ಲಕ್ನೋ(ಡಿ. 29) ಹೆಣ್ಣಿನ ಮೇಲಿನ ಶೋಷಣೆಗೆ ಮಾತ್ರ ಕೊನೆ ಇಲ್ಲ. ಮದುವೆಯಾಗಿ ಮೂರು ವರ್ಷವಾದರೂ ಮಗು ಹೆರಲಿಲ್ಲ ಎಂಬ ಕಾರಣಕ್ಕೆ ಪಾಪಿ ಪತಿ ಹೆಂಡತಿಯನ್ನು ಹತ್ಯೆ ಮಾಡಿದ್ದಾನೆ.

ವರದಕ್ಷಿಣೆ ಕಿರುಕುಳವನ್ನು ನೀಡುತ್ತಿದ್ದ ಪತಿರಾಯ ಹೀನ ಕೆಲಸ ಮಾಡಿದ್ದಾನೆ. ಉತ್ತರ ಪ್ರದೇಶ ಬಿಜ್ನೋರ್ ಮುಕಾರ್ಪುರಿ ನಿವಾಸಿ ರೋಹಿತ್ ಕುಮಾರ್ ಮೂರು ವರ್ಷದ ಹಿಂದೆ ಪ್ರೀತಿ  ಎಂಬಾಕೆಯನ್ನು ಮದುವೆಯಾಗಿದ್ದ.

ಪ್ರವಾಸಕ್ಕೆ ಬಂದ ಹದಿನೆಂಟರ ಯುವತಿ ಮೇಲೆ ಎರಗಿದ ಆಟೋ ಚಾಲಕ

ಮದುವೆಯಾದ ಮೇಲೆ ಗಂಡನ ಕುಟುಂಬದವರು ಯುವತಿಗೆ ಪ್ರತಿದಿನ ಕಿರುಕುಳ ನೀಡಲು ಆರಂಭಿಸಿದ್ದಾರೆ.  ಮೂರು ವರ್ಷವಾದರೂ ಗರ್ಭ ಧರಿಸಲು ಸಾಧ್ಯವಾಗಿರಲಿಲ್ಲ.

ಗಂಡ ಮತ್ತು ಕುಟುಂದವರು ಆಖೆಯನ್ನು ಹತ್ಯೆ ಮಾಡಿ ನೇಣು ಹಾಕಿಕೊಂಡಿದ್ದಾಳೆ ಎಂದು ಬಿಂಬಿಸುವ ಪ್ರಯತ್ನ ಮಾಡಿದ್ದರು. ಆದರೆ ಪೊಲೀಸರ ತನಿಖೆಯಲ್ಲಿ ಎಲ್ಲವೂ ಬಯಲಾಗಿದೆ.