ಮಂಡ್ಯ(ಆ.01): ತಾಲೂಕಿನ ಎಸ್‌.ಐ.ಕೋಡಿಹಳ್ಳಿ ಗ್ರಾಮದಲ್ಲಿ 7 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಯುವಕನನ್ನು ಬಾಲಕಿಯ ಪೋಷಕರು ಹೊಡೆದು ಕೊಲೆ ಮಾ​ಡಿರುವ ಘಟನೆ ಬೆಳಕಿಗೆ ಬಂದಿದೆ.

ಎಸ್‌.ಐ.ಕೋಡಿಹಳ್ಳಿ ನಿವಾಸಿ ಭೈರಪ್ಪ (30) ಕೊಲೆಯಾದ ಯುವಕ. ಈತ ಅದೇ ಗ್ರಾಮದ 7 ವರ್ಷದ ಬಾಲಕಿಯನ್ನು ಜು.29ರಂದು ಮ​ಧ್ಯಾಹ್ನ ಚಾಕೋಲೇಟ್‌ ಆಮಿಷವೊಡ್ಡಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ.

ಲಾಡ್ಜ್‌ನಲ್ಲಿ ಕೂಡಿ ಹಾಕಿ ಬಾಲಕಿಯ ಅತ್ಯಾಚಾರ: ಆರೋಪಿಗೆ 12 ವರ್ಷ ಜೈಲು

ಆಕ್ರೋಶಗೊಂಡ ಬಾಲಕಿಯರ ಪೋಷಕರು ಅದೇ ದಿನ ಸಂಜೆ ವೇಳೆಗೆ ಆತನನ್ನು ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಅ​ತ್ಯಾ​ಚಾ​ರ​ವೆ​ಸ​ಗಿದ ವ್ಯ​ಕ್ತಿಗೆ ಕೈಗಳಿಂದ ಹೊಡೆದು, ಕಾಲುಗಳಿಂದ ಒದ್ದಿರುವ ಪೆಟ್ಟಿಗೆ ಆರೋಪಿ ಭೈರಪ್ಪ ತೀವ್ರ ಅಸ್ವಸ್ಥಗೊಂಡಿದ್ದು, ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಹೀಗಾಗಿ ಗುರುವಾರವೇ ಮೃತನ ಅಂತ್ಯಕ್ರಿಯೆಯೂ ನೆರವೇರಿದೆ.

ಖಿನ್ನತೆಗೊಳಗಾಗಿದ್ದ ಮಗ ಹೆತ್ತಮ್ಮನ ಇರಿದು ಕೊಂದ..!

ಘಟನೆ ಹಿನ್ನೆಲೆಯಲ್ಲಿ ಕೆರೆಗೋಡು ಪೊಲೀಸರು ಬಾಲಕಿಯ ಮೂವರು ಸಂಬಂ​ಧಿಕರನ್ನು ಬಂ​ಧಿಸಿ, ನ್ಯಾಯಾಂಗ ವಶಕ್ಕೆ ನೀಡಿದ್ದಾರೆ. ಬಾಲಕಿ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯದ ಹಿನ್ನೆಲೆಯಲ್ಲಿ ಕೆರೆಗೋಡು ಠಾಣೆಯಲ್ಲಿ ಪೋಕ್ಸೋ ಕಾಯಿದೆಯಡಿ ಮತ್ತೊಂದು ದೂರು ದಾಖಲಾಗಿದೆ.