Asianet Suvarna News Asianet Suvarna News

ಸಂಸದ ಪ್ರಜ್ವಲ್‌ನಿಂದ 16ರಿಂದ 50 ವರ್ಷದ 300ಕ್ಕೂ ಅಧಿಕ ‌ಮಹಿಳೆಯರ ಮೇಲೆ ಅತ್ಯಾಚಾರ; ಲಕ್ಷ್ಮೀ ಹೆಬ್ಬಾಳ್ಕರ್ ಆಕ್ರೋಶ

ಹಾಸನದ  ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಅಧಿಕಾರ ದುರುಪಯೋಗ ಮಾಡಿಕೊಂಡು 16ರಿಂದ 50 ವರ್ಷ ವಯಸ್ಸಿನ ‌300ಕ್ಕೂ ಅಧಿಕ ಮಹಿಳೆಯರ ಮೇಲೆ ನಡೆದ ನೀಚ ಕೃತ್ಯ ಎಸಗಿದ್ದಾರೆ. ದಯವಿಟ್ಟು ಯಾರೂ ವಿಡಿಯೋ ಶೇರ್ ಮಾಡಬೇಡಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮನವಿ ಮಾಡಿದ್ದಾರೆ.

Hassan MP Prajwal revanna harassed more than three hundred women says minister Laxmi hebbalkar sat
Author
First Published Apr 29, 2024, 11:48 AM IST

ಬೆಳಗಾವಿ (ಏ.29): ರಾಜ್ಯದಲ್ಲಿ ಕೆಲ ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಪ್ರಜ್ವಲ್ ರೇವಣ್ಣ ವಿಡಿಯೋ ಹರಿದಾಡುತ್ತಿವೆ. ಹಾಸನದ  ಹಾಲಿ ಸಂಸದರಾಗಿದ್ದು, ಅಧಿಕಾರ ದುರುಪಯೋಗ ಆಗಿದೆ. 16ರಿಂದ 50 ವರ್ಷ ವಯಸ್ಸಿನ ‌300ಕ್ಕೂ ಅಧಿಕ ಮಹಿಳೆಯರ ಮೇಲೆ ನಡೆದ ನೀಚ ಕೃತ್ಯವನ್ನು ಬಿಜೆಪಿಗರು ಖಂಡಿಸುತ್ತಿಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.

ಬೆಳಗಾವಿಯಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ರಾಜಕಾರಣ, ದೇಶದ ರಾಜಕಾರಣ ತಲೆ ತಗ್ಗಿಸುವ ಘಟನೆ ಇದು. ನಾಗರಿಕ ಸಮಾಜ ತಲೆ ತಗ್ಗಿಸುವ ಕೆಲಸ ನಮ್ಮ ರಾಜ್ಯದಲ್ಲಿ ಆಗಿದ್ದು ಖೇದಕರ. ಕೆಲ ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಪ್ರಜ್ವಲ್ ರೇವಣ್ಣ ವಿಡಿಯೋ ಹರಿದಾಡುತ್ತಿವೆ. ಈ ಎಲ್ಲ ವಿಚಾರಗಳನ್ನು ಹಾಸನ ಬಿಜೆಪಿ ಮುಖಂಡ ದೇವರಾಜಗೌಡ ವಿಜಯೇಂದ್ರ ಗಮನಕ್ಕೆ ತಂದಿದ್ದರು. ಡಿಸೆಂಬರ್ ‌ಸಮಯದಲ್ಲೇ ದೇವರಾಜಗೌಡ ಅವರು ವಿಜಯೇಂದ್ರ ಗಮನಕ್ಕೆ ತಂದಿದ್ದರು. ಈ ಎಲ್ಲ ವಿಚಾರಗಳು ಗೊತ್ತಿದ್ದರೂ ರಾಜಕೀಯ ‌ಲಾಭಕ್ಕಾಗಿ ಜೆಡಿಎಸ್ ಜೊತೆಗೆ ಬಿಜೆಪಿ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಹೇಳಿದರು.

Hassan Sex Scandal: HD ರೇವಣ್ಣ ಎ1 , ಪ್ರಜ್ವಲ್ ಎ2 ಆರೋಪಿ, ಪಿನ್‌ ಟು ಪಿನ್‌ ಕಥೆ ಹೇಳಿದ ಸಂತ್ರಸ್ಥೆ!

ಮಾಜಿ ಶಾಸಕ ಪ್ರೀತಂಗೌಡ ಕೂಡ ಈ ಎಲ್ಲ ವಿಚಾರಗಳನ್ನು ಅಮಿತ್ ಶಾ ಗಮನಕ್ಕೆ ತಂದಿದ್ದರು. ಪ್ರಜ್ವಲ ರೇವಣ್ಣ ಹಾಸನದ  ಹಾಲಿ ಸಂಸದರಾಗಿದ್ದು, ಅವರು ಅಧಿಕಾರ ದುರುಪಯೋಗವಾಗಿದೆ. ಅಧಿಕಾರ ದರ್ಪ, ಆಸೆ ಆಮೀಷ ತೋರಿಸಿ ನೂರಾರು ಮಹಿಳೆಯರನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ವಿಡಿಯೋ ನೋಡಿದ್ರೆ ಮಹಿಳೆಯರ ಜೀವಂತ ಕೊಲೆ ಆಗಿದೆ ಅನಿಸುತ್ತದೆ. ವಿಡಿಯೋ ಶೇರ್ ಮಾಡಲು ಹೋಗಬೇಡಿ, ಸಮಾಜದ ಸ್ವಾಸ್ಥ್ಯ ಕೆಡಿಸುತ್ತದೆ. ಜಗದೀಶ್ ಶೆಟ್ಟರ್ ಅವರು ಪ್ರತಿಪಕ್ಷ ನಾಯಕರಾಗಿಯೂ ಬಹಳಷ್ಟು ಹೋರಾಟ ಮಾಡಿದವರು. ಶೆಟ್ಟರ್ ಹೋರಾಟಕ್ಕೆ ತೋರಿದ ಆಸಕ್ತಿಯನ್ನು ಪ್ರಜ್ವಲ ರೇವಣ್ಣ ವಿರುದ್ಧ ಹೋರಾಟಕ್ಕೆ ತೋರುತ್ತಿಲ್ಲ. ಮಾಜಿ ಶಾಸಕ ಸಂಜಯ್ ಪಾಟೀಲ ನನ್ನ ವಿರುದ್ಧ ಮಾತನಾಡಿದಾಗ ಶೆಟ್ಟರ್, ಮಂಗಳಾ ಅಂಗಡಿ ತಲೆ ಅಲ್ಲಾಡಿಸಿ ನಕ್ಕರು. ಪ್ರಜ್ವಲ್ ರೇವಣ್ಣನ ನೀಚಕೃತ್ಯವನ್ನು ಮಾಜಿ ಶಾಸಕ ಸಂಜಯ್ ಪಾಟೀಲ ಏಕೆ ‌ಖಂಡಿಸುತ್ತಿಲ್ಲ. ಇದೆಯೇ ಬಿಜೆಪಿಯ ಸಭ್ಯತೆ, ಇದೆನಾ ಬಿಜೆಪಿಯ ಸಂಸ್ಕೃತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಜಯೇಂದ್ರ, ಅಶೋಕಣ್ಣ ತಮ್ಮ ಪೊಲಿಟಿಕಲ್ ಸ್ಟ್ಯಾಂಡ್ ಏನು ಹೇಳಬೇಕು. 300 ಕ್ಕೂ ಅಧಿಕ ಮಹಿಳೆಯರ ಮೇಲೆ ನಡೆ ನೀಚ ಕೃತ್ಯವನ್ನು ಖಂಡಿಸುತ್ತಿಲ್ಲ. ಶೋಭಾ ಕರಂದ್ಲಾಜೆ, ಸ್ಮೃತಿ ಇರಾನಿ ಈ ಬಗ್ಗೆ ಮಾತನಾಡುತ್ತಿಲ್ಲ. ಬೆಳಗಾವಿಗೆ ಬಂದ ಗೌರವಾನ್ವಿತ ಪ್ರಧಾನಿ ಕೂಡ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ. ರಾಜಕೀಯ ಲಾಭಕ್ಕಾಗಿ ಬೇಟಿ ಬಚಾವೋ, ಭೇಟಿ ಪಡಾವೋ ಎನ್ನುತ್ತಿದ್ದಿರಾ? ಮಹಿಳೆಯರ ಬಗ್ಗೆ ಬಿಜೆಪಿಗೆ ನಿಜವಾಗಲೂ ಗೌರವ ಇದ್ದಿದ್ದರೆ ಈ ಕೃತ್ಯ ಖಂಡಿಸಬೇಕಿತ್ತು. ಪ್ರಜ್ವಲ್ ರೇವಣ್ಣ ಮಹಿಳಾ‌ಪೀಡಕ ಎಂಬುದು ಗೊತ್ತಿದ್ರೂ ಬಿಜೆಪಿಯವರು ಪ್ರೊಟೆಕ್ಟ್ ಆಗಬೇಕು ಎಂದು ಹೇಳಿದರು.

ನನಗೆ ವಿದೇಶದಿಂದ ಹಲವು ಮಹಿಳೆಯರು ಫೋನ್ ಮಾಡಿ ಕೇಳ್ತಿದ್ದಾರೆ. ಮಹಿಳೆಯರ ಮಾಂಗಲ್ಯ ಕಿತ್ತುಕೊಳ್ತಾರೆ ಎಂದು ಪ್ರಧಾನಿ ಮೋದಿ ಭಾಷಣ ಮಾಡ್ತಿದ್ದಾರೆ. ಆದರೆ ಪ್ರಜ್ವಲ್ ರೇವಣ್ಣ ನೂರಾರು ಮಹಿಳೆಯರಿಗೆ ಅನ್ಯಾಯ ಮಾಡಿದ್ದಾರೆ, ಆ‌ ಮಹಿಳೆಯರ ಮಾಂಗಲ್ಯ ಗತಿ ಏನು? ಪ್ರಜ್ವಲ್ ರೇವಣ್ಣ ಪ್ರಕರಣದದ ಬಗ್ಗೆ ಪ್ರಧಾನಿ ಮೋದಿ, ಬಿಎಸ್‌ವೈ, ವಿಜಯೇಂದ್ರ ಸ್ಟ್ಯಾಂಡ್ ಏನು? ಈ ಪ್ರಕರಣದಿಂದ ಬಿಜೆಪಿ ನಾಯಕರ ಮುಖವಾಡ ಕಳಚಿಬೀಳುತ್ತದೆ ಎಂದು ಆಕ್ರೋಶ ಹೊರ ಹಾಕಿದರು.

ಹಾಸನ ಅಶ್ಲೀಲ ವಿಡಿಯೋ ಎಸ್‌ಐಟಿಗೆ, ನಾನಾಗಲಿ-ದೇವೇಗೌಡರಾಗಲಿ ಈ ರೀತಿಯ ಕೆಲಸ ಮಾಡಿಲ್ಲ ಎಂದ ಹೆಚ್‌ಡಿಕೆ

ನಮ್ಮ ಇಲಾಖೆಯೂ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಇಂಟರ್ ಪೋಲ್ ಬಳಸಿ ಆರೋಪಿ ಪ್ರಜ್ವಲ್‌ನನ್ನು ಅರೆಸ್ಟ್ ಮಾಡಿ ಎಂದು ಕೇಂದ್ರಕ್ಕೆ ಹೆಬ್ಬಾಳ್ಕರ್ ಆಗ್ರಹ ಮಾಡಲಾಗಿದೆ. ಹುಬ್ಬಳ್ಳಿ ನೇಹಾ ಹತ್ಯೆ ಖಂಡಿಸಿದ ಶೆಟ್ಟರ್, ಮಂಗಳಾ ಅಂಗಡಿ ಈ ವಿಚಾರದಲ್ಲಿ ಏಕೆ ಮೌನವಹಿಸಿದ್ದಾರೆ. ನಿಮ್ಮ ಮೈತ್ರಿ ಅಭ್ಯರ್ಥಿಯ ವರ್ತನೆಯನ್ನು ‌ಖಂಡಿಸಬೇಕು. 16 ವರ್ಷದಿಂದ 50 ವರ್ಷ ವಯಸ್ಸಿನ ‌ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಆಗಿದೆ. ನೊಂದವರ, ಸಂತ್ರಸ್ತರ ಪರವಾಗಿ ನಾನು ಓರ್ವ ಮಹಿಳೆಯಾಗಿ, ಸಚಿವೆಯಾಗಿ ನಿಲ್ಲುವೆ ಎಂದು ಹೇಳಿದರು.

Latest Videos
Follow Us:
Download App:
  • android
  • ios