*  ಚಡ್ಡಿ ಕದ್ದವನ ಮುಖಕ್ಕೆ ಪಂಚ್‌ ಮೇಲೆ ಪಂಚ್ *  ಸಿಂಗಂ ಸ್ಟೈಲ್‌ನಲ್ಲಿ ಪಾಠ ಕಲಿಸಿದ ಅಂಗಡಿಯವ*  ಕ್ಷಮೆ ಕೇಳಿ ಕಾಲ್ಕಿತ್ತ ಆಸಾಮಿ 

ವರದಿ: ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್, ವಿಜಯಪುರ

ವಿಜಯಪುರ(ಮೇ.28): ಅಂಗಡಿಗಳಿಗೆ ಸಾಮಾನು ಖರೀದಿಗೆ ಬಂದವರಂತೆ ನಾಟಕವಾಡಿ ಕದಿಯುವವರ ಸಂಖ್ಯೆ ಹೆಚ್ಚಾಗಿದೆ. ಕಳ್ಳರು ಗ್ರಾಹಕರ ವೇಷ ಧರಿಸಿ ಬಂದು ಕದಿಯಲು ಹೋಗಿ ಸಿಕ್ಕಿಬಿದ್ದ ಅದೇಷ್ಟೋ ಪ್ರಕರಣಗಳು ಕಣ್ಮುಂದೆಯೇ ಇವೆ. ಆದ್ರೆ ಗುಮ್ಮಟನಗರಿ ವಿಜಯಪುರದಲ್ಲಿ ನಿಕ್ಕರ್‌ ಕದ್ದು ಆಸಾಮಿಯೊಬ್ಬ ಸಿಕ್ಕಿಬಿದ್ದಿದ್ದಾನೆ. ಸಿಸಿಟಿವಿಯಲ್ಲಿ ದೃಶ್ಯಗಳು ಸೆರೆಯಾಗಿವೆ. 

ನಿಕ್ಕರ್‌ ಕದ್ದು ಸಿಕ್ಕಿಬಿದ್ದ ಆಸಾಮಿ

ಅಷ್ಟಕ್ಕು ಈ ಘಟನೆ ನಡೆದಿರೋದು ನಗರದ ಲಾಲ್‌ ಬಹದ್ದೂರ್‌ ಶಾಸ್ತ್ರೀ ಮಾರುಕಟ್ಟೆಯಲ್ಲಿ. ಎಲ್‌ ಬಿ ಎಸ್‌ ಮಾರ್ಕೆಟ್‌ ಅಂದ್ರೆ ಸದಾ ಗಿಜಿಗಿಜಿ ಅನ್ನೋ ಮಾರ್ಕೆಟ್.‌ ವಿಜಯಪುರ ಜಿಲ್ಲೆಯ ಮೂಲೆ ಮೂಲೆಗಳಿಂದ ಗ್ರಾಹಕರು ಖರೀದಿಗಾಗಿ ಬರ್ತಾರೆ. ಹೀಗೆ ಅನಾಮದೇಯ ವ್ಯಕ್ತಿಯೊಬ್ಬ ಬಟ್ಟೆ ಖರೀದಿಗೆ ಅಂಗಡಿಗೆ ಬಂದಿದ್ದಾನೆ. ಬಂದವನು ಸುಮ್ಮನಿರಲಾರದೆ ಇರುವೆ ಬಿಟ್ಟುಕೊಂಡಿದ್ದಾನೆ. ಅಂಗಡಿಯವನಿಗೆ ನಿಕ್ಕರ್‌ ತೋರಿಸಪ್ಪ ಅಂತಾ ಹೇಳಿದ್ದಾರೆ. ಹೊಸ ನಿಕ್ಕರ್‌ ಬಾಕ್ಸ್‌ ತರೋಕೆ ಆತ ಒಳಗೆ ಹೋಗ್ತಿದ್ದಂತೆ ಕೌಂಟರ್‌ ಒಳಗೆ ಕೈಹಾಕಿ ನಿಕ್ಕರ್‌ ನ ಒಂದು ಬಾಕ್ಸ್‌ ಕದ್ದು ಕಾಲ ಕೆಳಗೆ ಇಟ್ಟುಕೊಂಡಿದ್ದಾನೆ.

ಚಿಕ್ಕಮಗಳೂರು: ಪೋಲಿಸರನ್ನೇ ಯಾಮಾರಿಸಿ ಆಸ್ಪತ್ರೆಯಿಂದ ಎಸ್ಕೇಪ್ ವಿಚಾರಣಾಧೀನ ಖೈದಿ

ಸಂಶಯ ಬಂದು ಚೆಕ್‌ ಮಾಡಿದ ಅಂಗಡಿ ಮಾಲೀಕ

ನಿಕ್ಕರ್‌ ಬಾಕ್ಸ್‌ ಗಳನ್ನ ತರೋಕೆ ಒಳಗೆ ಹೋಗಿದ್ದವನಿಗೆ ಇಲ್ಲಿ ನಿಕ್ಕರ್‌ ಪ್ಯಾಕೇಟ್‌ ಒಂದು ಕಳ್ಳತನವಾಗಿದ್ದು ಆರಂಭದಲ್ಲಿ ಗಮನಕ್ಕೆ ಬಂದಿಲ್ಲ. ಆದ್ರೆ ಬಳಿಕ ಕೌಂಟರ್‌ ನಲ್ಲಿ ನೋಡಿದಾಗ ಒಂದು ನಿಕ್ಕರ್‌ ಪ್ಯಾಕೇಟ್‌ ಕಳ್ಳತನವಾಗಿದ್ದು ಗೊತ್ತಾಗಿದೆ. ಆ ಮೇಲೆ ನೋಡಿ ನಡೆದಿದ್ದೆ ಬೇರೆ..!

ಸಿಂಗಂ ಸ್ಟೈಲ್‌ ನಲ್ಲಿ ಮುಖಕ್ಕೆ ಪಂಚ್‌ ಕೊಟ್ಟ ಅಂಗಡಿಯವ

ಅಂಗಡಿಯಲ್ಲಿ ಒಂದು ನಿಕ್ಕರ್‌ ಕಾಣೆಯಾಗಿದ್ದು ಗೊತ್ತಾಗ್ತಿದ್ದಂತೆ ಅಂಗಡಿ ಮಾಲೀಕ ಸಂಶಯ ಬಂದು ಆಸಾಮಿ ನಿಂತಿದ್ದ ಜಾಗದಲ್ಲಿ ನೋಡಿದ್ದಾನೆ. ಅಲ್ಲಿ ಕಾಲ ಬಳಿ ನಿಕ್ಕರ್‌ ಪ್ಯಾಕೇಟ್‌ ಕದ್ದು ಇಟ್ಟುಕೊಂಡಿದ್ದು ಕಂಡು ಬಂದಿದೆ. ಆಗ ನೋಡಿ ಗರಂ ಆದ ಅಂಗಡಿ ಮಾಲೀಕ ಆಸಾಮಿ ಮೇಳೆ ಎಗರಿ ಬಿದ್ದಿದ್ದಾನೆ. ಸಿಂಗಂ ಸ್ಟೈಲ್‌ ನಲ್ಲಿ ಜಾಡಿಸೋಕೆ ಶುರು ಮಾಡಿದ್ದಾರೆ. ಮುಖಕ್ಕೆ ಪಂಚ್‌ ಕೊಟ್ಟು ಚಳಿ ಬಿಡಿಸಿದ್ದಾನೆ.

ಬಳಿಕ ಕ್ಷಮೆ ಕೇಳಿ ಕಾಲ್ಕಿತ್ತ ಆಸಾಮಿ

ಇನ್ನು ಅಂಗಡಿಯವ ಕಳ್ಳತನ ವಿಚಾರ ತಿಳಿದು ಸಿಂಗಂ ನಂತೆ ಎಗರೆಗರಿ ಪಂಚ್‌ ಬಿಡ್ತಿದ್ರೆ, ಕದ್ದ ಆಸಾಮಿ ಸುಸ್ತೋ ಸುಸ್ತು.. ಬಳಿಕ ಅಲ್ಲಿ ಅಂಗಡಿ ಮಾಲೀಕನಿಗೆ ಸಾರಿ ಕೇಳಿ.. ಸ್ಥಳದಿಂದ ಪಲಾಯನ ಮಾಡಿದ್ದಾನೆ. ಹೋದ್ರೆ ಹೋಗ್ಲಿ, ಒಂದು ನಿಕ್ಕರ್‌ ಕದ್ದಿದ್ದಕ್ಕೆ ಸಿಂಗಂ ಸ್ಟೈಲ್‌ ನಲ್ಲೆ ಪಾಠ ಕಲಿಸಿದ್ನಲ್ಲ ಅಂತ ಅಂಗಡಿಯವನು ಸುಮ್ಮನಾಗಿದ್ದಾನೆ. ಆದ್ರೆ ಆಸಾಮಿ ತನ್ನ ಹೆಸ್ರು, ಊರು ಹೇಳಿಲ್ಲ.. ಪಂಚ್‌ ಗಳಿಂದ ಪಾರಾದ್ರೆ ಸಾಕಪ್ಪ ಅಂತ ಕಾಲ್ಕಿತ್ತಿದ್ದಾನೆ..!