ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕಂಬಂಧಳ್ಳಿ ಆಂಜನೇಯ ಬೆಟ್ಟದಲ್ಲಿ ನಾಡ ಬಾಂಬ್ ಸ್ಫೋಟಗೊಂಡು ಇಬ್ಬರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾಡುಹಂದಿ ಬೇಟೆಗೆ ಬಾಂಬ್ ಇಟ್ಟಿರುವ ಶಂಕೆ ವ್ಯಕ್ತವಾಗಿದೆ.

ಮಂಡ್ಯ (ಫೆ.23): ನಾಡ ಬಾಂಬ್ ಸ್ಫೋಟಗೊಂದು ಇಬ್ಬರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಡ್ಯ ಜಿಲ್ಲೆಯ, ನಾಗಮಂಗಲ ತಾಲೂಕಿನ ಕಂಬಂಧಳ್ಳಿ ಆಂಜನೇಯ ಬೆಟ್ಟದಲ್ಲಿ ನಡೆದಿದೆ.

ಹರಿಯಂತ್ ಪಾಟೀಲ್ ಹಾಗೂ ಪಾರ್ಥ ಸ್ಫೋಟದಲ್ಲಿ ಪ್ರಾಣಾಪಾಯದಿಂದ ಪಾರಾದ ಮಕ್ಕಳು. ಸ್ಫೋಟದ ತೀವ್ರತೆಗೆ ಒಬ್ಬ ವಿದ್ಯಾರ್ಥಿ ಅಂಗೈ ಛಿದ್ರಗೊಂಡಿದೆ, ಇನ್ನೋರ್ವ ವಿದ್ಯಾರ್ಥಿ ಮುಖಕ್ಕೆ ಗಾಯವಾಗಿದೆ. ಕಾಡುಹಂದಿ ಬೇಟೆಗೆ ಬಾಂಬ್ ಇಟ್ಟಿರುವ ಶಂಕೆ ಸದ್ಯ ಗಾಯಾಳು ಮಕ್ಕಳನ್ನು ಬೆಳ್ಳೂರಿನ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: ರಾಮನಗರ: ಕನಕಪುರದಲ್ಲಿ ನಾಡಬಾಂಬ್ ಸ್ಫೋಟ, ವ್ಯಕ್ತಿಯ ಕೈ ಛಿದ್ರ ಛಿದ್ರ..!

ಸ್ಫೋಟ ಸಂಭವಿಸಿದ್ದು ಹೇಗೆ?

ಗಾಯಾಗೊಂಡಿರುವ ಹರಿಯಂತ್ ಪಾಟೀಲ್ ಹಾಗೂ ಪಾರ್ಥ ಇಬ್ಬರೂ ಜೈನ ಬಸದಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳು. ಇಂದು ಆಂಜನೇಯ ಬೆಟ್ಟದ ದೇವಸ್ಥಾನದ ಸುತ್ತಮುತ್ತಲಿನ ಸ್ವಚ್ಚತಾ ಕಾರ್ಯಕ್ಕೆ ತೆರಳಿದ್ದರು. ಸ್ವಚ್ಛಗೊಳಿಸಲು ಕಸದ ರಾಶಿಗೆ ಕೈಹಾಕುತ್ತಿದ್ದಂತೆ ಸ್ಫೋಟಗೊಂಡಿದೆ. ಸ್ಟೋಟದ ತೀವ್ರತೆಗೆ ವಿದ್ಯಾರ್ಥಿಯೋರ್ವನ ಅಂಗೈ ಛಿದ್ರಗೊಂಡಿದೆ. ಅದೃಷ್ಟವಶಾತ್ ಪ್ರಾಣಾಹಾನಿ ಸಂಭವಿಸಿಲ್ಲ.

ಕಿಡಿಗೇಡಿಗಳ ಕೃತ್ಯ:

ಕಾಡುಹಂದಿಗೆ ಬೇಟೆಗೆ ನಾಡ ಬಾಂಬ್‌ಗಳನ್ನು ಎಲ್ಲೆಂದರಲ್ಲೇ ಇಡುವುದು ಆತಂಕ ಮೂಡಿಸುವಂತಾಗಿದೆ. ಈ ಹಿಂದೆ ಸರ್ಕಾರಿ ಶಾಲೆಯೊಂದರ ಬಳಿ ಜೀವಂತ ಬಾಂಬ್ ಪತ್ತೆಯಾಗಿದ್ದವು. ಇದೀಗ ಅಂಥದ್ದೇ ಪ್ರಕರಣ ಮತ್ತೆ ಮರುಕಳಿಸಿದೆ. ಕಿಡಿಗೇಡಿಗಳ ಕೃತ್ಯಕ್ಕೆ ಅಮಾಯಕ ಮಕ್ಕಳು ನರಳುವಂತಾಗಿದೆ.