ಹರ್ಯಾಣ(ಆ.01): ಕೊರೋನಾತಂಕ ನಡುವೆಯೂ ದೇಶಾದ್ಯಂತ ಅತ್ಯಾಚಾರ ಪ್ರಕರಣಗಳು ಸದ್ದು ಮಾಡುತ್ತಿವೆ. ಹರ್ಯಾಣದ ಪಲ್ವಲ್ ಜಿಲ್ಲೆಯಲ್ಲಿ ಒಂದಾದ ಬಳಿಕ ಮತ್ತೊಂದರಂತೆ ಪಗ್ರಕರಣಗಳು ಬೆಳಕಿಗೆ ಬರಲಾರಂಭಿಸಿವೆ. ಸದ್ಯ ಇಲ್ಲಿನ ಹಥೀನ್ ಹಳ್ಳಿಯಲ್ಲಿ ಹೊಸ ಪಗ್ರಕರಣ ದಾಖಲಾಗಿದ್ದು, ವಿಧವೆ ಮಹಿಳೆ ಮೇಲೆ ಖುದ್ದು ಮೈದುನನೇ ಅತ್ಯಾಚಾರ ಮಾಡಿದ್ದಾನೆ. ಸಂತ್ರಸ್ತೆ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

7 ವರ್ಷದ ಮಗಳ ಮೇಲೆ ಅತ್ಯಾಚಾರ ಮಾಡಿದವನನ್ನು ಹೊಡೆದು ಕೊಂದ ಪೋಷಕರು

ಅತ್ತಿಗೆ ಹಾಗೂ ಮೈದುನನ ನಡುವಿನ ಸಂಬಂಧ ಅದೆಷ್ಟು ಪವಿತ್ರ ಎಂಬುವುದನ್ನು ರಾಮಾಯಣವೇ ತಿಳಿಸಿ ಕೊಟ್ಟಿದೆ. ಇಲ್ಲಿ ಸೀತೆ ಹಾಗೂ ಲಕ್ಷ್ಮಣನ ರೂಪದಲ್ಲಿ ಈ ಸಂಬಂಧದ ಮತ್ವವನ್ನು ತೋರಿಸಿಕೊಡಲಾಗಿದೆ. ಆದರೆ ಹಥೀನ್ ಗ್ರಾಮದಲ್ಲಿ ನಡೆದ ಘಟನೆ ಈ ಸಂಬಂಧವನ್ನು ಛಿದ್ರ ಛಿದ್ರಗೊಳಿಸಿದೆ. ಅತ್ತಿಗೆ ಏಕಾಂಗಿಯಾಗಿರುವ ಸಮಯವನ್ನು ನೋಡಿ ಆಕೆಯ ಮೇಲೆರಗುತ್ತಿದ್ದ ಮೈದುನ ಅನೇಕ ಬಾರಿ ಆಕೆಯನ್ನು ಅತ್ಯಾಚಾರ ಗೈದಿದ್ದ. 

ಜೂನ್ 2ರಂದು ರಾತ್ರಿ ಮಲಗಿದ್ದ ವೇಳೆ ಸುಮಾರು 2 ಗಂಟೆಗೆ ಅತ್ತಿಗೆ ಕೋಣೆಗೆ ಪ್ರವೇಶಿಸಿದ್ದ ಈ ಚಾಲಾಕಿ ಮತ್ತೆ ಅತ್ತಿಗೆಯನ್ನು ರೇಪ್ ಮಾಲು ಯತ್ನಿಸಿದ್ದ. ಈ ವೇಳೆ ಮಹಿಳೆ ಜೋರಾಗಿ ಕಿರುಚಾಡಿದ್ದಾಳೆ. ಕೂಡಲೇ ಮೈದುನ ಅಲ್ಲಿಂದ ಪರಾರಿಯಾಗಿದ್ದಾನೆ. ಕೂಡಲೇ ಮಹಿಳೆ ದೂರ ನೀಡಿದ್ದು, ಪೊಲೀಸರು ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದಾರೆ.