ಬೆಂಗಳೂರು ಕ್ರೈಂ: ಲವರ್ ಜತೆಗೆ ಜಾಲಿ ರೈಡ್ ಹೋಗಲು ಬೈಕ್ ಕದ್ದವ ಅರೆಸ್ಟ್
ಪ್ರೇಯಸಿಯರ ಜತೆ ಜಾಲಿ ರೈಡ್‌ಗೆ ಬೈಕ್ ಕಳವು ಮಾಡಿದ್ದ ಆರೋಪಿಯನ್ನು 10 ವರ್ಷಗಳ ಬಳಿಕ ಬಂಧಿಸಲಾಗಿದೆ. ಹಲಸೂರು ಗೇಟ್ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ.
ಬೆಂಗಳೂರು (ಡಿ.11); ಪ್ರೇಯಸಿಯರ ಜತೆಗೆ ಜಾಲಿ ರೈಡ್ ಹೋಗಲು ಬೈಕ್ ಕಳವು ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು 10 ವರ್ಷದ ಬಳಿಕ ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಟಿಪ್ಪು ನಗರ ನಿವಾಸಿ ಆಸೀಫ್(32) ಬಂಧಿತ. ಆರೋಪಿಯು 2014ನೇ ಸಾಲಿನಲ್ಲಿ ಬೈಕ್ ಕಳವು ಮಾಡಿದ್ದನು. ಈ ಸಂಬಂಧ ಹಲಸೂರು ಗೇಟ್ ಠಾಣೆಯಲ್ಲಿ ದೂರು ದಾಖಲಾಗಿತ್ತು, ಆದರೆ, ಆರೋಪಿಯು ಪೊಲೀಸರ ಕೈಗೆ ಸಿಕ್ಕಿರಲಿಲ್ಲ.
ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೀರ್ಘಕಾಲದಿಂದ ಪತ್ತೆಯಾಗದ ಪ್ರಕರಣಗಳ ಆರೋಪಿಗಳ ಬಂಧನಕ್ಕೆ ರಚಿಸಲಾಗಿದ್ದ ಪೊಲೀಸರ ವಿಶೇಷ ತಂಡ ಆರೋಪಿಗಾಗಿ ಹುಡುಕಾಟದಲ್ಲಿ ತೊಡಗಿದ್ದರು. ಈ ನಡುವೆ ಮದುವೆಯಾಗಿದ್ದ ಆರೋಪಿ ಆಸೀಫ್, ನಗರದಲ್ಲಿ ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದನು.ಇತ್ತೀಚೆಗೆ ಆರೋಪಿ ಮೆಜೆಸ್ಟಿಕ್‌ನಲ್ಲಿ ಆಟೋ ಓಡಿಸುತ್ತಿರುವ ಬಗ್ಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಿದ್ದಾರೆ.
ರಾಮನಗರ: ಹಣದ ಆಸೆಗೆ ಹೆತ್ತ ಮಗುವನ್ನೇ ಮಾರಿದ ತಾಯಿ!
ಹಲವು ಪ್ರಕರಣಗಳಲ್ಲಿ ಭಾಗಿ:
ಆರೋಪಿ ಆಸೀಫ್ ವಿರುದ್ಧ ಈ ಹಿಂದೆ ಕೆ.ಆರ್.ಮಾರುಕಟ್ಟೆ, ಜಯನಗರ, ಉಪ್ಪಾರಪೇಟೆ, ಕಪಾಸಿಪಾಳ್ಯ ಪೊಲೀಸ್ ಠಾಣೆಗಳಲ್ಲಿ ಬೈಕ್ ಕಳವು, ಸುಲಿಗೆ ಸೇರಿ ವಿವಿಧ ಅಪರಾಧ ಪ್ರಕರಣಗಳು ದಾಖಲಾಗಿವೆ. ಕೆಲ ಪ್ರಕರಣಗಳಲ್ಲಿ ಜಾಮೀನು ಪಡೆದುಕೊಂಡಿದ್ದ ಆರೋಪಿಯು ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಹೀಗಾಗಿ ಆ ಪ್ರಕರಣಗಳ ಸಂಬಂಧವೂ ಪೊಲೀಸರು ಆರೋಪಿ ಬಂಧನಕ್ಕಾಗಿ ಹುಡುಕಾಟದಲ್ಲಿ ನಿರತರಾಗಿದ್ದರು.
ಕೊಡಗು: ಗುಂಡು ಹಾರಿಸಿ ನಿರ್ವಾಹಕನಿಗೆ ಕೊಲೆ ಬೆದರಿಕೆ, ಕೆಎಸ್ಆರ್‌ಟಿಸಿ ಚಾಲಕ ಅರೆಸ್ಟ್
\Bಜಾಲಿ ರೈಡ್‌ಗೆ ಬೈಕ್ ಕಳವು: \Bಆರೋಪಿ ಆಸೀಫ್ ಈ ಹಿಂದೆ ಪ್ರೇಯಸಿಯರ ಜತೆಗೆ ಮೋಜು-ಮಸ್ತಿ, ಜಾಲಿ ರೈಡ್ ಕರೆದೊಯ್ಯಲು ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಬೈಕ್ ಕಳವು, ದರೋಡೆ, ಸುಲಿಗೆಯಂತ ಕೃತ್ಯಗಳಲ್ಲಿ ತೊಡಗಿದ್ದ. ಕದ್ದ ಬೈಕ್‌ನಲ್ಲಿ ಪ್ರೇಯಸಿಯರನ್ನು ಸುತ್ತಾಡಿಸಿ ಬಳಿಕ ಖಾಲಿ ಜಾಗಗಳಲ್ಲಿ ಆ ಬೈಕ್‌ಗಳನ್ನು ಬಿಟ್ಟು ಹೋಗುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.