Honey Trap ಬಲೆಗೆ ಮಂಡ್ಯದ ಉದ್ಯಮಿ : ಚಿನ್ನದ ಅಂಗಡಿ ಮಾಲೀಕನ ಬಳಿ 50ಲಕ್ಷ ಪೀಕಿದ ಗ್ಯಾಂಗ್!

ಜಿಲ್ಲೆಯಲ್ಲಿ ಖತರ್ನಾಕ್ ಹನಿಟ್ರ್ಯಾಪ್ ಗ್ಯಾಂಗ್ ಒಂದು ಸಕ್ರಿಯವಾಗಿದೆ.. ಪ್ರತಿಷ್ಠಿತ ಉದ್ಯಮಿಗಳು ರಾಜಕಾರಣಿಗಳನ್ನೇ ಟಾರ್ಗೆಟ್ ಮಾಡ್ತಿದ್ದಾರೆ ಹುಷಾರ್!

Mandya businessman in Honey Trap: Gang  50 lakhs by  gold shop owner

ವರದಿ : ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಡ್ಯ.

ಮಂಡ್ಯ (ಆ.22) : ಜಿಲ್ಲೆಯಲ್ಲಿ ಖತರ್ನಾಕ್ ಹನಿಟ್ರ್ಯಾಪ್ ಗ್ಯಾಂಗ್ ಒಂದು ಸಕ್ರಿಯವಾಗಿದೆ.. ಪ್ರತಿಷ್ಠಿತ ಉದ್ಯಮಿಗಳು(businessman), ರಾಜಕಾರಣಿ(Polician)ಗಳನ್ನೇ ಟಾರ್ಗೆಟ್ ಮಾಡ್ತಿದ್ದಾರೆ ಎನ್ನಲಾಗಿದೆ. ಮಂಡ್ಯದ ಪ್ರಖ್ಯಾತ ಚಿನ್ನದ ಅಂಗಡಿ ಮಾಲೀಕ ಜಗನ್ನಾಥ ಶೆಟ್ಟಿ(Jaganath Shetty) ಹನಿಟ್ರ್ಯಾಪ್ ಸುಳಿಗೆ ಸಿಲುಕಿ, 50 ಲಕ್ಷ ಕಳೆದುಕೊಂಡ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಪ್ರತಿಭಟನೆ, ಹೋರಾಟದ ಹೆಸರಲ್ಲಿ ಸಭ್ಯಳಂತೆ ಬಿಲ್ಡಪ್ ಕೊಡ್ತಿದ್ದ ಸಲ್ಮಾ ಭಾನು(Salma bhanu) ಜಗನ್ನಾಥ ಶೆಟ್ಟಿಗೆ ಬಲೆ ಹೆಣೆದು ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ.

ಘಜ್ವಾ-ಇ-ಹಿಂದ್ ತನಿಖೆಯಲ್ಲಿ ತೊಡಗಿರುವ ಅಧಿಕಾರಿಗೆ ಪಾಕ್ ಮಹಿಳೆಯಿಂದ ಹನಿ ಟ್ರ್ಯಾಪ್ ಯತ್ನ‌

6 ತಿಂಗಳ ಬಳಿಕ ದೂರು : ಮೈಸೂರಿನ ಲಾಡ್ಜ್‌ನಲ್ಲಿ ಉದ್ಯಮಿಗೆ ಬಲೆ

ಕಳೆದ ಫೆ.26 ರಂದು ನಡೆದ ಘಟನೆ ಸಂಬಂಧ ಈಗ ಜಗನ್ನಾಥ ಶೆಟ್ಟಿ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅವರ ದೂರಿನ ಪ್ರಕಾರ ಫೆಬ್ರವರಿ 26 ರಂದು ಮಂಗಳೂರಿಗೆ ಹೊರಡಲು ಮಂಡ್ಯದ ಬಸ್‌ ಸ್ಟ್ಯಾಂಡ್‌ನಲ್ಲಿ ಜಗನ್ನಾಥ ಶೆಟ್ಟಿ ಕಾದು ನಿಂತಿದ್ದರು. ರಾತ್ರಿ 8 ಗಂಟೆ ಸಮಯದಲ್ಲಿ ಅಲ್ಲಿಗೆ ಕಾರಿನಲ್ಲಿ ಬಂದ ಸಲ್ಮಾ ಭಾನು ನೀವು ಶ್ರೀನಿಧಿ ಜ್ಯುವೆಲರಿಸ್ ಮಾಲೀಕರಲ್ವಾ ಅಂತ ಮಾತನಾಡಿಸಿದ್ದಾಳೆ. ಮಾತು ಮುಂದುವರಿದು ಬನ್ನಿ ನಾವು ಮೈಸೂರಿಗೆ ಹೊರಟಿದ್ದೇವೆ ಅಲ್ಲಿಗೆ ಡ್ರಾಪ್ ಮಾಡ್ತೀವಿ ಎಂದು ಕಾರು ಹತ್ತಿಸಿ ಕೊಂಡಿದ್ದಾಳೆ. ಪ್ರಯಾಣದ ವೇಳೆ ಆತ್ಮೀಯವಾಗಿ ಮಾತನಾಡಿಸಿ ಜಗನ್ನಾಥ ಶೆಟ್ಟಿ ಸ್ನೇಹ ಸಂಪಾದಿಸಿದ ಸಲ್ಮಾ, ಸ್ನೇಹಿತರ ಬಳಿ ಗೋಲ್ಡ್ ಪರ್ಚೇಸ್ ಮಾಡ್ತಿದೀವಿ. ಹೇಗಿದ್ರು ನೀವು ಚಿನ್ನದ ವ್ಯಾಪಾರಿ ಒಮ್ಮೆ ಬಂದು ಪರಿಶೀಲಿಸಿ ಕೊಡಿ ಎಂದಿದ್ದಾಳೆ. ಅವಳ ಮಾತು ನಂಬಿ ಹೋದ ಶೆಟ್ಟಿಯನ್ನು ಮೈಸೂರಿನ ದರ್ಶನ್ ಪ್ಯಾಲೇಸ್ ಲಾಡ್ಜ್ ರೂಂ ಒಂದಕ್ಕೆ ಕರೆದು ಕೊಂಡು ಹೋಗಿದ್ದಾರೆ. ರೂಮ್‌ಗೆ ಹೋಗುತ್ತಿದ್ದಂತೆ ಏಕಾ ಏಕಿ ಲಾಕ್ ಮಾಡಿದ್ದಾರೆ. ಮೊದಲೇ ಅಲ್ಲಿಗೆ ಹುಡುಗಿಯನ್ನು ಕಳುಹಿಸಿದ್ದ ಸಲ್ಮಾ ಭಾನು ಇಬ್ಬರ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಬಳಿಕ ವಿಡಿಯೋ ಇಟ್ಟುಕೊಂಡು 4 ಕೋಟಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದರಂತೆ. ಬ್ಲಾಕ್ ಮೇಲ್‌‌ಗೆ ಹೆದರಿ 3 ಕಂತುಗಳಲ್ಲಿ 50 ಲಕ್ಷ ಹಣ ಕೊಟ್ಟು ಜಗನ್ನಾಥ ಶೆಟ್ಟಿ ಸುಮ್ಮನಾಗಿದ್ರು, ಆದ್ರೆ ಪದೇ ಪದೇ ಹಣಕ್ಕಾಗಿ ಡಿಮ್ಯಾಂಡ್ ಮಾಡಿದ ಹಿನ್ನೆಲೆ ಈಗ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Bengaluru: ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾದ ಸುಂದರಿಯಿಂದ ಹನಿಟ್ರ್ಯಾಪ್!

ಹೋರಾಟಗಾರ್ತಿ ಮುಖವಾಡ ಧರಿಸಿ ಹನಿಟ್ರ್ಯಾಪ್:

ಆರೋಪಿ ಸಲ್ಮಾ ಭಾನು ಮಂಡ್ಯ ನಗರದ ನಿವಾಸಿ. ಹೋರಾಟಗಾರ್ತಿಯ ಮುಖವಾಡ ಧರಿಸಿದ್ದ ಈಕೆ ಜನಪರ ವೇದಿಕೆ ಸಂಘಟನೆಯ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಗುರುತಿಸಿಕೊಂಡವಳು. ಸದಾ ಒಂದಲ್ಲ ಒಂದು ವಿಚಾರವನ್ನಿಟ್ಟುಕೊಂಡು ಹೋರಾಟ, ಪ್ರತಿಭಟನೆಗಳಲ್ಲಿ ಭಾಗಿಯಾಗುತ್ತಿದ್ದಳು. ಸಮಾಜ ಉದ್ದಾರ ಮಾಡ್ತೀವಿ ಅಂತ ಉದ್ದುದ್ದ ಭಾಷಣ ಬಿಗಿಯುತ್ತಿದ್ದ ಈಕೆ ಯಾವ ನಟಿಗೂ ಕಡಿಮೆ ಇಲ್ಲದ ಹಾಗೇ ಮೇಕಪ್ ಹಾಕಿಕೊಂಡು ಸದಾ ರೀಲ್ಸ್ ಮಾಡುತ್ತ ಶೋಕಿ ಮಾಡಿದ್ದೆ ಹೆಚ್ಚು. ಇದೀಗ ಈಕೆಯ ನಿಜ ಬಣ್ಣ ಬಯಲಾಗಿದೆ. ಚಿನ್ನದ ಅಂಗಡಿ ಮಾಲೀಕ ಜಗನ್ನಾಥ ಶೆಟ್ಟಿಯನ್ನು ಹನಿಟ್ರ್ಯಾಪ್‌ಗೆ ಸಿಲುಕಿಸಿ ಪೊಲೀಸರ ಅತಿಥಿಯಾಗಿದ್ದಾಳೆ. ಮಂಡ್ಯ ಪಶ್ಚಿಮ ಠಾಣೆ ಪೊಲೀಸರು ಪ್ರಕರಣ ಸಂಬಂಧ ಐಪಿಸಿ 342, 363, 365A, 368, 384, 385 ಹಾಗೂ 420 ಅಡಿ ಪ್ರಕರಣ ದಾಖಲಿಸಿಕೊಂಡು ಇವಳ ಗ್ಯಾಂಗ್‌ನಲ್ಲಿರುವ ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.

Latest Videos
Follow Us:
Download App:
  • android
  • ios