Asianet Suvarna News Asianet Suvarna News

Mandya: ಟಾರ್ಗೆಟ್ ಮಾಡಿದ್ದು ತಮ್ಮನನ್ನ ಹಂತಕರ ಕೈಯಲ್ಲಿ ತಗಲಾಕಿ ಪ್ರಾಣ ಬಿಟ್ಟಿದ್ದು ಅಣ್ಣ!

ಸಕ್ಕರೆ ನಾಡು ಮಂಡ್ಯದಲ್ಲೊಂದು ಭಯಾನಕ ಕೊಲೆ ನಡೆದಿದೆ.  ತಮ್ಮನ ಮೇಲಿನ ಸೇಡಿಗೆ ಅಣ್ಣನನ್ನ ಕಿಡ್ಯ್ನಾಪ್ ಮಾಡಿ ಮರ್ಡರ್ ಮಾಡಲಾಗಿದೆ.

Mandya Case Of Missing Man Solved and Found Murdered four  Arrested Kannada news gow
Author
First Published Jun 5, 2023, 12:49 PM IST

ಮಂಡ್ಯ (ಜೂ.5): ಟಾರ್ಗೆಟ್ ಮಾಡಿದ್ದು ತಮ್ಮನನ್ನ ಹಂತಕರ ಕೈಯಲ್ಲಿ ತಗಲಾಕಿ ಕೊಂಡಿದ್ದು ಅಣ್ಣ. ಸಕ್ಕರೆ ನಾಡು ಮಂಡ್ಯದಲ್ಲೊಂದು ಭಯಾನಕ ಕೊಲೆ ನಡೆದಿದೆ.  ತಮ್ಮನ ಮೇಲಿನ ಸೇಡಿಗೆ ಅಣ್ಣನನ್ನ ಕಿಡ್ಯ್ನಾಪ್ ಮಾಡಿ ಮರ್ಡರ್ ಮಾಡಲಾಗಿದೆ. ಪೊಲೀಸರ ಸೋಗಿನಲ್ಲಿ ಮನೆಗೆ ನುಗ್ಗಿ ವೆಂಕಟೇಶ್ ಎಂಬಾತನನ್ನು ಕಿಡ್ನ್ಯಾಪ್ ಮಾಡಿದ ಪಾಪಿಗಳು ಬಳಿಕ ಕೊಲೆಗೈದು ಸುಟ್ಟು ಹಾಕಿದ್ದಾರೆ. ಮಂಡ್ಯದ ಸಾತನೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹಣ ಕಾಸಿನ ವಿಚಾರಕ್ಕೆ ವೆಂಕಟೇಶ್ ತಮ್ಮ ರಮೇಶ್ ಜೊತೆ ಗಲಾಟೆ ನಡೆದಿತ್ತು. ರಮೇಶ್ ಸ್ನೇಹಿತರಾದ ಭೀಮೇಶ್ ಹಾಗೂ ವಿನಯ್ ಎಂಬುವವರು ಗಲಾಟೆ ನಡೆಸಿದ್ದರು. ಭೀಮೇಶ್ ಮತ್ತು 6 ಮಂದಿಯಿದ್ದ ಅವನ ಸಹಚರರು ಬೆಂಗಳೂರು ಪೊಲೀಸರಂತೆ ಪೋಸ್ ಕೊಟ್ಟು ಮೇ 23 ರಂದು ತಡರಾತ್ರಿ ಬಂದು ಮನೆಯಲ್ಲಿ ತಮ್ಮ ರಮೇಶ್ ಇಲ್ಲದ ಕಾರಣ ಅಣ್ಣ ವೆಂಕಟೇಶ್ ನನ್ನು ಅಪಹರಿಸಿದ್ದಾರೆ. ವೆಂಕಟೇಶ್ ನನ್ನ ಅಪಹರಿಸಿ ಹತ್ಯೆಗೈದು ಬಳಿಕ ಈರೇಗೌಡನ ಕೊಪ್ಪಲು ಅರಣ್ಯಪ್ರದೇಶದಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.

ಮೇ 23 ರಂದು ಅನುಮಾನಗೊಂಡ ವೆಂಕಟೇಶ್ ಅವರ ತಾಯಿ ಮಂಡ್ಯ ಗ್ರಾಮಾಂತರ ಠಾಣೆಗೆ ಭೇಟಿ ನೀಡಿ ನಾಪತ್ತೆ ದೂರು ದಾಖಲಿಸಿದ್ದರು. ತನಿಖೆಯ ಸಂದರ್ಭದಲ್ಲಿ, ವೆಂಕಟೇಶ್ ಅವರ ತಾಯಿ ಭೀಮೇಶ್ ಮತ್ತು ಅವರ ಕಿರಿಯ ಮಗ ರಮೇಶ್ ಅವರ ನಡುವಿನ ವೈಮನಸ್ಸು ಅನ್ನು   ಪೊಲೀಸ್ ತಂಡಕ್ಕೆ ಮಾಹಿತಿ ನೀಡಿದರು. ಮಾಹಿತಿ ಆಧರಿಸಿ ಪೊಲೀಸರು ಭೀಮೇಶ್ ಮತ್ತು ಇತರ ಮೂವರು ಆರೋಪಿಗಳನ್ನು ಮಂಡ್ಯದಿಂದ ವಶಕ್ಕೆ ಪಡೆದಿದ್ದಾರೆ.

Mysuru: ಹಿಂದೂ ಯುವಕ ಬರ್ತಡೇ ಆಚರಿಸಿದ್ದನ್ನು ವಿರೋಧಿಸಿ 5 ಜನ ಅನ್ಯಕೋಮಿನ ಯುವಕರಿಂದ ಚಾಕು ಇರಿತ

ಮಂಡ್ಯ ಗ್ರಾಮಾಂತರ ಠಾಣಾ ಪೊಲೀಸರಿಗೆ ಅಪಹರಣದ ಕುರಿತು ದೂರು ದಾಖಲಾಗಿದ್ದು, ಮಿಸ್ಸಿಂಗ್ ಕೇಸ್ ದಾಖಲು ಮಾಡಿ ಕೊಂಡಿದ್ದ ಪೊಲೀಸರ ವಿರುದ್ಧ ನಿರ್ಲಕ್ಷ್ಯ ಆರೋಪ ಕೂಡ ಕೇಳಿಬಂದಿದೆ. ಪ್ರಕರಣ ನಡೆದು 13 ದಿನಗಳ ಬಳಿಕ ಕೊಲೆ ಪ್ರಕರಣ  ಬೆಳಕಿಗೆ ಬಂದಿದೆ. ಮಂಡ್ಯ ಗ್ರಾಮಾಂತರ ಪೊಲೀಸರಿಂದ ನಾಲ್ವರು ಕೊಲೆ ಪಾತಕಿಗಳ ಬಂಧನವಾಗಿದೆ.

ಆರೋಪಿಗಳನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸೇಡು ತೀರಿಸಿಕೊಳ್ಳಲು ವೆಂಕಟೇಶ್‌ನನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

BENGALURU: ಅನೈತಿಕ ಸಂಬಂಧ ಶಂಕೆ, ಗಂಡನಿಂದಲೇ ಹೆಂಡತಿಯ ಬರ್ಬರ ಕೊಲೆ, ಅನಾಥವಾದ ಮಕ್ಕಳು!

ಈ ಹಿಂದೆ ಹಣಕಾಸು ಸಮಸ್ಯೆ ಬಗೆಹರಿಸಲು ರಮೇಶ್  ಭೀಮೇಶ್‌ ನನ್ನು ಬೆಂಗಳೂರಿಗೆ ಕೆರೆಸಿಕೊಂಡಿದ್ದ, ತನ್ನನ್ನು ಸ್ಥಳಕ್ಕೆ ಆಗಮಿಸಿದಾಗ ರಮೇಶ್ ತನ್ನ ಸಹಚರರೊಂದಿಗೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿ ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಭೀಮೇಶ್  ದೂರು ದಾಖಲಿಸಿದ್ದನು. ಈ ಘಟನೆಯಲ್ಲಿ ಬೆಂಗಳೂರು ಪೊಲೀಸರಿಂದ ಬಂಧನವಾಗಿದ್ದ ರಮೇಶ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿನಲ್ಲಿಡಲಾಗಿತ್ತು. ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದನು.

ರಮೇಶ್ ಬಿಡುಗಡೆಯ ಬಗ್ಗೆ ಮಾಹಿತಿ ತಿಳಿದ ಭೀಮೇಶ್ ಮತ್ತು ಅವನ ಸಹಚರರು ರಮೇಶ್‌ನನ್ನು ಹೊಡೆದುಹಾಕಲು ಯೋಜನೆ ರೂಪಿಸಿದ್ದರು. ಮನೆಯಲ್ಲಿ ರಮೇಶ್ ಇಲ್ಲದ ಕಾರಣ ಅಣ್ಣ ವೆಂಕಟೇಶ್ ಅವರನ್ನು ಗ್ಯಾಂಗ್ ಎತ್ತಿಕೊಂಡು ಹೋಗಿದೆ. ವೆಂಕಟೇಶ್ ಹತ್ಯೆಯ ನಂತರ ಭೀಮೇಶ್ ಮತ್ತು ಆತನ ಸಹಚರರು ಮಂಡ್ಯಕ್ಕೆ ಹಿಂದಿರುಗುವ ಮೊದಲು ಆಧ್ಯಾತ್ಮಿಕ ಸ್ಥಳಗಳಿಗೆ ಭೇಟಿ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Follow Us:
Download App:
  • android
  • ios