ಥಾಯ್ಲೆಂಡ್‌ನಲ್ಲಿ ಸ್ಕೂಬಾ ಡೈವಿಂಗ್ ವೇಳೆ ಅವಘಡ, ಮಂಗಳೂರಿನ ಯುವ ಉದ್ಯಮಿ ಸಾವು!
ಮಂಗಳೂರಿನ 28 ವರ್ಷದ ಯುವ ಉದ್ಯಮಿ ಒಶಿನ್ ಪರೈರಾ ದುರಂತ ಅಂತ್ಯ ಕಂಡಿದ್ದಾರೆ. ಥಾಯ್ಲೆಂಡ್‌ನಲ್ಲಿ ಸ್ಕೂಬ್ ಡೈವಿಂಗ್ ಮಾಡುತ್ತಿದ್ದ ವೇಳೆ ಸಂಭವಿಸಿದ ಅವಘಡದಲ್ಲಿ ಒಶಿನ್ ಪರೈರಾ ಮೃತಪಟ್ಟಿದ್ದಾರೆ.
ಮಂಗಳೂರು(ಏ.13): ಬೇಕಿಂಗ್ ಕಂಪನಿ ಉದ್ಯಮದ ಮೂಲಕ ಮಂಗಳೂರಿನಲ್ಲಿ ಭಾರಿ ಸಂಚಲನ ಮೂಡಿಸಿದ ನವ ಉದ್ಯಮಿ 28ರ ಹರೆಯದ ಒಶಿನ್ ಪರೈರಾ ದುರಂತ ಅಂತ್ಯಕಂಡಿದ್ದಾರೆ. ಥಾಯ್ಲೆಂಡ್‌ನಲ್ಲಿ ಸ್ಕೂಬಾ ಡೈವಿಂಗ್ ವೇಳೆ ಒಶಿನ್ ಪರೈರಾ ಮೃತಪಟ್ಟಿದ್ದಾರೆ. ಮಂಗಳೂರಿನ ಗೋರಿಗುಡ್ಡೆ ನಿವಾಸಿಯಾಗಿರುವ ಒಶಿನ್ ಪರೈರಾ ರಜಾ ದಿನ ಸವಿ ಅನುಭವಿಸಲು ಇತ್ತೀಚೆಗೆ ಥಾಯ್ಲೆಂಡ್‌ಗೆ ತೆರಳಿದ್ದರು. ಥಾಯ್ಲೆಂಡ್‌ನಲ್ಲಿ ಅತ್ಯಂತ ಜನಪ್ರಿಯವಾಗಿರುವ ಸ್ಕೂಬ್ ಡೈವಿಂಗ್ ವೇಳೆ ನಡೆದ ಅವಘಡದಲ್ಲಿ ಒಶಿನ್ ಪೈರರಾ ನಿಧನರಾಗಿದ್ದಾರೆ.
ಒಲಿವಿಯಾ ಪರೈರಾ ಹಾಗೂ ದಿವಗಂತ ಆಸ್ಕರ್ ಮಾರ್ಟಿನ್ ಪರೈರಾ ದಂಪತಿಯ ಪುತ್ರಿ ಒಶಿನ್ ಪರೈರಾ ಇಂಗ್ಲೆಂಡ್‌ನಲ್ಲಿ ಪದವಿ ಮುಗಿಸಿದ್ದಾರೆ. ಬಳಿಕ ಮಂಗಳೂರಿಗೆ ಮರಳಿದ ಒಶಿನ್ ಪರೈರಾ, ಬೇಕಿಂಗ್ ಕಂಪನಿ ಆರಂಭಿಸಿದ್ದರು. ಪೋಷಕರು ಹೊಟೆಲ್ ಉದ್ಯಮದಲ್ಲಿ ಸಕ್ರಿಯರಾಗಿದ್ದ ಕಾರಣ ಅವರ ಅನುಭವ ಕೂಡ ಒಶಿನ್ ಪರೇರಾ ಬೇಕಿಂಗ್ ಕಂಪನಿಗೆ ನೆರವಾಯಿತು. ಹೀಗಾಗಿ ಅತ್ಯಲ್ಪ ಅವಧಿಯಲ್ಲಿ ಒಶಿನ್ ಪರೇರಾ ಮಂಗಳೂರಿನ ಯುವ ಉದ್ಯಮಿಯಾಗಿ ಬೆಳೆದಿದ್ದರು.
ಮಂಗಳೂರಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ
ಸೈಂಟ್ ಆಗ್ನೇಸ್ ಕಾಲೇಜು ಮರ್ಕರಾ ಟ್ರಂಕ್ ರೋಡ್ ಬಳಿ ಬೇಕಿಂಗ್ ಕಂಪನಿ ಆರಂಭಿಸಿದ ಒಶಿನ್ ಪರೈರಾ ಮಂಗಳೂರಿನಲ್ಲಿ ಭಾರಿ ಜನಪ್ರಿಯರಾಗಿದ್ದಾರೆ. 5 ವರ್ಷದ ಹಿಂದೆ ಆರಂಭಿಸಿದ ಬೇಕಿಂಗ್ ಕಂಪನಿ, ಮಂಗಳೂರಿನ ಪ್ರಮುಖ ರೆಸ್ಟೋರೆಂಟ್, ಹೊಟೆಲ್‌ಗಳಿಗೆ ಆಹಾರ ಉತ್ಪನ್ನಗಳನ್ನು ನೀಡುತ್ತಿದೆ. ಉದ್ಯಮ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ನಿರ್ಮಿಸಿದ್ದಾರೆ. ಉದ್ಯಮದಲ್ಲಿ ಯಶಸ್ಸು ಸಾಧಿಸಿದ ಒಶಿನ್ ಪರೈರಾ ರಜಾ ದಿನ ಕಳೆಯಲು ಥಾಯ್ಲೆಂಡ್‌ಗೆ ತೆರಳಿದ್ದರು. ಎಪ್ರಿಲ್ ಮೊದಲ ವಾರದಲ್ಲಿ ಥಾಯ್ಲೆಂಡ್‌ಗೆ ತೆರಳಿದ ಒಶಿನ್ ಪೈರಾರ, ಎಪ್ರಿಲ್ 11 ರಂದು ಸ್ಕೂಬಾ ಡೈವಿಂಗ್ ತೆರಳಿದ್ದಾರೆ.
ಸ್ಕೂಬ್ ಡೈವಿಂಗ್ ವೇಳೆ ನಡೆದ ಅವಘಡದಲ್ಲಿ ಒಶಿನ್ ಪರೈರಾ ಮೃತಪಟ್ಟಿದ್ದಾರೆ. ಮಾಹಿತಿ ತಿಳಿದ ಬೆನ್ನಲ್ಲೇ ಸಂಬಂಧಿಕರು ಥಾಯ್ಲೆಂಡ್‌ಗೆ ತೆರಳಿದ್ದಾರೆ. ಇದೀಗ ಕಾನೂನು ಪ್ರಕ್ರಿಯೆ ಮುಗಿಸಿ ಒಶಿನ್ ಪರೈರಾ ಮೃತದೇಹ ಭಾರತಕ್ಕೆ ತರಲು ಎಲ್ಲಾ ವ್ಯವಸ್ಥೆ ಮಾಡಲಾಗಿದೆ.
ದೈವ ನರ್ತನ ವೇಳೆ ಕುಸಿದು ಬಿದ್ದು ದೈವನರ್ತಕ ಸಾವು: ಕಡಬದಲ್ಲೊಂದು ಹೃದಯ ವಿದ್ರಾವಕ ಘಟನೆ
ಹುಟ್ಟಿ ಬೆಳೆದ ಊರಾದ ಮಂಗಳೂರಿನಲ್ಲಿ ಉದ್ಯಮ ಆರಂಭಿಸಿ, ಅತೀ ದೊಡ್ಡ ಉದ್ಯಮಿಯಾಗುವ ಕನಸು ಕಂಡಿದ್ದರು. ಇದರಂತೆ ಇಂಗ್ಲೆಂಡ್‌ನಲ್ಲಿ ಪದವಿ ಪಡೆದು ಅಲ್ಲೇ ಅತ್ಯುತ್ತಮ ಕೆಲಸ ಗಿಟ್ಟಿಸಿಕೊಂಡಿದ್ದರು. ಭಾರತಕ್ಕೆ ಮರಳಿದ ಒಶಿನ್ ಪರೈರಾ, ಬೇಕಿಂಗ್ ಕಂಪನಿ ಆರಂಭಿಸಿ ಯಶಸ್ಸು ಕಂಡಿದ್ದರು. ಕೇವಲ 5 ವರ್ಷದಲ್ಲಿ ಇತರ ನಗರದಲ್ಲಿ ಶಾಖೆಗಳನ್ನು ಆರಂಭಿಸುವ ಪ್ರಯತ್ನಕ್ಕೂ ಕೈಹಾಕಿದ್ದರು. ಇದರ ನಡುವೆ ದುರಂತ ಅಂತ್ಯಕಂಡಿದ್ದಾರೆ. ತಾಯಿ ಒಲಿವಿಯಾ ಪರೈರಾ ಆಕ್ರಂದನ ಮುಗಿಲು ಮುಟ್ಟಿದೆ.