Asianet Suvarna News Asianet Suvarna News

Bengaluru: ಅನೈತಿಕ ಸಂಬಂಧ ಶಂಕೆ, ಗಂಡನಿಂದಲೇ ಹೆಂಡತಿಯ ಬರ್ಬರ ಕೊಲೆ, ಅನಾಥವಾದ ಮಕ್ಕಳು!

ಬೆಂಗಳೂರಿನ ಬಸವೇಶ್ವರ ನಗರದ ಮಂಜುನಾಥನಗರದಲ್ಲಿ  ಗಂಡನಿಂದಲೇ ಹೆಂಡತಿಯ ಬರ್ಬರ ಕೊಲೆ ನಡೆದಿದೆ. ಅನೈತಿಕ ಸಂಬಂಧ ಕೊಲೆಗೆ ಕಾರಣ ಎಂದು ಹೇಳಲಾಗುತ್ತಿದೆ.

Husband killed wife in bengaluru basaveshwara nagar Kannada news gow
Author
First Published Jun 5, 2023, 11:50 AM IST

ಬೆಂಗಳೂರು (ಜೂ.5): ಬೆಂಗಳೂರಿನ ಬಸವೇಶ್ವರ ನಗರದ ಮಂಜುನಾಥನಗರದಲ್ಲಿ ಮಹಿಳೆಯ ಬರ್ಬರ ಕೊಲೆ ನಡೆದಿದೆ. ಗಂಡನಿಂದಲೇ ಹೆಂಡತಿಯ ಬರ್ಬರ ಕೊಲೆ ನಡೆದಿದ್ದು, ನಾಗರತ್ನ (32) ಕೊಲೆಯಾದ ಮಹಿಳೆ ಯಾಗಿದ್ದಾಳೆ. ಈಕೆಯ ಗಂಡ ಅಯ್ಯಪ್ಪ ಚಾಕುವಿನಿಂದ ಮನಸೋ ಇಚ್ಚೆ ಹಲ್ಲೆ ನಡೆಸಿ ಕೊಲೆ ನಡೆಸಿದ್ದಾನೆ. ಅನೈತಿಕ ಸಂಬಂಧದ ಅನುಮಾನದ ಹಿನ್ನೆಲೆ ಈ ಕೊಲೆ ನಡೆದಿರೋ ಶಂಕೆ ವ್ಯಕ್ತವಾಗಿದೆ.

ಅಪ್ಪ ಅಮ್ಮ‌ ಇಲ್ಲದೆ ಅನಾಥಾಶ್ರಮದಲ್ಲಿದ್ದ ನಾಗರತ್ನಳನ್ನು 12 ವರ್ಷಗಳ ಹಿಂದೆ ಅಯ್ಯಪ್ಪ ಮದುವೆಯಾಗಿದ್ದ, ದಂಪತಿಗೆ 11 ವರ್ಷದ ಮಗ ಹಾಗೂ 7 ವರ್ಷದ ಮಗಳು ಇದ್ದಳು. ಅಯ್ಯಪ್ಪ ತನ್ನ ಅಕ್ಕನ ಮನೆಯಲ್ಲಿ ಮಕ್ಕಳನ್ನು ಬಿಟ್ಟಿದ್ದನು. ಇತ್ತೀಚೆಗೆ ಹೆಂಡತಿ ಮೇಲೆ ಅಯ್ಯಪ್ಪ ಅನುಮಾನ ಪಡುತ್ತಾ ಇದ್ದನು. ಕಳೆದ ಮೂರು ದಿನಗಳಿಂದ ದಂಪತಿ ಮಧ್ಯೆ ಗಲಾಟೆ ನಡೀತಾ ಇತ್ತು. 

Bengaluru: ಪತಿ ಕಣ್ಣೆದುರೇ ಪತ್ನಿಯನ್ನು ಬಲಿ ತೆಗೆದುಕೊಂಡ ಕೆಎಸ್‌ಆರ್‌ಟಿಸಿ ಬಸ್!

ಇದಕ್ಕೆ ಪುಷ್ಟಿ ನೀಡುವಂತೆ ಕೊಲೆಯಾದ ಮಹಿಳೆ ನಾಗರತ್ನ ಜೊತೆ ಆ ದಿನ ಓರ್ವ ವ್ಯಕ್ತಿ ಇದ್ದ. ಅಯ್ಯಪ್ಪ ಅಕ್ಕನ ಮಗ ಚಂದ್ರು ಜೊತೆ ನಾಗರತ್ನ ಮನೆಯಲ್ಲಿದ್ದಳು. ಶನಿವಾರ ರಾತ್ರಿ  ಗಂಡ ಮನೆಗೆ ಬಂದಾಗ ಚಂದ್ರು ಮನೆಯಲ್ಲಿ ಮಲಗಿದ್ದ. ಚಂದ್ರುಗೆ ಮದುವೆಯಾಗಿ ಸಂಸಾರವಿದೆ. ಹೀಗಿದ್ದರೂ ತನ್ನ ಮನೆಯಲ್ಲಿ ಮಲಗಿದ್ದಾನೆ. ಯಾಕೆ ಬಂದಿದ್ದಾನೆ ಎಂದು ಅಯ್ಯಪ್ಪ ಗಲಾಟೆ ತೆಗೆದಿದ್ದ. ಚಂದ್ರು ಬಳಿಯಿದ್ದ ಮೊಬೈಲ್ ಕಿತ್ತುಕೊಂಡು ಗಲಾಟೆ ಮಾಡಿದ್ದ, ಬಳಿಕ ಚಂದ್ರು ನಾಪತ್ತೆಯಾಗಿದ್ದಾನೆ. ಸದ್ಯ ಚಂದ್ರು ಕುಟುಂಬದಲ್ಲಿ ಆತಂಕ ಶುರುವಾಗಿದೆ. ಸದ್ಯ ಚಂದ್ರು ನಾಪತ್ತೆ, ಮೊಬೈಲ್ ಸ್ವಿಚ್ ಆಫ್ ಹಿಂದೆ ಮತ್ತಷ್ಟು ಅನುಮಾನ ವ್ಯಕ್ತವಾಗಿದೆ.

MYSURU: ಹಿಂದೂ ಯುವಕ ಬರ್ತಡೇ ಆಚರಿಸಿದ್ದನ್ನು ವಿರೋಧಿಸಿ 5 ಜನರಿಂದ ಚಾಕು ಇರಿತ!

ಸದ್ಯ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,  ಪೊಲೀಸರಿಂದ ಘಟನಾ ಸ್ಥಳದ ಪರಿಶೀಲನೆ ನಡೆದಿದೆ. ಕೊಲೆ ಆರೋಪಿ ಅಯ್ಯಪ್ಪನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಅಯ್ಯಪ್ಪ- ನಾಗರತ್ನ ಅವರ ಮಕ್ಕಳೀಗ ಅನಾಥರಾಗಿದ್ದಾರೆ.

Follow Us:
Download App:
  • android
  • ios