆಯರನ್ನು ರಕ್ಷಣೆ ಮಾಡಿದ್ದರು. ದೋರ್‌ವೆಲ್‌ನಲ್ಲಿರುವ ಪಿಇಇಬಿಐ ರೆಸಿಡೆನ್ಸಿಯಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು. ಇನ್ನು ಬೆಂಗಳೂರಿನ ಸ್ಪಾಗಳ ಮೇಲೆ ದಾಳಿ ನಡೆಸಿ ವಿದೇಶಿ ಮೂಲದವರಿಂದ ವೇಶ್ಯಾವಾಟಿಕೆ ನಡೆಸುತ್ತಿದ್ದ ಜಾಲ ಪತ್ತೆ ಮಾಡಲಾಗಿತ್ತು. 

Latest Videos
Follow Us:
Download App:
  • android
  • ios