ಚಂಡೀಘಡ  (ಏ. 16)  ಹೆಣ್ಣು ಮಗುವಿಗೆ ಜನ್ಮ ಕೊಟ್ಟಳು ಎಂಬ ಕಾರಣಕ್ಕೆ ಪತ್ನಿ ಮೇಲೆ ಆಸಿಡ್ ಎರಚಿದ್ದ ಪಾಪಿ ಪತಿಯ ಬಂಧನವಾಗಿದೆ.

ಮದುವೆಯಾಗಿ ದಂಪತಿಗೆ ಏಳು ವರ್ಷವಾಗಿದೆ. ಈಗಾಗಲೇ ಇಬ್ಬರು ಹೆಣ್ಣು ಮಕ್ಕಳು ಇದ್ದು ಗಂಡನಿಗೆ ಪುತ್ರ ಸಂತಾನ ಬೇಕಿತ್ತಂತೆ.  ಸುಟ್ಟ ಗಾಯಗಳಿಂದ ಗಂಭೀರ ಗಾಯಗೊಂಡಿರುವ ಮಹಿಳೆಯನ್ನು ರಾಜಪುರಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಲೆನಾಡ ನಿರ್ಭಯಾ.. ಹೆತ್ತ ತಾಯಿಯೇ ಹೀನ ಕೆಲಸ ಮಾಡಿದ್ದಳು

ಆರೋಪಿ ಹರ್ ವಿಂದರ್ ಸಿಂಗ್ ಮೇಲೆ  ಕೊಲೆಗೆ ಯತ್ನ ಆರೋಪದ ಅಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.  ಮಹೀಲೆ ದೂರು ಕೊಟ್ಟಿದ್ದಾರೆ. ಗಂಡ ಗಂಡು ಸಂತಾನ ಬೇಕೆಂದು ಪಟ್ಟು ಹಿಡಿದಿದ್ದ. ಇಬ್ಬರು ಹೆಣ್ಣು ಮಕ್ಕಳು ಜನಿಸಿದ್ದರೂ ತೊಂದರೆ  ಕೊಡುತ್ತಿದ್ದ ಎಂದು ಪತ್ನಿ ಆರೋಪಿಸಿದ್ದಾಳೆ.

ಉತ್ತರ ಪ್ರದೇಶ ಮತ್ತು ಬಿಹಾರದಿಂದ ಮಹಿಳಾ ದೌರ್ಜನ್ಯದ ಪ್ರಕರಣಗಳು ಮೇಲಿಂದ ಮೇಲೆ ವರದಿಯಾಗುತ್ತಿತ್ತು. ಆದರೆ   ಪಂಜಾಬ್ ನಿಂದಲೂ ಇಂಥದ್ದೊಂದು ಕರಾಳ ಘಟನೆ ವರದಿಯಾಗಿದೆ.