ಬಿಲಾಸ್‌ಪುರದಲ್ಲಿ ವ್ಯಕ್ತಿಯೊಬ್ಬ ತನ್ನೊಂದಿಗೆ ಮಾತಾನಾಡುವುದನ್ನು ನಿಲ್ಲಿಸಿದ್ದಕ್ಕಾಗಿ ಮಹಿಳೆಯೊಬ್ಬಳ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾನೆ.

ರಾಯ್‌ಪುರ (ಜೂ. 27): ವ್ಯಕ್ತಿಯೊಬ್ಬ ತನ್ನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ್ದಕ್ಕಾಗಿ ಯುವತಿ ಮೇಲೆ ಹಲ್ಲೆ ಮಾಡಿರುವ ಘಟನೆ ಛತ್ತೀಸ್‌ಗಢದಲ್ಲಿ ನಡೆದಿದೆ. ಯುವತಿಯನ್ನು ಭೇಟಿಯಾಗಲು ತನ್ನ ಹುಟ್ಟೂರಾದ ಚಿರ್ಮಿರಿಯಿಂದ ಬಿಲಾಸ್‌ಪುರಕ್ಕೆ ಪ್ರಯಾಣ ಬೆಳೆಸಿದ್ದ ಆರೋಪಿ, ಅಲ್ಲಿ ಆಕೆಯನ್ನು ಭೇಇಯಾಗಿ ಹಲ್ಲೆ ಮಾಡಿದ್ದಾನೆ. ಅಪರಾಧ ನಡೆದ ಸ್ಥಳದಿಂದ ಪರಾರಿಯಾಗುವ ಮೊದಲು ಆಕೆಯ ಮೊಬೈಲ್ ಫೋನ್ ಕೂಡ ಕದ್ದಿದ್ದಾನೆ. 20 ವರ್ಷದ ಯುವತಿ ಆರೋಪಿ ವಿರುದ್ಧ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಯುವತಿ ಕೂಡ ಚಿರ್ಮಿರಿ ಪಟ್ಟಣ ನಿವಾಸಿಯಾಗಿದ್ದು, ಅಲ್ಲಿ ಕೆಲಸ ಸಿಕ್ಕಿದ್ದರಿಂದ ತನ್ನ ಸಹೋದರಿಯೊಂದಿಗೆ ಬಿಲಾಸ್ಪುರಕ್ಕೆ ಸ್ಥಳಾಂತರಗೊಂಡಿದ್ದಳು.

ಯುವತಿ ಚಿರ್ಮಿರಿಯಲ್ಲಿ ವಾಸಿಸುತ್ತಿದ್ದಾಗ ಯುವಕನೊಂದಿಗೆ ಸ್ನೇಹ ಬೆಳೆಸಿದ್ದಳು ಅಲ್ಲದೇ ಅವರಿಬ್ಬರು ಸಾಂದರ್ಭಿಕವಾಗಿ ಮಾತನಾಡುತ್ತಿದ್ದರು. ಅವಳು ಅಲ್ಲಿ ತನ್ನ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ ಬಿಲಾಸ್‌ಪುರದಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸಿದಳು ಮತ್ತು ತನ್ನ ವೃತ್ತಿಜೀವನದ ಮೇಲೆ ಹೆಚ್ಚು ಪ್ರಾಮುಖ್ಯತೆ ನೀಡಳು ಪ್ರಾರಂಭಿಸಿದಳು. ಹೀಗಾಗಿ ಅವಳು ಆಕಾಶ್ ಸಾಹು ಎಂದು ಗುರುತಿಸಲಾದ ಆರೋಪಿಯೊಂದಿಗೆ ಮಾತನಾಡುವುದನ್ನು ನಿಲ್ಲಿಸಿದಳು ಎಂದು ಭಾಸ್ಕರ್ ವರದಿ ತಿಳಿಸಿದೆ. 

ಇದನ್ನೂ ಓದಿ: ಅಮೆರಿಕದಲ್ಲಿ ಭಾರತ ಮೂಲದ ವ್ಯಕ್ತಿಯ ಕೊಲೆ: ಕಾರಿನಲ್ಲಿ ಕುಳಿತಿದ್ದವನ ಮೇಲೆ ಗುಂಡಿನ ದಾಳಿ

ಭಾನುವಾರ ಬೆಳಿಗ್ಗೆ 11:30 ರ ಸುಮಾರಿಗೆ ಈ ಬಗ್ಗೆ ಯುವತಿ ಪೊಲೀಸರಿಗೆ ತಿಳಿಸಿದ್ದು, ಆರೋಪಿಯು ತನ್ನ ಬಾಡಿಗೆ ನಿವಾಸಕ್ಕೆ ಆಗಮಿಸಿ ವಾಗ್ವಾದ ನಡೆಸಿದ್ದಾನೆ. ಆಕೆ ತನ್ನೊಂದಿಗೆ ಮಾತನಾಡಲು ನಿರಾಕರಿಸಿದಾಗ ಸಿಟ್ಟಿಗೆದ್ದ ಆತ ಆಕೆಯ ಮೊಬೈಲ್ ಕಸಿದುಕೊಂಡಿದ್ದಾನೆ. ತನ್ನ ಫೋನ್ ಹಿಂತಿರುಗಿಸಲು ಅವಳು ಕೇಳಿದಾಗ, ಅವನು ಅವಳ ಮೇಲೆ ರೇಗಿದ್ದಾನೆ, ಅಲ್ಲದೇ ಅವಳನ್ನು ಮನೆಯಿಂದ ಹೊರಹಾಕುತ್ತೇನೆ ಎಂದು ಹೇಳಿದ್ದಾನೆ.

ನಂತರ ಆಕೆಯನ್ನು ಸಾಯಿಸುವುದಾಗಿ ಬೆದರಿಸಿ ಚಾಕು ತೆಗೆದು ಆಕೆಯ ಕೈಯನ್ನು ಕತ್ತರಿಸಿದ್ದಾನೆ. ಅಷ್ಟರಲ್ಲಿ ಆಕೆಯ ತಂಗಿ ಕೂಡ ಗಲಾಟೆ ಕೇಳಿ ಹೊರಗೆ ಬಂದು ನೋಡಿದಾಗ ಸಂತ್ರಸ್ತೆ ಕೈಯಿಂದ ರಕ್ತಸ್ರಾವವಾಗುತಿತ್ತು. ಈ ನಡುವೆ ಆರೋಪಿ ಮೊಬೈಲ್‌ ಸಮೇತ ಪರಾರಿಯಾಗಿದ್ದ. ಸದ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಮುದುವರೆಸಿದ್ದಾರೆ.